alex Certify ಈ ಗ್ರಾಮದ ವಿಷಯ ಕೇಳಿದ್ರೆ ಅಚ್ಚರಿಪಡ್ತೀರಿ…!‌ ಇಲ್ಲಿದ್ದಾರೆ ಪ್ರತಿ ಮೂರು ಮಂದಿಯಲ್ಲಿ ಒಬ್ಬರು ಯೂಟ್ಯೂಬರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಗ್ರಾಮದ ವಿಷಯ ಕೇಳಿದ್ರೆ ಅಚ್ಚರಿಪಡ್ತೀರಿ…!‌ ಇಲ್ಲಿದ್ದಾರೆ ಪ್ರತಿ ಮೂರು ಮಂದಿಯಲ್ಲಿ ಒಬ್ಬರು ಯೂಟ್ಯೂಬರ್

ನೀವು ದೊಡ್ಡವರಾದ ಮೇಲೆ ಏನು ಆಗುತ್ತೀರಿ ಎಂಬ ಪ್ರಶ್ನೆ ಮಕ್ಕಳು ಎದುರಿಸುತ್ತಾರೆ. ಬಹುತೇಕ ಮಕ್ಕಳ ಉತ್ತರ ಡಾಕ್ಟರ್​, ಇಂಜಿನಿಯರ್​, ಅಧಿಕಾರಿ, ಕ್ರೀಡಾಪಟು, ವಿಜ್ಞಾನಿ ಎಂಬ ಉತ್ತರ ಬರುತ್ತದೆ.

ಆದರೆ ನೀವು ಛತ್ತೀಸ್​ಗಢದ ತುಳಸಿ ಗ್ರಾಮದಲ್ಲಿ ಹದಿಹರೆಯದವರಿಗೆ ಈ ಪ್ರಶ್ನೆಯನ್ನು ಕೇಳಿದರೆ, ಯೂಟ್ಯೂಬರ್​ ಎಂಬ ಉತ್ತರ ಪಡೆಯುವ ಸಾಧ್ಯತೆಯಿದೆ.

ಈ ಹಳ್ಳಿಯಲ್ಲಿರುವ 3,000 ನಿವಾಸಿಗಳಲ್ಲಿ, ಸುಮಾರು ಒಂದು ಸಾವಿರ ಯಶಸ್ವಿ ಯೂಟ್ಯೂಬರ್​ಗಳು ಇದ್ದಾರೆ. 85 ವರ್ಷ ವಯಸ್ಸಿನ ಅಜ್ಜಿ ಮತ್ತು 15 ವರ್ಷ ವಯಸ್ಸಿನ ಹುಡುಗನೂ ಇಲ್ಲಿ ಯೂಟ್ಯೂಬರ್​. ಇವರ ನಡುವೆ ಯಾವುದೇ ಸ್ಪರ್ಧೆ ಏನೂ ಇಲ್ಲ ಎಂಬುದು ವಿಶೇಷ.

ಈ ಯೂಟ್ಯೂಬರ್​ಗಳ ಗ್ರಾಮ ರಾಜ್ಯ ರಾಜಧಾನಿ ರಾಯ್​ಪುರದಿಂದ 45 ಕಿಮೀ ದೂರದಲ್ಲಿದೆ, ಪ್ರತ್ಯೇಕ ಚಾನಲ್​ಗಳನ್ನು ಹೊಂದಿರುವಾಗ, ವಿಷಯಕ್ಕಾಗಿ ಪರಸ್ಪರ ಸಹಕರಿಸುತ್ತಾರೆ ಮತ್ತು ಹೊಸಬರಿಗೆ ಸಹಾಯ ಮಾಡುತ್ತಾರೆ.

ಯೂಟ್ಯೂಬರ್​ಗಳು ಆಗಾಗ್ಗೆ ಒಟ್ಟಿಗೆ ಸೇರುತ್ತಾರೆ ಮತ್ತು ವಿಷಯವನ್ನು ಪರಸ್ಪರ ಚರ್ಚೆ ಮಾಡಿ ನಿರ್ಧರಿಸುತ್ತಾರೆ. ನಂತರ ವಿಡಿಯೊದಲ್ಲಿ ನಟಿಸಲು ನಟರ ಆಯ್ಕೆ ನಡೆಯುತ್ತದೆ. ಗ್ರ್ರಾಮಸ್ಥರು ತಮ್ಮ ಪಾತ್ರವನ್ನು ನಿರ್ವಹಿಸಲು ತಕ್ಷಣವೇ ಒಪ್ಪುತ್ತಾರೆ.

55 ವರ್ಷದ ಪ್ಯಾರೇಲಾಲ್​ ಹಳ್ಳಿಯಲ್ಲಿ ರಾಮಲೀಲಾ ನಾಟಕಗಳಲ್ಲಿ ನಟಿಸುತ್ತಿದ್ದರು, ಆದರೆ ಇಂದು ಅವರು ತಮ್ಮ ಹಳ್ಳಿಯನ್ನು ಮೀರಿ ಪ್ರಸಿದ್ಧರಾಗಿದ್ದಾರೆ. 15 ವರ್ಷದ ರಾಹುಲ್​ ತನ್ನದೇ ಆದ ಯೂಟ್ಯೂಬ್​ ಚಾನೆಲ್​ ಹೊಂದಿದ್ದು, ಲಕ್ಷ ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಮಧು ಕೋಸಲೆ ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ತನ್ನ ಹಾಡುಗಳನ್ನು ಅಪ್​ಲೋಡ್​ ಮಾಡುತ್ತಾಳೆ ಮತ್ತು ಸಹ ಗ್ರಾಮಸ್ಥರು ನಿರ್ಮಿಸಿದ ಕಂಟೆಂಟ್​ನಲ್ಲಿ ನಟಿಸುತ್ತಾಳೆ, ಇವೆಲ್ಲ ಒಂದಷ್ಟು ಉದಾಹರಣೆಗಳು.

ಅನೇಕರು ಈ ಪ್ರಯತ್ನದಿಂದ ಹಣವನ್ನು ಗಳಿಸುತ್ತಿದ್ದು, ಕ್ಯಾಮೆರಾ, ಮೈಕ್​ನಂತಹ ಸಲಕರಣೆಗಳನ್ನು ಸಹ ಹಂಚಿಕೊಳ್ಳುತ್ತಾರೆ. ಇಲ್ಲಿ ಯಾರೂ ನೃತ್ಯ ಅಥವಾ ನಟನೆಯಲ್ಲಿ ಔಪಚಾರಿಕ ತರಬೇತಿ ಪಡೆದಿಲ್ಲ, ಆದರೆ ಅವರು ಪರಸ್ಪರ ಕಲಿಯುತ್ತಾರೆ ಎಂದು ಗ್ರಾಮದ ನಿವಾಸಿ ಚೇತನ್​ ನಾಯಕ್​ ಹೇಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...