alex Certify ಈ ವರ್ಷದ ಮೊದಲ ಮರಣದಂಡನೆ ಶಿಕ್ಷೆ ವಿಧಿಸಲು ಅಮೆರಿಕಾದಲ್ಲಿ ಸಿದ್ದತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವರ್ಷದ ಮೊದಲ ಮರಣದಂಡನೆ ಶಿಕ್ಷೆ ವಿಧಿಸಲು ಅಮೆರಿಕಾದಲ್ಲಿ ಸಿದ್ದತೆ

ಡಬಲ್​ ಮರ್ಡರ್​ ಮಾಡಿ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿಯನ್ನು ಓಕ್ಲಹೋಮಾದಲ್ಲಿ ಮಾರಕ ಚುಚ್ಚುಮದ್ದಿನ ಮೂಲಕ ಮರಣದಂಡನೆ ಶಿಕ್ಷೆ ನೀಡಲು ಗುರುವಾರ ನಿರ್ಧರಿಸಲಾಗಿದೆ. ಈ ಮೂಲಕ ಈ ಅಪರಾಧಿಯು ಅಮೆರಿಕದಲ್ಲಿ ಈ ವರ್ಷ ಮರಣ ದಂಡನೆ ಶಿಕ್ಷೆಗೆ ಒಳಗಾದ ಮೊದಲ ಕೈದಿ ಎನಿಸಲಿದ್ದಾರೆ.

2001ನೇ ಇಸ್ವಿಯಲ್ಲಿ 25 ವರ್ಷ ಪ್ರಾಯದವನಾಗಿದ್ದ ಡೋನಾಲ್ಡ್​ ಗ್ರ್ಯಾಂಟ್​, ಜೈಲಿನಲ್ಲಿರುವ ತನ್ನ ಗೆಳತಿಗೆ ಜಾಮೀನು ಕೊಡಿಸುವ ಸಲುವಾಗಿ ಹಣಕ್ಕಾಗಿ ಹೋಟೆಲ್​ನಲ್ಲಿ ದರೋಡೆ ಮಾಡಿದ್ದನು.

ದರೋಡೆ ಸಂದರ್ಭದಲ್ಲಿ ಈತ ಇಬ್ಬರು ಹೋಟೆಲ್​ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾನೆ. ನ್ಯಾಯಾಲಯದಲ್ಲಿರುವ ದಾಖಲೆಯ ಪ್ರಕಾರ ಓರ್ವ ಹೋಟೆಲ್​ ಸಿಬ್ಬಂದಿ ಆ ಕೂಡಲೇ ಸಾವನ್ನಪ್ಪಿದ್ದರು. ಮತ್ತೊಬ್ಬ ಸಿಬ್ಬಂದಿಗೆ ಚಾಕು ಇರಿದು ಗ್ರ್ಯಾಂಟ್​ ಕೊಲೆ ಮಾಡಿದ್ದ ಎನ್ನಲಾಗಿದೆ. ಈ ಪ್ರಕರಣ ಸಂಬಂಧ 2005ರಲ್ಲಿ ಗ್ರ್ಯಾಂಟ್​ಗೆ ಮರಣದಂಡನೆ ಶಿಕ್ಷೆ ಘೋಷಣೆಯಾಗಿತ್ತು.

ಅಂದಿನಿಂದ ಗ್ರ್ಯಾಂಟ್​ ತಮ್ಮ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸರ್ಕಾರಕ್ಕೆ ಸಾಕಷ್ಟು ಮನವಿಯನ್ನು ಸಲ್ಲಿದ್ದಾನೆ. ತನಗೆ ಇರುವ ದೈಹಿಕ ನ್ಯೂನ್ಯತೆಗಳ ಬಗ್ಗೆಯೂ ಉಲ್ಲೇಖಿಸಿದ್ದಾನೆ. ಆನ್​ಲೈನ್​ ಅರ್ಜಿಯಲ್ಲಿ ತನಗೆ ಬಾಲ್ಯದ ಅವಧಿಯಲ್ಲಿ ಮದ್ಯ ವಸನಿ ತಂದೆ ಮಾಡಿದ ಹಿಂಸಾತ್ಮಕ ನಿಂದನೆಗಳಿಂದಾಗಿ ತಾನು ಮೆದುಳಿನ ಆಘಾತದಿಂದ ಬಳಲುತ್ತಿದ್ದೇನೆ ಎಂದೆಲ್ಲ ಹೇಳಿಕೊಂಡಿದ್ದಾನೆ.

ಆದರೆ ಈ ಎಲ್ಲಾ ಮನವಿಗಳನ್ನು ತಿರಸ್ಕರಿಸಲಾಗಿದೆ. ಈಗ 46 ವರ್ಷ ಪ್ರಾಯದ ಗ್ರ್ಯಾಂಟ್​ಗೆ ಮ್ಯಾಕ್‌ಅಲೆಸ್ಟರ್‌ನಲ್ಲಿರುವ ಒಕ್ಲಹೋಮ ಸ್ಟೇಟ್ ಪೆನಿಟೆನ್ಷಿಯರಿಯಲ್ಲಿ ಮೂರು ಮಾರಕ ಪದಾರ್ಥಗಳ ಚುಚ್ಚುಮದ್ದನ್ನು ನೀಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...