alex Certify ಉಕ್ರೇನ್​ – ರಷ್ಯಾ ಬಿಕ್ಕಟ್ಟು: ಪುತ್ರಿಯನ್ನು ಬೀಳ್ಕೊಟ್ಟು ಕಣ್ಣೀರಿಟ್ಟ ತಂದೆ, ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್​ – ರಷ್ಯಾ ಬಿಕ್ಕಟ್ಟು: ಪುತ್ರಿಯನ್ನು ಬೀಳ್ಕೊಟ್ಟು ಕಣ್ಣೀರಿಟ್ಟ ತಂದೆ, ವಿಡಿಯೋ ವೈರಲ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ ಮೇಲೆ ಯುದ್ಧ ಘೋಷಣೆ ಮಾಡಿದಾಗಿನಿಂದ ಉಕ್ರೇನ್​ ತನ್ನ ಸಶಸ್ತ್ರ ಪಡೆಗಿಂತಲೂ ಅಧಿಕವಾದ ರಷ್ಯಾದ ಪಡೆಯನ್ನು ಎದುರಿಸುತ್ತಿದೆ . ಮಿಲಿಟರಿ ಪಡೆ ಹಾಗೂ ವಾಯುನೆಲೆಗಳ ಮೇಲೆ ಮಾತ್ರ ದಾಳಿ ಮಾಡುತ್ತೇವೆ ಜನನಿಬಿಡ ಪ್ರದೇಶಗಳ ಮೇಲೆ ದಾಳಿ ಮಾಡುವುದಿಲ್ಲ ಎಂದಿದ್ದ ರಷ್ಯಾ ಸೇನೆಯು ಉಕ್ರೇನ್​ನ ಪ್ರಮುಖ ನಗರಗಳಲ್ಲಿ ಕ್ಷಿಪಣಿ ದಾಳಿಯನ್ನು ನಡೆಸಿದೆ.

ಈಗಾಗಲೇ ಉಕ್ರೇನ್​ನಲ್ಲಿ ಸಾಕಷ್ಟು ಸಾವು ನೋವುಗಳು ಉಂಟಾಗಿವೆ. ಅದೇ ರೀತಿ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ಉಕ್ರೇನ್​ನ ವ್ಯಕ್ತಿಯೊಬ್ಬ ತನ್ನ ಪುಟ್ಟ ಮಗಳನ್ನು ನಾಗರಿಕರ ಸುರಕ್ಷಿತ ವಲಯಕ್ಕೆ ಕಳುಹಿಸುವ ಮುನ್ನ ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ರಷ್ಯಾ ಪಡೆಗಳ ವಿರುದ್ಧ ಹೋರಾಡುವ ವ್ಯಕ್ತಿಯು ಕಣ್ಣೀರು ಹಾಕುತ್ತಾನೆ. ತಂದೆಯನ್ನು ಕಂಡು ಮಗಳು ಕೂಡ ಕಣ್ಣೀರಾಕುತ್ತಿರುವ ದೃಶ್ಯ ಮನಕಲಕುವಂತಿದೆ.

ನ್ಯೂ ನ್ಯೂಸ್​ ಇಯು ತನ್ನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್​ ಮಾಡಿದ್ದು, ತನ್ನ ಕುಟುಂಬವನ್ನು ಸುರಕ್ಷಿತ ವಲಯಕ್ಕೆ ಕಳುಹಿಸಿದ ತಂದೆಯು ತನ್ನ ಪುಟ್ಟ ಹುಡುಗಿಗೆ ವಿದಾಯ ಹೇಳುತ್ತಿದ್ದಾರೆ ಎಂದು ಶೀರ್ಷಿಕೆ ನೀಡಲಾಗಿದೆ.

— New News EU (@Newnews_eu) February 24, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...