alex Certify ಈ ಒಂದು ಫೋಟೋಗಾಗಿ 36 ವರ್ಷದಿಂದ ಕಾದಿದ್ದರಂತೆ ಕಿಚ್ಚ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಒಂದು ಫೋಟೋಗಾಗಿ 36 ವರ್ಷದಿಂದ ಕಾದಿದ್ದರಂತೆ ಕಿಚ್ಚ…!

ಕಿಚ್ಚ ಸುದೀಪ್ ಸ್ಯಾಂಡಲ್‌ ವುಡ್‌ ಮಾತ್ರವಲ್ಲ, ಬಾಲಿವುಡ್‌ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಅಭಿಮಾನಿಗಳ ಸಂಖ್ಯೆ ದೊಡ್ಡದು. ಇದರ ಮಧ್ಯೆ ಅವರ 36 ವರ್ಷಗಳ ಕನಸೊಂದು ನನಸಾಗಿದೆ.

ಭಾರತ ಕ್ರಿಕೆಟ್ ತಂಡವು ಮೊದಲ ಬಾರಿಗೆ 1983ರಲ್ಲಿ ವಿಶ್ವಕಪ್ ಗೆ ಮುತ್ತಿಕ್ಕಿತ್ತು. ಈ ಘಟನೆ ಆಧರಿಸಿ ʼ83ʼ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದಲ್ಲಿ ಕಪಿಲ್ ದೇವ್ ಅವರ ಪಾತ್ರವನ್ನು ನಟ ರಣವೀರ್ ಸಿಂಗ್ ನಿರ್ವಹಿಸಿದ್ದಾರೆ.

ಬುಕ್‌ ಮಾಡಿದರೆ ಸಾಕು….! ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ಬಿಸ್ಲೇರಿ ನೀರು

ಕಪಿಲ್ ಎಂದರೆ, ಕಿಚ್ಚ ಸುದೀಪ್‌ ಅವರಿಗೆ ತುಂಬಾ ಪ್ರೀತಿಯಂತೆ. ಹೀಗಾಗಿ ಬಾಲ್ಯದಲ್ಲಿಯೇ ಈ ವಿಶ್ವಕಪ್ ಗೆದ್ದ ಕ್ಷಣದ ಸಂಭ್ರಮಾಚರಣೆ ಆಚರಿಸಿದ್ದ ಕಿಚ್ಚ, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕೆಂಬ ಕನಸು ಕಂಡಿದ್ದರು. ಸದ್ಯ ಅವರ ಕನಸು ಈಡೇರಿದೆ.

ಈ ಚಿತ್ರ ಕನ್ನಡಕ್ಕೂ ಡಬ್ ಆಗಿ ತೆರೆಗೆ ಬರಲಿದೆ. ಹೀಗಾಗಿ ಈ ಚಿತ್ರತಂಡದಿಂದ ಸುದ್ದಿಗೋಷ್ಠಿ ನಡೆದಿತ್ತು. ಕಪಿಲ್ ದೇವ್, ನಟ ರಣವೀರ್ ಸಿಂಗ್ ಸೇರಿದಂತೆ ಹಲವರು ಆಗಮಿಸಿದ್ದರು. ಸುದೀಪ್, ನಿರ್ದೇಶಕ ಕಬೀರ್ ಖಾನ್, ರಣವೀರ್ ಸಿಂಗ್ ಮುಂತಾದವರು ಪಾಲ್ಗೊಂಡಿದ್ದರು. ಆಗ ಸುದೀಪ್ ನೆನಪು ಮೆಲುಕು ಹಾಕಿದ್ದಾರೆ.

87-88ರಲ್ಲಿ ಸುದೀಪ್ ಅವರು ಕಪೀಲ್ ದೇವ್ ಅವರನ್ನು ಭೇಟಿ ಮಾಡಿದ್ದರಂತೆ. ಆಗ ಕ್ಯಾಮೆರಾದಿಂದ ಫೋಟೋ ತೆಗೆಸಿಕೊಳ್ಳಬೇಕೆಂದರೆ ಅದು ಕೆಲಸ ಮಾಡಲಿಲ್ಲ. ಆಗ ನಾನು ಅತ್ತಿದ್ದೆ. ನನ್ನನ್ನು ಕಪಿಲ್ ದೇವ್ ಸಮಾಧಾನಪಡಿಸಿದ್ದರು. ಈಗ ನನ್ನ ಕನಸು ನನಸಾಗಿದೆ ಎಂದು ಹೇಳಿದ್ದಾರೆ. ಕಪಿಲ್ ದೇವ್ ಅವರೊಂದಿಗಿನ ಫೋಟೋವನ್ನು ಸುದೀಪ್ ಸಾಮಾಜಿಕ ಜಾಲತಾಮದಲ್ಲಿ ಪೋಸ್ಟ್ ಮಾಡಿ, ಸಂಭ್ರಮಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...