alex Certify ಎಲೆಕ್ಷನ್ ಹೊತ್ತಲ್ಲೇ ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ ಅಮರೀಂದರ್ ಸಿಂಗ್; ಸರ್ಕಾರದಲ್ಲಿ ಸಿಧು ಸೇರ್ಪಡೆಗೆ ಪಾಕ್ ನಿಂದ ಬಂದಿತ್ತು ಕರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಷನ್ ಹೊತ್ತಲ್ಲೇ ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ ಅಮರೀಂದರ್ ಸಿಂಗ್; ಸರ್ಕಾರದಲ್ಲಿ ಸಿಧು ಸೇರ್ಪಡೆಗೆ ಪಾಕ್ ನಿಂದ ಬಂದಿತ್ತು ಕರೆ

ಪಂಜಾಬ್​​ನ ಮಾಜಿ ಸಿಎಂ ಅಮರೀಂದರ್​ ಸಿಂಗ್​​ ನವಜೋತ್​ ಸಿಂಗ್​ ಸಿಧು ವಿಚಾರದಲ್ಲಿ ಹೊಸದೊಂದು ಬಾಂಬ್​ ಸಿಡಿಸಿದ್ದಾರೆ. ಪಾಕಿಸ್ತಾನ ಪ್ರಧಾನಿಗೆ ನವಜೋತ್​ ಸಿಂಗ್​ ಸಿಧು ಹಳೆಯ ಸ್ನೇಹಿತರಿದ್ದು, ಹೀಗಾಗಿ ನಮ್ಮ ಸರ್ಕಾರದಲ್ಲಿ ನವಜೋತ್​ ಸಿಂಗ್​ ಸಿಧುರನ್ನು ಮರುಸೇರ್ಪಡೆ ಮಾಡುವಂತೆ ನನಗೆ ಪಾಕ್​ನಿಂದ ಸಂದೇಶ ಬಂದಿತ್ತು ಎಂದು ಹೇಳಿದ್ದಾರೆ.

ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿರುವ ಕ್ಯಾಪ್ಟನ್​ ಅಮರೀಂದರ್​ ಸಿಂಗ್​​ ಹೊಸದೊಂದು ಪಕ್ಷವನ್ನು ಸ್ಥಾಪಿಸಿದ್ದು, ಈ ಚುನಾವಣೆಯನ್ನು ಬಿಜೆಪಿಯೊಂದಿಗಿನ ಮೈತ್ರಿಯ ಜೊತೆಯಲ್ಲಿ ಎದುರಿಸುತ್ತಿದ್ದಾರೆ. ಇಂದು ಸಿಧು ವಿಚಾರವಾಗಿ ಮಾತನಾಡಿದ ಅವರು, ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್​​ ಖಾನ್,​​ ಸಿಧು ಅವರನ್ನು ನಿಮ್ಮ ಸರ್ಕಾರದಲ್ಲಿ ಇಟ್ಟುಕೊಂಡರೆ ನನಗೆ ಖುಷಿಯಾಗುತ್ತದೆ ಎಂದು ಹೇಳಿದ್ದರು ಅಂತಾ ಬಾಂಬ್​ ಸಿಡಿಸಿದ್ದಾರೆ.

ನನ್ನ ಸರ್ಕಾರದಿಂದ ನವಜೋತ್​ ಸಿಂಗ್​ ಸಿಧುವನ್ನು ಕೈಬಿಟ್ಟ ಬಳಿಕ, ನನಗೆ ಪಾಕಿಸ್ತಾನದಿಂದ ಸಂದೇಶವೊಂದು ಬಂದಿತ್ತು. ನವಜೋತ್​ ಸಿಂಗ್​ ಸಿಧು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ರ ಹಳೆಯ ಸ್ನೇಹಿತರಾಗಿದ್ದಾರೆ. ಹೀಗಾಗಿ ನೀವು ಅವರನ್ನು ನಿಮ್ಮ ಸರ್ಕಾರದಲ್ಲಿಯೇ ಇಟ್ಟುಕೊಂಡರೆ ನನಗೆ ನಿಜಕ್ಕೂ ಸಂತಸವಾಗುತ್ತದೆ. ಸಿಧು ಏನೂ ಕೆಲಸವನ್ನು ಮಾಡಿಲ್ಲವೆಂದರೆ ನೀವು ಅವರನ್ನು ಪಕ್ಷದಿಂದ ತೆಗೆದು ಹಾಕಬಹುದು ಎಂದು ಹೇಳಿದ್ದರು ಎಂದು ಬಿಜೆಪಿ ಪ್ರಧಾನಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯ ವೇಳೆಯಲ್ಲಿ ಅಮರೀಂದರ್​ ಸಿಂಗ್​ ಹೇಳಿದ್ದಾರೆ.

ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಪಂಜಾಬ್​ನ ಸಿಎಂ ಆಗಿದ್ದ ವೇಳೆಯಲ್ಲಿ ತಮ್ಮ ಸರ್ಕಾರದಿಂದ ನವಜೋತ್​ ಸಿಂಗ್​ ಸಿಧು ಕೈ ಬಿಟ್ಟಿದ್ದರು. ಕ್ರಿಕೆಟರ್​ ಕಮ್​ ರಾಜಕಾರಣಿ ನವಜೋತ್​ ಸಿಂಗ್​ ಸಿಧು ಜೊತೆಯಲ್ಲಿ ಕ್ಯಾಪ್ಟನ್​​ಗೆ ಅಂತಹ ಒಳ್ಳೆಯ ಸಂಬಂಧ ಮೊದಲಿನಿಂದಲೂ ಇರಲಿಲ್ಲ ಎಂಬುದನ್ನು ನಾವಿಲ್ಲಿ ಜ್ಞಾಪಿಸಿಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...