alex Certify ಋತುಚಕ್ರದ ಸಮಯದಲ್ಲಿನ ಆ ಸುಸ್ತಿಗೂ ಇದೆ ʼಮನೆ ಮದ್ದುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಋತುಚಕ್ರದ ಸಮಯದಲ್ಲಿನ ಆ ಸುಸ್ತಿಗೂ ಇದೆ ʼಮನೆ ಮದ್ದುʼ

ಕೆಲವು ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ ಜ್ವರ, ನಿಶ್ಯಕ್ತಿ, ತಲೆನೋವು ಬಳಲಿಕೆಯಂಥ ಸಮಸ್ಯೆಗಳು ಕಂಡು ಬರುತ್ತವೆ. ಇದಕ್ಕೆ ಕಾರಣಗಳೇನು ಗೊತ್ತೇ..?

ಹಾರ್ಮೋನ್ ಬದಲಾವಣೆಯಿಂದ ಕಾಣಿಸಿಕೊಳ್ಳುವ ಜ್ವರ ಸುಸ್ತು ಇದು. ಇದಕ್ಕೆ ಯಾವುದೇ ಔಷಧಿಯ ಅಗತ್ಯವಿಲ್ಲ. ಮನೆಮದ್ದುಗಳನ್ನು ಬಳಸುವ ಮೂಲಕ ನೀವು ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಹೊಟ್ಟೆಯ ಕೆಳಭಾಗ ನೋವಿದ್ದಾಗ ಬಿಸಿ ನೀರಿನ ಶಾಖ ಕೊಡಿ. ಸಾಧ್ಯವಾದರೆ ವಿಶ್ರಾಂತಿ ಪಡೆಯಿರಿ. ಕಚೇರಿಗೆ ತೆರಳುವವರು ಮನೆಯಲ್ಲಾದರೂ ವಿಶ್ರಾಂತಿ ಪಡೆಯಲು ಪ್ರಯತ್ನಿಸಿ. ಬೆನ್ನು ನೆಲಕ್ಕೆ ತಾಗಿಸಿ ಮಲಗುವುದರಿಂದ ಬೆನ್ನು ನೋವು ಬಹುಪಾಲು ಕಡಿಮೆಯಾಗುತ್ತದೆ.

ಹೆಚ್ಚಿನ ದ್ರವಾಹಾರ ಸೇವಿಸಿ. ಒತ್ತಡದಿಂದ ದೂರವಿರಿ. ಹಾಯಾಗಿ ನಿದ್ದೆ ಮಾಡಿ. ಜಂಕ್ ಫುಡ್ ಬಿಟ್ಟು ತರಕಾರಿ, ಹಣ್ಣು, ಸಿಹಿ ತಿನಿಸುಗಳನ್ನು ತಿನ್ನಿ. ಇದರಿಂದ ನೋವಿನ ಲಕ್ಷಣಗಳು ಕಡಿಮೆಯಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...