alex Certify ಈ ಕಾರಣಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ ಪಾಕಿಸ್ತಾನದ ಗ್ಲಾಮರಸ್‌ ರಾಜಕಾರಣಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ ಪಾಕಿಸ್ತಾನದ ಗ್ಲಾಮರಸ್‌ ರಾಜಕಾರಣಿ…..!

ಪಾಕಿಸ್ತಾನದಲ್ಲಿ ಗ್ಲಾಮರ್‌ನಿಂದಲೇ ಸುದ್ದಿ ಮಾಡಿದ್ದ ರಾಜಕಾರಣಿ ಅಂದ್ರೆ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ ಸದಸ್ಯೆ ಹೀನಾ ರಬ್ಬಾನಿ ಖಾರ್.‌ ಈಗಾಗ್ಲೇ ಹೀನಾ, ಶೆಹಬಾಜ್‌ ಷರೀಫ್‌ ಸಂಪುಟ ಸೇರಲು ಪ್ರಮಾಣ ವಚನ ಸ್ವೀಕರಿಸಿಯಾಗಿದೆ. ಈಕೆಗೆ ಪಾಕ್‌ ವಿದೇಶಾಂಗ ವ್ಯವಹಾರಗಳ ಸಚಿವೆಯ ಪಟ್ಟ ಸಿಗೋದು ಬಹುತೇಕ ಖಚಿತ ಎನ್ನಲಾಗ್ತಾ ಇದೆ.

ಶೆಹಬಾಜ್‌ ಷರೀಫ್‌ ಸಂಪುಟಕ್ಕೆ ಈಗಾಗ್ಲೇ 34 ಸದಸ್ಯರು ಸೇರ್ಪಡೆಯಾಗಿದ್ದಾರೆ. ಹೀನಾ ಕೂಡ ಅವರಲ್ಲೊಬ್ಬರು. ಹೀನಾಳ ಗ್ಲಾಮರಸ್‌ ಲುಕ್‌ ಜೊತೆಗೆ ಅದ್ಭುತ ಭಾಷಾ ಶೈಲಿ ಕೂಡ ಜನರನ್ನು ಸೆಳೆದಿತ್ತು. ಈಕೆ 2011 ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ.

ಪಾಕಿಸ್ತಾನದಲ್ಲಿ ಈ ಹುದ್ದೆ ನಿಭಾಯಿಸಿದ ಕಿರಿಯ ಮತ್ತು ಮೊದಲ ಮಹಿಳಾ ರಾಜಕಾರಣಿ ಎನಿಸಿಕೊಂಡಿದ್ದರು. ಆಕೆಗೆ ಆಗ 33 ವರ್ಷ. ಪಾಕ್ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪುತ್ರ ಬಿಲಾವಲ್ ಬುಟ್ಟೋ ಜೊತೆಗೆ ಹೀನಾ ರಬ್ಬಾನಿ ಡೇಟಿಂಗ್‌ ಮಾಡ್ತಿದ್ದಾರೆ ಅನ್ನೋ ವದಂತಿಯೂ ಕೇಳಿ ಬಂದಿತ್ತು.

ಹೀನಾಳನ್ನೇ ಮದುವೆಯಾಗಲು ಬಿಲಾವಲ್‌ ಭುಟ್ಟೋ ಪಟ್ಟು ಹಿಡಿದಿದ್ದರಂತೆ. ಇದೇ ವಿಚಾರಕ್ಕೆ ತಂದೆ ಅಸಿಫ್‌ ಅಲಿ ಜರ್ದಾರಿ ಹಾಗೂ ಬಿಲಾವಲ್‌ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿತ್ತು. ಹೀನಾ ಕೂಡ ಬಿಲಾವಲ್‌ಗಾಗಿ ತಮ್ಮ ಬಿಲಿಯನೇರ್‌ ಪತಿ ಫಿರೋಜ್‌ ಗುಲ್ಜಾರ್‌ನನ್ನು ತೊರೆಯಲು ಸಜ್ಜಾಗಿದ್ದರು. ಆದ್ರೀಗ ಬಿಲಾವಲ್‌ ಭುಟ್ಟೋರನ್ನು ಪಾಕ್‌ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...