alex Certify ಉಗುರುಗಳು ಸ್ವಾಸ್ಥ್ಯ ಕಾಪಾಡಲು ಇಲ್ಲಿದೆ 8 ಸೂತ್ರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಗುರುಗಳು ಸ್ವಾಸ್ಥ್ಯ ಕಾಪಾಡಲು ಇಲ್ಲಿದೆ 8 ಸೂತ್ರ…..!

ಉಗುರುಗಳು ನೋಡೋಕೆ ಚೆನ್ನಾಗಿ ಇದ್ವು ಅಂದ್ರೆ ನಿಮ್ಮ ಪಾದ ಹಾಗೂ ಹಸ್ತ ಕೂಡ ಚೆನ್ನಾಗೇ ಕಾಣಿಸುತ್ತೆ. ಆದರೆ ಅತಿಯಾದ ನೇಲ್​ಪಾಲಿಶ್​ ಬಳಕೆ, ಜಿಮ್​ನಲ್ಲಿ ಅತಿ ಹೆಚ್ಚು ಎಕ್ಸಸೈಸ್​, ವಿಟಮಿನ್​ ಕೊರತೆ ಈ ರೀತಿಯ ಸಾಕಷ್ಟು ಕಾರಣಗಳಿಂದ ನಿಮ್ಮಉಗುರುಗಳ ಸೌಂದರ್ಯ ಹಾಳಾಗಿರಬಹುದು. ಪೆಡಿಕ್ಯೂರ್​, ಮೆನಿಕ್ಯೂರ್​ ಮಾಡಿದ ಬಳಿಕವೂ ನಿಮ್ಮ ಉಗುರುಗಳು ಸ್ವಾಸ್ಥ್ಯವಾಗಿಲ್ಲ ಅಂತಾ ನಿಮಗೆ ಅನಿಸಿದ್ರೆ ನೀವು ಈ 8 ಸೂತ್ರಗಳನ್ನ ಪಾಲಿಸಿ ನೋಡಿ.

ಉಗುರುಗಳ ಆರೈಕೆಗೆ ಮುಖ್ಯವಾಗಿ ಬೇಕಾಗೋದು ವಿಟಮಿನ್​ ಬಿ. ಹೀಗಾಗಿ ವಿಟಮಿನ್​ ಬಿ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಕುಚ್ಚಲಕ್ಕಿ, ಬಾರ್ಲಿ, ಮೀನು, ಮೊಟ್ಟೆ, ಹಾಲು, ಆಲ್ಮಂಡ್​, ಬಾಳೆಹಣ್ಣನ್ನ ಹೆಚ್ಚಾಗಿ ತಿನ್ನೋದ್ರಿಂದ ನಿಮ್ಮ ಉಗುರುಗಳು ಇನ್ನಷ್ಟು ಬಲಶಾಲಿ ಆಗೋದ್ರಲ್ಲಿ ಯಾವುದೇ ಸಂದೇಹವಿಲ್ಲ.

ಉಗುರುಗಳಿಗೆ ನೇಲ್​ಪಾಲಿಶ್​ ಹಚ್ಚಿದ ಮಾತ್ರಕ್ಕೆ ನಿಮ್ಮ ಉಗುರುಗಳು ಹಾಳಾಗೋದಿಲ್ಲ. ಆದರೆ ತಿಂಗಳಲ್ಲಿ ಒಂದು ವಾರವಾದರೂ ನೇಲ್​ಪಾಲಿಶ್​ಗೆ ಬ್ರೇಕ್​ ಕೊಡಿ. ಅಲ್ಲದೇ ನೀವು ಬಳಸೋ ನೇಲ್​ಪಾಲಿಶ್​ನಲ್ಲಿ ಎಸಿಟೋನ್​ ಅಂಶ ಇಲ್ಲ ಅನ್ನೋದನ್ನ ಖಾತರಿ ಪಡಿಸಿಕೊಳ್ಳಿ. ಪಾತ್ರೆ ತೊಳೆಯುವ ಸಂದರ್ಭದಲ್ಲಿ ಗ್ಲೌಸ್​ ಹಾಕೋದನ್ನ ಮರೆಯದಿರಿ. ಯಾವುದೇ ಕಾರಣಕ್ಕೂ ಉಗುರುಗಳ ಸಂದುಗಳಲ್ಲಿ ಕೊಳೆಯ ಅಂಶ ಸೇರದಂತೆ ನೋಡಿಕೊಳ್ಳಿ.

ಉದ್ದುದ್ದ ಉಗುರುಗಳನ್ನ ಬಿಡೋ ಟ್ರೆಂಡ್​ ಇದೆ. ಆದರೆ ಈ ಫ್ಯಾಶನ್​ ಕೂಡ ನಿಮ್ಮ ಉಗುರುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ಹೀಗಾಗಿ ಸರಿಯಾದ ಸಮಯಕ್ಕೆ ಉಗುರುಗಳನ್ನ ಕತ್ತರಿಸೋಕೆ ಮರೆಯದಿರಿ. ಇನ್ನುಳಿದಂತೆ ಬ್ರಶ್​ಗಳ ಸಹಾಯದಿಂದ ಉಗುರುಗಳನ್ನ ಸ್ವಚ್ಚಗೊಳಿಸಿ ಹಾಗೂ ಉಗುರಿನ ಸಂದುಗಳಲ್ಲಿ ಸೋಂಕು ಕಾಣಿಸಿಕೊಂಡಿದೆ ಅನ್ನೋ ವಿಚಾರ ಗೊತ್ತಾಗ್ತಾ ಇದ್ದಂತೆ ವೈದ್ಯರನ್ನ ಭೇಟಿಯಾಗೋಕೆ ಮರೆಯಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...