alex Certify ಇಲ್ಲಿದೆ ಬ್ಲಾಕ್ ಫಾರೆಸ್ಟ್ ಕೇಕ್ ನ ಇತಿಹಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಬ್ಲಾಕ್ ಫಾರೆಸ್ಟ್ ಕೇಕ್ ನ ಇತಿಹಾಸ

ಬ್ಲ್ಯಾಕ್ ಫಾರೆಸ್ಟ್ ಕೇಕ್ ತಿನ್ನದೆ ಇರುವವರು ಯಾರಿದ್ದಾರೆ? ಇಲ್ಲ ಎನ್ನುವ ಉತ್ತರ ಬಹುಶಃ ಸಿಗದೇ ಇರಬಹುದು. ಆದರೆ ಈ ಕೇಕ್ ನ ಮೂಲ ಎಷ್ಟು ಜನರಿಗೆ ತಿಳಿದಿದೆ?

ಬ್ಲ್ಯಾಕ್ ಫಾರೆಸ್ಟ್ ಕೇಕ್ ನ ಮೂಲ ಜರ್ಮನಿ. ಬ್ಲ್ಯಾಕ್ ಫಾರೆಸ್ಟ್ ಎನ್ನುವುದು ಜರ್ಮನಿಯ ದಟ್ಟವಾದ ಅರಣ್ಯ ಪ್ರದೇಶ. ಸೂರ್ಯನ ಕಿರಣಗಳು ನೆಲದ ಮೇಲೆ ಬೀಳದೇ ಇರುವಷ್ಟು ದಟ್ಟವಾದ ಹಸಿರು ಇಲ್ಲಿ ಅವಿತುಕೊಂಡಿದೆ.

ಈ ಬ್ಲ್ಯಾಕ್ ಫಾರೆಸ್ಟ್ ನ ಪರ್ವತ ಶ್ರೇಣಿಯಲ್ಲಿ ಸಿಗುವ ಚೆರ್ರಿ ಹಣ್ಣಿನಿಂದ ಒಂದು ಬಗೆಯ ಮದ್ಯವನ್ನು ತಯಾರು ಮಾಡಲಾಗುತ್ತದೆ. ಈ ಮದ್ಯವನ್ನು ಕೇಕ್ ತಯಾರಿಸುವಾಗ ಸಾಮಾನ್ಯವಾಗಿ ಬಳಸುವುದರಿಂದ ಬ್ಲ್ಯಾಕ್ ಫಾರೆಸ್ಟ್ ಎಂಬ ಹೆಸರು ಬಂತು. ಕೇಕ್ ನ ಪದರಗಳ ನಡುವೆ ಚೆರ್ರಿ ಹಣ್ಣನ್ನು ಸಹಾ ಧಾರಾಳವಾಗಿ ಬಳಸುತ್ತಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...