alex Certify ಏನಿದು ನಿಯೋಕೋವ್​ ವೈರಸ್..​..? ಇದು ಕೋವಿಡ್​ನ ಮತ್ತೊಂದು ರೂಪಾಂತರವೇ….? ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏನಿದು ನಿಯೋಕೋವ್​ ವೈರಸ್..​..? ಇದು ಕೋವಿಡ್​ನ ಮತ್ತೊಂದು ರೂಪಾಂತರವೇ….? ಇಲ್ಲಿದೆ ಸಂಪೂರ್ಣ ಮಾಹಿತಿ

ಜಗತ್ತು ಇನ್ನೂ ಕೋವಿಡ್​ 19 ಹಾಗೂ ಅದರ ರೂಪಾಂತರಗಳ ವಿರುದ್ಧ ಹೋರಾಟದಲ್ಲಿಯೇ ಇರುವ ನಡುವೆಯೇ ವುಹಾನ್​​ನ ವಿಜ್ಞಾನಿಗಳು ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್​ಗಿಂತಲೂ ಹೆಚ್ಚು ಮಾರಣಾಂತಿಕ ವೈರಸ್​ ಇರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ನಿಯೋಕೋವ್​ ಎಂಬ ಹೆಸರಿನ ಈ ವೈರಸ್​ ಮಧ್ಯಪ್ರಾಚ್ಯ ದೇಶಗಳಲ್ಲಿ ಕಾಣಿಸಿಕೊಂಡಿದೆ. ಇದರ ಲಕ್ಷಣಗಳು ಕೋವಿಡ್​ಗೆ ಸಂಬಂಧಿಸಿದ್ದು, ಹರಡುವಿಕೆ ಪ್ರಮಾಣ ಹಾಗೂ ಮರಣ ಪ್ರಮಾಣ ಕೋವಿಡ್​ಗಿಂತಲೂ ಹೆಚ್ಚಿರುತ್ತದೆ ಎಂದು ಅಂದಾಜಿಸಲಾಗಿದೆ. ನಿಯೋಕೋವ್​ ಮೂವರಲ್ಲಿ ಒಬ್ಬರ ಸಾವಿಗೆ ಕಾರಣವಾಗುತ್ತದೆ ಎಂದು ಅಂದಾಜಿಸಲಾಗಿದೆ.

ನಿಯೋಕೋವ್​ ಎಂದರೇನು..?

ಈ ವೈರಸ್​ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ. ಅಂದ ಹಾಗೆ ಇದು ಹೊಸ ವೈರಸ್​ ಏನಲ್ಲ. ಇದನ್ನು ಮೊದಲು ಸೌದಿ ಅರೇಬಿಯಾದಲ್ಲಿ 2012ರಲ್ಲಿ ಗುರುತಿಸಲಾಯ್ತು. ಸಂಶೋಧನೆಯ ಪ್ರಕಾರ ನಿಯೋಕೋವ್​ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿರಲಿದೆ ಹಾಗೂ ಕೋವಿಡ್​ಗಿಂತಲೂ ವೇಗವಾಗಿ ಹರಡುತ್ತದೆ ಎಂದು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ಇದು ಸಾಮಾನ್ಯ ಶೀತ ಹಾಗೂ ತೀವ್ರ ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಲಕ್ಷಣಗಳನ್ನು ಹೊಂದಿದೆ ಎನ್ನಲಾಗಿದೆ. ವುಹಾನ್​ ವಿಶ್ವವಿದ್ಯಾಲಯ ಹಾಗೂ ಚೈನೀಸ್​ ಅಕಾಡೆಮಿ ಆಫ್​ ಸೈನ್ಸ್​ ಇನ್​ಸ್ಟಿಟ್ಯೂಟ್​ ಆಫ್​ ಬಯೋಫಿಕ್ಸ್​​ನ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ನಿಯೋಕೋವ್​ ದಕ್ಷಿಣ ಆಫ್ರಿಕಾದಲ್ಲಿ ಬಾವಲಿಗಳಲ್ಲಿ ಕಂಡುಬಂದಿದೆ ಎನ್ನಲಾಗಿದೆ.

ಇದು ಕೋವಿಡ್​ 19 ಹೊಸ ರೂಪಾಂತರವೇ..?

ಇಲ್ಲ, ನಿಯೋಕೋವ್​ ಕೋವಿಡ್​ 19 ಹೊಸ ರೂಪಾಂತರವಲ್ಲ. ಇದು ಪ್ರತ್ಯೇಕ ವೈರಸ್​ ಆಗಿದೆ. ಇದನ್ನು ಮೊಟ್ಟ ಮೊದಲ ಬಾರಿಗೆ 2012ರಲ್ಲಿ ವರದಿ ಮಾಡಲಾಗಿದೆ. ಇದಾದ ಬಳಿಕ 2015ರಲ್ಲಿ ಈ ವೈರಸ್​ ಕಾಣಿಸಿಕೊಂಡಿದೆ. ಡೆಲ್ಟಾ ಹಾಗೂ ಓಮಿಕ್ರಾನ್​​ನಂತೆ ಕೋವಿಡ್​ ರೂಪಾಂತರವಲ್ಲ. ಆದರೆ ಇದು ಕೋವಿಡ್​ನಂತೆಯೇ ಲಕ್ಷಣಗಳನ್ನು ಹೊಂದಿರುವ ವೈರಸ್​ ಆಗಿದೆ. ಇದನ್ನು ಮತ್ತೊಂದು ರೀತಿಯ ಕೊರೊನಾ ವೈರಸ್​ ಎನ್ನಬಹುದು.

ಮನುಷ್ಯರ ಮೇಲೆ ನಿಯೋಕೋವ್​ ಪರಿಣಾಮವೇನು..?

ಇಲ್ಲಿಯವರೆಗೆ ವೈರಸ್​ ಬಾವಲಿಗಳಲ್ಲಿ ಮಾತ್ರ ಕಂಡುಬಂದಿದೆ. ಆದರೆ ರಷ್ಯಾದ ನ್ಯೂಸ್​​ ಪೋರ್ಟಲ್​ ಸ್ಪುಟ್ನಿಕ್​ನಲ್ಲಿ ಪ್ರಕಟವಾದ ವರದಿಯ ಪ್ರಕಾರ ನಿಯೋಕೋವ್​ ಕೋವಿಡ್ 19ನಂತೆಯೇ ಮನುಷ್ಯರಿಗೆ ತಗುಲುವ ಸಾಧ್ಯತೆ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...