alex Certify ಈ ರಾಶಿ ವಿದ್ಯಾರ್ಥಿಗಳಿಗಿದೆ ಇಂದು ʼಉತ್ತಮ ಅವಕಾಶʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿ ವಿದ್ಯಾರ್ಥಿಗಳಿಗಿದೆ ಇಂದು ʼಉತ್ತಮ ಅವಕಾಶʼ

ಮೇಷ : ಈ ದಿನ ನಿಮ್ಮ ಪಾಲಿಗೆ ಶುಭಕರವಾಗಲಿದೆ. ಉದ್ಯೋಗಕ್ಕಾಗಿ ಅರಸುತ್ತಿರುವವರು ಇಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಪಡೆಯುವಲ್ಲಿ ಯಶಸ್ವಿಯಾಗಲಿದ್ದಾರೆ. ಸಂಗಾತಿಯಿಂದ ಸಂಪೂರ್ಣ ಬೆಂಬಲ ಪಡೆಯಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ವ್ಯಾಪಾರ – ಉದ್ಯಮಿಗಳಿಗೆ ಇಂದು ಲಾಭವಿದೆ.

ವೃಷಭ : ಆಟೋ ಮೊಬೈಲ್​, ಪ್ರಿಂಟಿಂಗ್​ ಪ್ರೆಸ್​ ಹಾಗೂ ಜವಳಿ ಉದ್ಯಮಿಗಳು ಇಂದು ಲಾಭ ಗಳಿಸಲಿದ್ದಾರೆ. ಕುಟುಂಬಸ್ಥರ ಜೊತೆ ನಿಮ್ಮ ಸಂಬಂಧ ಉತ್ತಮವಾಗಿ ಇರಲಿದೆ. ಆಸ್ತಿಗೆ ಸಂಬಂಧಿಸಿದ ಹಳೆಯ ವಿವಾದವು ಬಗೆಹರಿಯಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಿಥುನ : ದಿಢೀರ್​ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು. ಇದರಿಂದ ನೀವು ಕಸಿವಿಸಿಗೆ ಒಳಗಾಗಲಿದ್ದೀರಿ. ಹಸಿರು ಬಣ್ಣವು ನಿಮಗೆ ಇಂದು ಹೆಚ್ಚಿನ ಅದೃಷ್ಟ ಸಿಗಲಿದೆ. ಮಕ್ಕಳ ಮದುವೆ ವಿಚಾರದಲ್ಲಿ ಶುಭ ವಾರ್ತೆ ಕೇಳಲಿದ್ದೀರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಇದೆ.

ಕಟಕ : ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಲಭಿಸಲಿದೆ. ವ್ಯಾಪಾರ ವ್ಯವಹಾರಸ್ಥರಿಗೆ ಲಾಭವಿದೆ. ವಿದ್ಯಾರ್ಥಿಗಳಿಗೆ ಯಶಸ್ಸಿದೆ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಉಂಟಾಗುವ ಕಿರಿಕಿರಿಯು ಮಾನಸಿಕವಾಗಿ ನಿಮ್ಮನ್ನು ಚಿಂತೆಗೀಡು ಮಾಡಲಿದೆ.

ಸಿಂಹ : ಸ್ನೇಹಿತರೊಂದಿಗೆ ವೈಮನಸ್ಯ ಮೂಡುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ನಿಮಗೆ ಮೋಸ ಆಗಬಹುದು. ಹೀಗಾಗಿ ಎಚ್ಚರಿಕೆಯಿಂದಿರಿ. ಪರಸ್ತ್ರೀಯರೊಂದಿಗೆ ಅತಿಯಾದ ಸಲುಗೆ ಸಲ್ಲದು. ಕಚೇರಿಯಲ್ಲಿ ಅನಗತ್ಯ ಮಾತು ಬೇಡ.

ಕನ್ಯಾ : ಕಚೇರಿ ವಾತಾವರಣದಲ್ಲಿ ಸಮಸ್ಯೆಗಳು ಎದುರಾಗಲಿದೆ. ಹೀಗಾಗಿ ಆದಷ್ಟು ಎಚ್ಚರಿಕೆಯಿಂದಿರಿ. ಪೋಷಕರ ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಜಾನುವಾರುಗಳ ಮಾರಾಟದಲ್ಲಿ ಲಾಭವಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ.

ತುಲಾ : ವೈವಾಹಿಕ ಜೀವನದಲ್ಲಿ ಇದ್ದ ಮನಸ್ತಾಪಗಳೆಲ್ಲ ದೂರಾಗಿ ನೆಮ್ಮದಿ ನೆಲೆಸಲಿದೆ. ಇದರಿಂದ ನಿಮ್ಮ ಮಾನಸಿಕ ಚಿಂತೆಗಳೆಲ್ಲ ದೂರಾಗಲಿದೆ. ಕುಟುಂಬಸ್ಥರ ನಡುವೆ ಉಂಟಾಗುವ ಸಮಸ್ಯೆಯನ್ನು ತಾಳ್ಮೆಯಿಂದ ನಿಭಾಯಿಸಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.

ವೃಶ್ಚಿಕ : ಹೊಸ ಉದ್ಯಮ ಆರಂಭಿಸುವವರಿಗೆ ಇದು ಸಕಾಲವಾಗಿದೆ. ಸಂಗಾತಿ ಜೊತೆ ದಿಢೀರ್​ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿ ಇರಲಿದೆ. ಕೋರ್ಟ್ ಕಚೇರಿ ವ್ಯವಹಾರದಲ್ಲಿ ಮುನ್ನಡೆ ಇದೆ.

ಧನು : ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಇಲ್ಲವೇ ಸಂಬಳ ಏರಿಕೆ ಕಾದಿದೆ. ಖಾಸಗಿ ಉದ್ಯೋಗಿಗಳೂ ಶುಭ ಸುದ್ದಿ ಕೇಳಲಿದ್ದಾರೆ. ನಿಮ್ಮಿಂದ ಸಾಲ ಪಡೆದವರು ಇಂದು ಹಣ ತೀರಿಸಲಿದ್ದಾರೆ. ಕೃಷಿಕರು ನಿರೀಕ್ಷಿತ ಲಾಭ ಹೊಂದಲಿದ್ದಾರೆ.

ಮಕರ : ಕುಟುಂಬದಲ್ಲಿ ನಿಮ್ಮ ಮಾತಿಗೆ ಅತಿಯಾದ ಮನ್ನಣೆ ಇದೆ. ಹೀಗಾಗಿ ಗೌರವವನ್ನು ಸದುಪಯೋಗ ಪಡಿಸಿಕೊಳ್ಳಿ. ಸಹೋದರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡಲಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕುಂಭ : ಮನೆಯಲ್ಲಿ ಶೀಘ್ರದಲ್ಲೇ ಶುಭ ಕಾರ್ಯ ನಡೆಯಲಿದೆ. ಆಸ್ತಿ ವ್ಯವಹಾರದಲ್ಲಿ ನಿಮಗೆ ಲಾಭ ಇದೆ. ಈ ದಿನ ಆರ್ಥಿಕವಾಗಿ ಒತ್ತಡಕ್ಕೆ ಸಿಲುಕಲಿದ್ದೀರಿ. ಸ್ನೇಹಿತರ ಜೊತೆ ಉತ್ತಮ ಸಂಬಂಧ ಹೊಂದಲಿದ್ದೀರಿ.

ಮೀನ : ಕಚೇರಿ ಕೆಲಸವು ಹೆಚ್ಚು ಒತ್ತಡದಾಯಕವಾಗಿ ಇರಲಿದೆ. ಆದರೂ ಸಹೋದ್ಯೋಗಿಗಳ ಪಿತೂರಿಯಿಂದ ಎಚ್ಚರಿಕೆ ವಹಿಸಿ. ಸಂಗಾತಿಯಿಂದ ಉತ್ತಮ ಉಡುಗೊರೆ ಪಡೆಯಲಿದ್ದೀರಿ. ಆರ್ಥಿಕವಾಗಿ ಕೊಂಚ ಕಷ್ಟವಿದೆ. ಜವಳಿ ಉದ್ಯಮಿಗಳಿಗೆ ಲಾಭವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...