alex Certify ಉದ್ಯೋಗಿಗಳಿಗೆ ಬಾಸ್‌ ಕೊಟ್ಟ ದುಬಾರಿ ಗಿಫ್ಟ್‌ ಏನು ಗೊತ್ತಾ…? ಕೇಳಿದ್ರೆ ಶಾಕ್‌ ಆಗ್ತೀರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳಿಗೆ ಬಾಸ್‌ ಕೊಟ್ಟ ದುಬಾರಿ ಗಿಫ್ಟ್‌ ಏನು ಗೊತ್ತಾ…? ಕೇಳಿದ್ರೆ ಶಾಕ್‌ ಆಗ್ತೀರಿ…!

ಬಾಸ್‌ ಅಂದ್ರೆ ಉದ್ಯೋಗಿಗಳಿಗೆಲ್ಲ ಒಂಥರಾ ಭಯ, ಅಸೂಯೆ. ಮಾಲೀಕನ ಬೆನ್ನ ಹಿಂದೆ ಗಾಸಿಪ್‌ ಮಾಡೋದು ಸರ್ವೇ ಸಾಮಾನ್ಯ. ಆದ್ರೆ ಇಲ್ಲೊಬ್ಬ ಮಾಲೀಕ ತನ್ನ ಸರ್ಫ್ರೈಸ್ ಗಿಫ್ಟ್‌ ಮೂಲಕವೇ ನೌಕರರ ಬಾಯಿ ಮುಚ್ಚಿಸಿದ್ದಾನೆ.

ಕೊರೊನಾ ಪೆಂಡಮಿಕ್‌ ಸಮಯದಲ್ಲಿ ಶ್ರಮವಹಿಸಿ ಕೆಲಸ ಮಾಡಿದ ಉದ್ಯೋಗಿಗಳಿಗೆಲ್ಲ ಲೂಯಿಸ್‌ ವಿಟ್ಟನ್‌ ಕಂಪನಿಯ ದುಬಾರಿ ಬ್ಯಾಗ್‌ ಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾನೆ. ಈ ಪ್ರತಿ ಬ್ಯಾಗ್‌ ನ ಬೆಲೆ 1 ಲಕ್ಷ ರೂಪಾಯಿಗಿಂತ್ಲೂ ಹೆಚ್ಚು. ದುಬಾರಿ ಬ್ಯಾಗ್‌ ಅನ್ನು ಖುದ್ದಾಗಿ ಡಾ.‌ ಯುಸುಫ್‌ ಅವರೇ ಖರೀದಿಸಿ ತಂದಿರೋದು ವಿಶೇಷ.

ಕೆನಡಾದ ವೈದ್ಯ ಡಾ. ಯುಸುಫ್‌ ಚಾಬನ್‌ ತನ್ನ ಆಸ್ಪತ್ರೆಯ ಪ್ರತಿ ಕೆಲಸಗಾರರಿಗೂ ಪ್ರತ್ಯೇಕ ಬ್ಯಾಗ್‌ ಅನ್ನು ಖರೀದಿಸಿದ್ದಾನೆ. ದಂತ ವೈದ್ಯರಾಗಿರೋ ಯುಸುಫ್‌ ತಮ್ಮ ಸರಳ ನಡವಳಿಕೆಯಿಂದಾಗಿ ಈ ಹಿಂದೆಯೂ ಒಮ್ಮೆ ವೈರಲ್‌ ಆಗಿದ್ದರು. ಈಗ ಮತ್ತೆ ಚರ್ಚೆಯಲ್ಲಿದ್ದಾರೆ. ಈವರೆಗಿನ ಅತ್ಯಂತ ಉತ್ತಮ ಮಾಲೀಕನೆಂದು ಶಹಬಾಸ್‌ ಗಿರಿ ಪಡೆದಿದ್ದಾರೆ ಈ ವೈದ್ಯ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...