alex Certify ಈ ಉಪಾಯ ಅನುಸರಿಸಿ ʼಸೊಳ್ಳೆʼ ಕಚ್ಚುವುದರಿಂದ ಪಾರಾಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಉಪಾಯ ಅನುಸರಿಸಿ ʼಸೊಳ್ಳೆʼ ಕಚ್ಚುವುದರಿಂದ ಪಾರಾಗಿ

ಮಳೆಗಾಲದಲ್ಲಿ ಅಲ್ಲಲ್ಲಿ ನಿಲ್ಲುವ ನೀರು ಸೊಳ್ಳೆಗಳ ಹುಟ್ಟಿಗೆ ಕಾರಣವಾಗುತ್ತದೆ. ಅದರಿಂದ ಮುಕ್ತಿ ಪಡೆಯಲು ನೀವು ಈ ಉಪಾಯಗಳನ್ನು ಕಂಡುಕೊಳ್ಳಬಹುದು.
ಪುದೀನಾ ಎಣ್ಣೆಯನ್ನು ತೆಂಗಿನೆಣ್ಣೆಗೆ ಬೆರೆಸಿ ಕೈ ಕಾಲು ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ. ಮನೆಯಿಂದ ಹೊರಹೋಗುವ ಮುನ್ನ, ಗಾರ್ಡನಿಂಗ್ ಕೆಲಸಗಳನ್ನು ಮಾಡುವಾಗ ಇದನ್ನು ಹಚ್ಚಲು ಮರೆಯದಿರಿ. ದಿನಕ್ಕೆ ಎರಡರಿಂದ ಮೂರು ಬಾರಿ ಹಚ್ಚುವುದು ಬಹಳ ಒಳ್ಳೆಯದು.

ನೀಲಗಿರಿ ಎಣ್ಣೆಗೆ ನಾಲ್ಕು ಹನಿ ನಿಂಬೆರಸವನ್ನು ಸೇರಿಸಿ ಉಡುಪು ಮುಚ್ಚದ ದೇಹದ ಭಾಗಕ್ಕೆ ಹಚ್ಚಿಕೊಳ್ಳಿ. ಇವು ಸೊಳ್ಳೆಗಳು ಸಮೀಪ ಬರದಂತೆ ನೋಡಿಕೊಳ್ಳುತ್ತದೆ. ಮನೆಯಿಂದ ಹೊರಹೋಗುವಾಗಲೂ ಇದನ್ನು ಹಚ್ಚಬಹುದು.

ಟೀ ಟ್ರೀ ಎಣ್ಣೆಯಲ್ಲಿ ಔಷಧೀಯ ಗುಣಗಳಿವೆ. ಇವು ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ. ಇದರ ವಾಸನೆಗೆ ಸೊಳ್ಳೆಗಳು ಹತ್ತಿರವೂ ಸುಳಿಯುವುದಿಲ್ಲ. ಬೇವಿನ ಎಣ್ಣೆಯೂ ಇದೇ ರೀತಿ ಉತ್ತಮ ಪರಿಣಾಮ ಬೀರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...