alex Certify ಈ ರೀತಿಯಾಗಿ ಉಪ್ಪು ತಿಂದರೆ ಬಹಳ ಬೇಗ ಬರಬಹುದು ಮುಪ್ಪು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರೀತಿಯಾಗಿ ಉಪ್ಪು ತಿಂದರೆ ಬಹಳ ಬೇಗ ಬರಬಹುದು ಮುಪ್ಪು…!

ಉಪ್ಪು ಇಲ್ಲದೇ ಊಟ ಮಾಡೋದು ಅಸಾಧ್ಯ. ಹಾಗಂತ ಉಪ್ಪು ಸ್ವಲ್ಪ ಹೆಚ್ಚು ಕಡಿಮೆ ಆದರೂ ಊಟದ ರುಚಿ ಕೆಟ್ಟೇ ಹೋಗುತ್ತದೆ. ಉಪ್ಪನ್ನು ಅತಿಯಾಗಿ ಸೇವನೆ ಮಾಡಿದ್ರೆ ಆರೋಗ್ಯಕ್ಕೆ ಹಾನಿಕರ. ಉಪ್ಪನ್ನು ಮಿತವಾಗಿ ಸರಿಯಾದ ರೀತಿಯಲ್ಲಿ ಸೇವನೆ ಮಾಡುವುದು ಬಹಳ ಮುಖ್ಯ. ಇದನ್ನು ತಪ್ಪಾಗಿ ಬಳಸಿದ್ರೆ ಬೇಗ ನಿಮಗೆ ಮುಪ್ಪು ಬರಬಹುದು.

ಅಕಾಲಿಕ ವೃದ್ಧಾಪ್ಯಕ್ಕೆ ಕಾರಣವಾಗುವ ಅತಿಯಾದ ಉಪ್ಪಿನ ಸೇವನೆಯಿಂದ ಇನ್ನೂ ಏನೇನು ಸಮಸ್ಯೆಗಳಾಗುತ್ತವೆ ಅನ್ನೋದನ್ನು ನೋಡೋಣ. ಅತಿಯಾಗಿ ಉಪ್ಪು ಸೇವನೆ ಮಾಡುವುದು ಕಣ್ಣುಗಳಿಗೂ ಒಳ್ಳೆಯದಲ್ಲ. ಇದು ನಿಮ್ಮ ದೃಷ್ಟಿಶಕ್ತಿಗೆ ಹಾನಿ ಮಾಡಬಹುದು.

ಅತಿಯಾಗಿ ಉಪ್ಪನ್ನು ಬಳಸುವುದರಿಂದ ನಿಮ್ಮ ರಕ್ತದ ಮಟ್ಟವೂ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ಕೆಲವರಿಗೆ ದೇಹದ ಮೇಲೆ ಅಲರ್ಜಿ ಸಹ  ಉಂಟಾಗುತ್ತದೆ. ಕೂದಲಿನ ಸೌಂದರ್ಯಕ್ಕೆ ಹೆಚ್ಚು ಗಮನ ಕೊಡುವವರಂತೂ ಉಪ್ಪನ್ನು ಕಡಿಮೆ ತಿನ್ನಬೇಕು. ಹೆಚ್ಚು ಉಪ್ಪು ತಿಂದರೆ ಕೂದಲು ಬೆಳ್ಳಗಾಗುತ್ತದೆ ಎಂಬ ನಂಬಿಕೆ ಇದೆ. ಹೊಟ್ಟೆಯ ಸಮಸ್ಯೆಗಳು ಅಥವಾ ಅಧಿಕ ಬಿಪಿ ಸಮಸ್ಯೆಯಿಂದ ಬಳಲುತ್ತಿರುವವರು ಉಪ್ಪನ್ನು ಸಮತೋಲಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು.

ದೇಹದಲ್ಲಿ ಊತದ ಸಮಸ್ಯೆಗಳೇನಾದರೂ ಇದ್ದರೆ ಅಂಥವರು ಜಾಸ್ತಿ ಉಪ್ಪು ತಿನ್ನಬಾರದು. ಹೆಚ್ಚಿನ ಜನರು ಜ್ವರ ಬಂದರೂ ಹೆಚ್ಚು ಉಪ್ಪನ್ನು ಸೇವಿಸುತ್ತಾರೆ, ಜ್ವರ ಬಂದಾಗ  ಉಪ್ಪನ್ನು ಜಾಸ್ತಿ ತಿನ್ನಬಾರದು. ಉಪ್ಪು ನಮಗೆ ಅಗತ್ಯ ನಿಜ, ಹಾಗಂತ ಅತಿಯಾದ್ರೆ ಅದು ಕೂಡ ಅಪಾಯಕಾರಿಯೇ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...