alex Certify ಇಲ್ಲಿದೆ ನಿಮಗೆ ಗೊತ್ತಿಲ್ಲದ ಸುಂದರ ʼಬೀಚ್ʼ ಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ನಿಮಗೆ ಗೊತ್ತಿಲ್ಲದ ಸುಂದರ ʼಬೀಚ್ʼ ಗಳ ಪಟ್ಟಿ

ರಜೆ ಕಳೆಯಲು ಬೀಚ್ ಗಳಿಗಿಂತ ಉತ್ತಮವಾದ ಜಾಗ ಇನ್ನೊಂದಿಲ್ಲ. ಆದ್ರೆ ಓಡಿಶಾದ ಅತ್ಯಂತ ಸುಂದರವಾದ ಬೀಚ್ ಗಳ ಬಗ್ಗೆ ಬಹುತೇಕ ಜನರಿಗೆ ಗೊತ್ತಿಲ್ಲ. ಬಂಗಾಳ ಕೊಲ್ಲಿಯ ಸಮೀಪವಿರುವ ಓಡಿಶಾದ ಪುರಿ ಬೀಚ್ ಬಗ್ಗೆ ಬಹುತೇಕರಿಗೆ ತಿಳಿದಿದೆ. ಆದ್ರೆ ಉಳಿದ 6 ಅತ್ಯಂತ ರಮಣೀಯ ಬೀಚ್ ಗಳನ್ನು ನಾವ್ ನಿಮಗೆ ಪರಿಚಯ ಮಾಡಿಕೊಡುತ್ತೇವೆ.

ಬಲಿಘೈ : ಈ ಬೀಚ್ ಹೆಚ್ಚು ಜನಪ್ರಿಯವಾಗಿಲ್ಲ, ಪುರಿ ಬೀಚ್ ನಿಂದ ಕೇವಲ 8 ಕಿಮೀ ದೂರದಲ್ಲಿದೆ. ಈ ಬೀಚ್ ನ ಸ್ಪೆಷಾಲಿಟಿ ಅಂದ್ರೆ ಪ್ರಿಸ್ಟಿನಾ ಕ್ಯಾಶುರಿನಾ ಮರಗಳು. ಸುಂದರ ಆಮೆಗಳು ಮತ್ತು ವಲಸೆ ಹಕ್ಕಿಗಳನ್ನು ಕೂಡ ನೀವು ಕಣ್ತುಂಬಿಕೊಳ್ಳಬಹುದು.

ಚಂಡಿಪುರ್ : ಇದು ಓಡಿಶಾದ ಫೇಮಸ್ ಬೀಚ್ ಗಳಲ್ಲೊಂದು. ಬಲಸೋರ್ ರೈಲ್ವೆ ಸ್ಟೇಶನ್ ನಿಂದ 16 ಕಿಮೀ ದೂರದಲ್ಲಿದೆ. ಈ ಬೀಚ್ ಸಮೀಪದಲ್ಲೇ ಅರಡಿ ಮತ್ತು ಚಂದನೇಶ್ವರ್ ನಂತಹ ಪ್ರವಾಸಿ ತಾಣಗಳು ಕೂಡ ಇವೆ.

ಪರದೀಪ್ : ಭುವನೇಶ್ವರದಿಂದ 124 ಕಿಮೀ ದೂರದಲ್ಲಿರುವ ಈ ಬೀಚ್ ಪ್ರವಾಸಿಗರ ಸ್ವರ್ಗ. ಹೊಳೆಯುವ ನೀಲಿ ಬಣ್ಣದ ಸಮುದ್ರ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲೇ ದೊಡ್ಡ ಬಂದರನ್ನು ಕೂಡ ನಿರ್ಮಿಸಲಾಗಿದೆ.

ಗಹಿರ್ಮಾತಾ : ಈ ಬೀಚ್ ನಲ್ಲಿ ಕೂಡ ವಿಶಿಷ್ಟ ಆಮೆಗಳು ಕಣ್ಸೆಳೆಯುತ್ತವೆ. ಇದು ಓಡಿಶಾದ ಜನಪ್ರಿಯ ಭಿತರ್ಕಾನಿಕ ಕಾಡುಗಳ ಸಮೀಪದಲ್ಲಿದೆ. ಸಾಗರ ವನ್ಯಜೀವಿ ಅಭಯಾರಣ್ಯವನ್ನು ಕೂಡ ನೀವು ವೀಕ್ಷಿಸಬಹುದು.

ರಾಮ್ಚಂದಿ : ಖುಸಭದ್ರಾ ನದಿ ಹಾಗೂ ಬಂಗಾಳಕೊಲ್ಲಿಯ ಅಂಚಿನಲ್ಲಿ ಈ ಬೀಚ್ ಇದೆ. ಓಡಿಶಾದ ಪ್ರಸಿದ್ಧ ಕೋನಾರ್ಕ್ ದೇವಾಲಯದಿಂದ ಕೇವಲ 7 ಕಿಮೀ ದೂರದಲ್ಲಿದೆ. ಬೀಚ್ ನಲ್ಲೇ ರಾಮ್ ಚಂದಿ ದೇವಾಲಯವನ್ನೂ ನಿರ್ಮಾಣ ಮಾಡಲಾಗಿದೆ.

ಗೋಪಾಲ್ಪುರ: ಓಡಿಶಾದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳ ಇದು. ಬೆರ್ಹಾಂಪುರದಿಂದ 15 ಕಿಮೀ ದೂರದಲ್ಲಿದೆ. ಮತ್ತೆ ಮತ್ತೆ ನೋಡಬೇಕೆನಿಸುವಂತಹ ಸುಂದರ್ ಬೀಚ್ ಇದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...