alex Certify ಉಕ್ರೇನ್‌ – ರಷ್ಯಾ ಯುದ್ದದ ಮಧ್ಯೆ ಅಚ್ಚರಿ ಮಾಹಿತಿ ಬಹಿರಂಗ; ಮಹಿಳೆಯರ ಜೊತೆ ಫ್ಲರ್ಟ್​ ಮಾಡಲು ಉತ್ಸುಕರಾದ ರಷ್ಯಾ ಯೋಧರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್‌ – ರಷ್ಯಾ ಯುದ್ದದ ಮಧ್ಯೆ ಅಚ್ಚರಿ ಮಾಹಿತಿ ಬಹಿರಂಗ; ಮಹಿಳೆಯರ ಜೊತೆ ಫ್ಲರ್ಟ್​ ಮಾಡಲು ಉತ್ಸುಕರಾದ ರಷ್ಯಾ ಯೋಧರು..!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ನ ಮೇಲೆ ಯುದ್ಧವನ್ನು ಘೋಷಿಸುತ್ತಿದ್ದಂತೆಯೇ ಉಕ್ರೇನ್​ನಲ್ಲಿ ಕಂಡ ಕಂಡಲ್ಲಿ ಕ್ಷಿಪಣಿಯ ದಾಳಿಗಳು ನಡೆಯುತ್ತಿದೆ. ಇಂತಹ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ರಷ್ಯಾದ ಸೈನಿಕರು ಬೇರೇನೋ ಹುಡುಕಾಟದಲ್ಲಿ ಇರುವಂತೆ ಕಾಣುತ್ತಿದೆ.

ಹೌದು..! ಉಕ್ರೇನ್​ನ ಗಡಿಗಳಲ್ಲಿ ನಿಯೋಜನೆಗೊಂಡಿರುವ ರಷ್ಯಾದ ಸೈನಿಕರು ಉಕ್ರೇನ್​ನ ಖಾರ್ಕಿವ್​ ನಗರದಲ್ಲಿರುವ ಮಹಿಳೆಯರ ಜೊತೆ ಫ್ಲರ್ಟ್ ಮಾಡುತ್ತಿದ್ದಾರಂತೆ..! ರೆಡ್​ ಆರ್ಮಿಯ ಕಮಾಂಡರ್​ಗಳು ತಮ್ಮ ಶತ್ರುಗಳನ್ನು ಓಲೈಸಲು ಸಮವಸ್ತ್ರದಲ್ಲಿರುವ ತಮ್ಮ ಫೋಟೋ ಹಾಗೂ ತಾವಿರುವ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರಂತೆ.

ಖಾರ್ಕಿವ್​ನಲ್ಲಿ ವಾಸವಿರುವ ಉಕ್ರೇನ್​ ಮಹಿಳೆಯರು ಟಿಂಡರ್​ ಆ್ಯಪ್​​ನಲ್ಲಿ ಡಜನ್​ಗಟ್ಟಲೇ ರಷ್ಯಾದ ಸೈನಿಕರನ್ನು ಗುರುತಿಸಿದ್ದಾರೆ. ಇದೇ ಸಮಯದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್​ ಮಿಲಿಟರಿ ಕಾರ್ಯಾಚರಣೆಗೆ ಆದೇಶ ನೀಡಿದ್ದಾರೆ. ಖಾರ್ಕಿವ್​ ಪುಟಿನ್​ರ ಸೈನ್ಯ ನೆಲೆಸಿರುವ ಸ್ಥಳದಿಂದ ಕೇವಲ 20 ಮೈಲಿ ದೂರದಲ್ಲಿದೆ. ಸತ್ಯವನ್ನು ಪರಿಶೀಲನೆ ಮಾಡಲು ಉಕ್ರೇನ್​ನಲ್ಲಿರುವ ಸಾಕಷ್ಟು ಮಹಿಳೆಯರು ತಾವಿರುವ ಸ್ಥಳವನ್ನು ಖಾರ್ಕಿವ್​ ಎಂದು ಆ್ಯಪ್​ನಲ್ಲಿ ಅಪ್​ಡೇಟ್​ ಮಾಡಿದಾಗ ರಷ್ಯಾದ ಸೈನಿಕರು ಲವ್​ಗಾಗಿ ಹುಡುಕಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ.

ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ ಉಕ್ರೇನ್​ ವಿಡಿಯೋ ಪ್ರೊಡ್ಯೂಸರ್​ ದಶಾ ಸಿನೆಲ್ನಿಕೋವಾ ನಾನು ಅಸಲಿಗೆ ಕೈವ್​ನಲ್ಲಿ ವಾಸವಿದ್ದೇನೆ. ಆದರೆ ಟಿಂಡರ್​ನಲ್ಲಿ ರಷ್ಯಾದ ಸೈನಿಕರು ಲವ್​ಗಾಗಿ ಹುಡುಕುತ್ತಿರುವುದು ಗಮನಕ್ಕೆ ಬಂದ ಬಳಿಕ ನನ್ನ ಲೊಕೇಷನ್​ನ್ನು ಖಾರ್ಕಿವ್​​ಗೆ ಬದಲಾಯಿಸಿದೆ. ಆಗ ನನಗೆ ರಷ್ಯಾದ ಸೈನಿಕರು ಪ್ರೀತಿಗಾಗಿ ಹುಡುಕಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.

ಓರ್ವ ಯೋಧನಂತೂ ಕೈಯಲ್ಲಿ ಪಿಸ್ತೂಲ್​ ಹಿಡಿದು ಹಾಸಿಗೆಯಲ್ಲಿ ಮಲಗಿಕೊಂಡಿರುವ ಮಾದಕ ಫೋಟೋವೊಂದನ್ನು ಟಿಂಡರ್​ನಲ್ಲಿ ಶೇರ್​ ಮಾಡಿದ್ದಾನೆ. ಇನ್ನು ಹಲವು ಯೋಧರು ತಮ್ಮ ಕಟ್ಟುಮಸ್ತಾದ ದೇಹವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.

ಆದರೆ ನನಗೆ ಇವ್ಯರ್ಯಾರೂ ಆಕರ್ಷಕ ಎಂದು ಎನಿಸಲೇ ಇಲ್ಲ. ನಮ್ಮ ಶತ್ರುವಿನ ಜೊತೆಯಲ್ಲಿ ನಾವು ಮಲಗುವ ಮಾತೇ ಇಲ್ಲ. ನಾನು ಟಿಂಡರ್ ಅಪ್ಲಿಕೇಶನ್​ನಲ್ಲಿ ರಷ್ಯಾದ ಸೈನಿಕರನ್ನು ರಿಜೆಕ್ಟ್​ ಮಾಡಿದ್ದೇನೆ ಎಂದು ದಶಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...