alex Certify ಊಟಿ ಪ್ರವಾಸದಲ್ಲಿ ತಪ್ಪದೇ ಇದನ್ನು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊಟಿ ಪ್ರವಾಸದಲ್ಲಿ ತಪ್ಪದೇ ಇದನ್ನು ನೋಡಿ

ತಮಿಳುನಾಡಿನಲ್ಲಿರುವ ನೀಲಗಿರಿ ಜಿಲ್ಲೆಯಲ್ಲಿ ಊಟಿ ಇದ್ದು ಇದೊಂದು ಪ್ರಸಿದ್ಧ ಗಿರಿಧಾಮವಾಗಿದೆ. ಉದಗಮಂಡಲಂ ಎಂದು ಕೂಡ ಕರೆಯುತ್ತಾರೆ. ಇದು ಸಮುದ್ರ ಮಟ್ಟದಿಂದ 7,500 ಅಡಿ ಎತ್ತರದಲ್ಲಿದೆ. ಊಟಿಯ ತಂಪಾದ ವಾತಾವರಣ, ಹಚ್ಚಹಸಿರಿನ ಪ್ರಕೃತಿ ಸೌಂದರ್ಯ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ.

ನೀಲಗಿರಿ ಬೆಟ್ಟಗಳ ನಡುವೆ ಇರುವ ಈ ನಗರ ಭೂಲೋಕದ ಸ್ವರ್ಗದಂತಿದೆ. ಇದಕ್ಕೆ ಬ್ಲೂಮೌಂಟೆನ್ ಎಂಬ ಹೆಸರೂ ಇದೆ. ಇಲ್ಲಿ ಅರಳಿ ನಿಲ್ಲುವ ಹೂಗಳ ರಾಶಿ ನೋಡಲು ಎರಡು ಕಣ್ಣು ಸಾಲದು. ಊಟಿಯಿಂದ ಕೇವಲ 28 ಕಿಮಿ ದೂರದಲ್ಲಿರುವ ಅವಲಾಂಚೆ ಸರೋವರ ನೋಡಲೇಬೇಕಾದ ಪ್ರದೇಶಗಳಲ್ಲೊಂದು. ಸುಂದರ ಪರ್ವತ ಮತ್ತು ಭೂದೃಶ್ಯಗಳ ನಡುವೆ ಈ ಸರೋವರ ಆಕರ್ಷಕವಾಗಿ ಕಾಣುತ್ತದೆ.

ಊಟಿ ಸರೋವರ ಕೃತಕವಾಗಿದ್ದರೂ ಎನ್ಐಟಿ ಮೀನುಗಾರಿಕೆ ಉದ್ದೇಶಕ್ಕೆ ನಿರ್ಮಿಸಿದ್ದರೂ ಪ್ರಸ್ತುತ ಇದು ಬೋಟಿಂಗ್ ಗೆ ಪ್ರಸಿದ್ಧವಾಗಿದೆ. ತಮಿಳುನಾಡಿನ ತೋಟಗಾರಿಕೆ ಇಲಾಖೆಯಿಂದ ನಿರ್ವಹಿಸಲ್ಪಡುವ ಊಟಿಯ ಬಟಾನಿಕಲ್ ಗಾರ್ಡನ್ಸ್ ಇಲ್ಲಿನ ಜನಪ್ರಿಯ ಸ್ಥಳಗಳಲ್ಲಿ ಒಂದು.

ನೀಲಗಿರಿ ಬೆಟ್ಟ ಕೂಡ ಇಲ್ಲಿ ನೋಡುವಂತಹ ಸ್ಥಳವಾಗಿದೆ. ಡಾಲ್ಫಿನ್ ನೋಸ್, ಕಾಮರಾಜ ಸಾಗರ ಅಣೆಕಟ್ಟು, ಮುಕುರ್ತಿ ರಾಷ್ಟ್ರೀಯ ಉದ್ಯಾನವನ, ರೋಸ್ ಗಾರ್ಡನ್, ಎಮರಾಲ್ಡ್ ಸರೋವರ ಇಲ್ಲಿನ ಮತ್ತಿತರ ಪ್ರೇಕ್ಷಣೀಯ ಸ್ಥಳಗಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...