alex Certify ಈ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಿದ್ದಾರೆ 1.5 ಲಕ್ಷ ಮಂದಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಿದ್ದಾರೆ 1.5 ಲಕ್ಷ ಮಂದಿ….!

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಹೊಸ ಹೊಸ ಕಂಪನಿಗಳು ಕೂಡ ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. 2020ರ ಜನವರಿಯಲ್ಲಿ ಟಿವಿಎಸ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಐಕ್ಯೂಬ್ ಅನ್ನು ಬಿಡುಗಡೆ ಮಾಡಿತ್ತು. ಈಗಾಗ್ಲೇ ಈ ಸ್ಕೂಟರ್ 150,000 ಯುನಿಟ್‌ಗಳಷ್ಟು ಮಾರಾಟವಾಗಿದೆ. iQube ಈ ಸಾಧನೆ ಮಾಡಲು 43 ತಿಂಗಳುಗಳನ್ನು ತೆಗೆದುಕೊಂಡಿದೆ. ಈ ಸ್ಕೂಟರ್ ಅನ್ನು ನೇಪಾಳದಲ್ಲಿ ಸಹ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.

iQube ಜುಲೈ 22ರ ವೇಳೆಗೆ 154,263 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಈ ಮೊದಲು 2023ರ ಜೂನ್ ಅಂತ್ಯದ ವೇಳೆಗೆ, iQubeನ ಉತ್ಪಾದನೆ 147,309 ಯುನಿಟ್‌ಗಳಾಗಿತ್ತು. iQube ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ 38,602 ಸ್ಕೂಟರ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. 2022ರ ಏಪ್ರಿಲ್-ಜೂನ್ ವರೆಗಿನ ಮಾರಾಟಕ್ಕಿಂತ ಆ ಪ್ರಮಾಣ ಶೇ.342ರಷ್ಟು ಹೆಚ್ಚಾಗಿದೆ.

2022 ರಲ್ಲಿ 8,724 ಯುನಿಟ್‌ಗಳಷ್ಟೇ ಬಿಕರಿಯಾಗಿತ್ತು. 2023ರ ಏಪ್ರಿಲ್‌ನಲ್ಲಿ 6,227 ಯುನಿಟ್‌ಗಳು, ಮೇನಲ್ಲಿ 17,913 ಯುನಿಟ್‌ಗಳು ಮತ್ತು ಜೂನ್ನಲ್ಲಿ 14,462 ಯುನಿಟ್‌ಗಳು ಸೇಲ್‌ ಆಗಿವೆ. ಕಡಿಮೆ ಸಬ್ಸಿಡಿಯಿಂದಾಗಿ iQube ಮೂರು ತಿಂಗಳಲ್ಲಿ 38,602 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಪ್ರಸ್ತುತ, iQube ವಿವಿಧ ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಬೆಲೆ 1,17,000 ರೂಪಾಯಿಯಿಂದ 1,24,000 ರೂಪಾಯಿವರೆಗಿದೆ.

TVS iQube ಮೂರು ರೂಪಾಂತರಗಳಲ್ಲಿ ಲಭ್ಯವಿದೆ – ಸ್ಟ್ಯಾಂಡರ್ಡ್, S ಮತ್ತು ST. ಸ್ಟ್ಯಾಂಡರ್ಡ್ ಮತ್ತು S ರೂಪಾಂತರಗಳು 3.04 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತವೆ. ಅದೇ ಸಮಯದಲ್ಲಿ, 4.56 kWh ನ ದೊಡ್ಡ ಬ್ಯಾಟರಿಯನ್ನು ST ರೂಪಾಂತರದಲ್ಲಿ ನೀಡಲಾಗಿದೆ. ಸ್ಟ್ಯಾಂಡರ್ಡ್, S ಮತ್ತು ST ಮಾದರಿಗಳು ಒಂದೇ ಚಾರ್ಜ್‌ನಲ್ಲಿ ಕ್ರಮವಾಗಿ 100 ಕಿಮೀ, 100 ಕಿಮೀ ಮತ್ತು 145 ಕಿಮೀ ಗರಿಷ್ಠ ವ್ಯಾಪ್ತಿಯನ್ನು ನೀಡುತ್ತವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...