alex Certify ಈ ರಾಶಿಯವರು ಇಂದು ಆನಂದವಾಗಿ ದಿನ ಕಳೆಯಲಿದ್ದಾರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರು ಇಂದು ಆನಂದವಾಗಿ ದಿನ ಕಳೆಯಲಿದ್ದಾರೆ

 

ಮೇಷ : ದಾಂಪತ್ಯ ಜೀವನದ ಸುಖ ನಿಮಗೆ ದೊರೆಯಲಿದೆ. ಕುಟುಂಬದವರೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಚಿಕ್ಕದೊಂದು ಪ್ರವಾಸಕ್ಕೆ ತೆರಳಲಿದ್ದೀರಿ. ಮಧ್ಯಾಹ್ನದ ನಂತರ ಆರೋಗ್ಯ ಹದಗೆಡುವ ಸಾಧ್ಯತೆ ಇದೆ.

ವೃಷಭ : ಇಂದು ಬೆಳಗಿನ ಸಮಯದಲ್ಲಿ ಕೌಟುಂಬಿಕ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಲಾಭವಿದೆ. ಸ್ತ್ರೀಯರಿಂದ ಲಾಭ ದೊರೆಯುವ ಸಾಧ್ಯತೆ ಇದೆ. ಪ್ರೀತಿಪಾತ್ರರನ್ನು ಭೇಟಿಯಾಗಲಿದ್ದೀರಿ. ಮಾನಸಿಕ, ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ.

ಮಿಥುನ : ದಿನದ ಆರಂಭ ಗೊಂದಲಮಯವಾಗಿರುತ್ತದೆ. ಹಠಮಾರಿ ಧೋರಣೆ ತೊರೆದು ಸಮಾಧಾನದಿಂದ ವರ್ತಿಸಲಿದ್ದೀರಿ. ನಿಮ್ಮ ಮಧುರವಾಣಿ ಮತ್ತು ಭಾಷೆಯಿಂದ ಇತರರ ಮನ ಗೆಲ್ಲಲಿದ್ದೀರಿ.

ಕರ್ಕ : ಇವತ್ತು ಆನಂದವಾಗಿ ದಿನ ಕಳೆಯಲಿದ್ದೀರಿ. ವ್ಯಾಪಾರಿಗಳಿಗೆ ಇಂದು ಲಾಭದಾಯಕ ದಿನ. ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಂತೋಷವಾಗಿ ಸಮಯ ಕಳೆಯಲಿದ್ದೀರಿ.

ಸಿಂಹ : ಇವತ್ತು ಹೆಚ್ಚು ಚಿಂತಿತರಾಗಿರುತ್ತೀರಿ. ಶಾರೀರಿಕ ಆರೋಗ್ಯ ಕೂಡ ಹದಗೆಡುವ ಸಾಧ್ಯತೆ ಇದೆ. ಕುಟುಂಬದಲ್ಲೂ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುತ್ತದೆ. ಮಧ್ಯಾಹ್ನದ ನಂತರ ಎಲ್ಲಾ ಕಾರ್ಯಗಳೂ ಸರಾಗವಾಗಲಿವೆ.

ಕನ್ಯಾ : ಇವತ್ತು ನಿಮಗೆ ಮಿಶ್ರಫಲವಿದೆ. ದಿನದ ಆರಂಭದಲ್ಲಿ ಸ್ಪೂರ್ತಿ ಮತ್ತು ಆನಂದದ ಅನುಭವವಾಗುತ್ತದೆ. ನಿಮ್ಮ ಸೃಜನಾತ್ಮಕ ಮತ್ತು ಕಲಾತ್ಮಕ ಶಕ್ತಿಯಲ್ಲಿ ಕೂಡ ವೃದ್ಧಿಯಾಗಲಿದೆ.

ತುಲಾ : ಹೊಸ ಕಾರ್ಯವನ್ನು ಆರಂಭಿಸಲು ಸಮಯ ಅನುಕೂಲಕರವಾಗಿದೆ. ನಿಮ್ಮಲ್ಲಿ ಧಾರ್ಮಿಕ ಭಾವನೆ ಮತ್ತು ನಂಬಿಕೆ ಹೆಚ್ಚಲಿದೆ. ಕಚೇರಿ ಮತ್ತು ವ್ಯಾಪಾರದಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದೆ.

ವೃಶ್ಚಿಕ : ಊಟ-ತಿಂಡಿ ಬಗ್ಗೆ ವಿಶೇಷ ಗಮನ ಹರಿಸಿ. ಹೊಸ ಕೆಲಸ ಆರಂಭಿಸಲು ಸಮಯ ಅನುಕೂಲಕರವಾಗಿಲ್ಲ. ಅಧಿಕ ಕೆಲಸದಿಂದಾಗಿ ಮನಸ್ಸಿನ ಶಿಥಿಲತೆ ಮತ್ತು ವ್ಯಗ್ರತೆ ಹೆಚ್ಚಲಿದೆ.

ಧನು : ಪ್ರತಿ ಕಾರ್ಯವನ್ನೂ ಆತ್ಮವಿಶ್ವಾಸದಿಂದ ಮಾಡಲಿದ್ದೀರಿ. ಸರ್ಕಾರದ ಜೊತೆಗಿನ ಆರ್ಥಿಕ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಮನೆ, ಸಂಪತ್ತು, ದಾಖಲೆಗಳ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ.

ಮಕರ : ಇಂದು ಮನಸ್ಸು ಹಗುರವಾಗಲಿದೆ. ಆನಂದ ಮತ್ತು ಉತ್ಸಾಹದಲ್ಲೂ ವೃದ್ಧಿಯಾಗಲಿದೆ. ಕೌಟುಂಬಿಕ ಮತ್ತು ಆರ್ಥಿಕ ವಿಷಯದ ಬಗ್ಗೆ ಹೆಚ್ಚಿನ ಗಮನ ಕೊಡಿ. ಎಲ್ಲಾ ಕೆಲಸಗಳನ್ನೂ ದೃಢ ಚಿತ್ತ ಮತ್ತು ಆತ್ಮವಿಶ್ವಾಸದಿಂದ ಮಾಡಿ.

ಕುಂಭ : ಇಂದು ಶುಭ ಫಲವಿದೆ. ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲಿದ್ದೀರಿ. ಹಣಕಾಸಿನ ಕೊರತೆಯಾಗುವುದಿಲ್ಲ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ.

ಮೀನ : ಮಧುರ ಮಾತುಗಳಿಂದ ಇತರರ ಮನಸ್ಸು ಗೆಲ್ಲಲಿದ್ದೀರಿ. ಹೊಸ ಸಂಬಂಧಗಳು ಬೆಸೆಯಲಿವೆ. ಇಡೀ ದಿನ ಆನಂದವಾಗಿ ಕಳೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...