alex Certify ಇಲ್ಲಿದೆ ಏಷ್ಯಾದ ಟಾಪ್​ 10 ಶ್ರೀಮಂತರ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಏಷ್ಯಾದ ಟಾಪ್​ 10 ಶ್ರೀಮಂತರ ಪಟ್ಟಿ

ಭಾರತೀಯ ಕೈಗಾರಿಕೋದ್ಯಮಿ ಗೌತಮ್​ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬ್ಲೂಮ್​ಬರ್ಗ್​ ಬಿಲಿಯೇನರ್​​​ ವರದಿ ಮಾಡಿರುವ ಟಾಪ್​ 10 ಏಷ್ಯಾದ ಶ್ರೀಮಂತರ ಪಟ್ಟಿ ಇಲ್ಲಿದೆ ನೋಡಿ :

ಗೌತಮ್​ ಅದಾನಿ : ಭಾರತದ ಕೋಟ್ಯಾಧಿಪತಿ ಕೈಗಾರಿಕೋದ್ಯಮಿ ಗೌತಮ್​ ಅದಾನಿ, ಮುಕೇಶ್​ ಅಂಬಾನಿಯವರನ್ನೂ ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಂದರು ಅಭಿವೃದ್ಧಿ ಹಾಗೂ ಹಾಗೂ ಕಾರ್ಯಾಚರಣೆಯಲ್ಲಿ ತೊಡಗಿರುವ ಅಹಮದಾಬಾದ್​​ ಮೂಲದ ಬಹುರಾಷ್ಟ್ರೀಯ ಅದಾನಿ ಗ್ರೂಪ್​​ನ ಅಧ್ಯಕ್ಷ ಹಾಗೂ ಸಂಸ್ಥಾಪಕರಾಗಿದ್ದಾರೆ. ಬ್ಲೂಮ್​ಬರ್ಗ್​ ಬಿಲಿಯೇನರ್ಸ್​ ಇಂಡೆಕ್ಸ್​ ವರದಿಯ ಪ್ರಕಾರ 59 ವರ್ಷದ ಅದಾನಿ ನಿವ್ವಳ ಮೌಲ್ಯವು 88.5 ಶತಕೋಟಿ ಡಾಲರ್​ ಆಗಿದೆ.

ಮುಕೇಶ್​ ಅಂಬಾನಿ : ರಿಲಯನ್ಸ್​​ ಇಂಡಸ್ಟ್ರೀಸ್​ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್​ ಅಂಬಾನಿ ನಿವ್ವಳ ಮೌಲ್ಯವು 87.9 ಶತಕೋಟಿ ಡಾಲರ್​​ ಆಗಿದ್ದು ಈ ಮೂಲಕ ಏಷ್ಯಾದ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದ ವರ್ಷ ನವೆಂಬರ್​ ತಿಂಗಳಿನಲ್ಲಿ ಅಂಬಾನಿ ದೇಶದ ಹಾಗೂ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿದ್ದರು. ಪ್ರಸ್ತುತ ಗೌತಮ್ ಅದಾನಿ, ಮುಕೇಶ್ ಅಂಬಾನಿಗಿಂತ 2.2 ಶತಕೋಟಿ ಡಾಲರ್​ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ.

ಝಾಂಗ್​ ಶಾನ್ಶನ್​ : ಬಾಟಲ್​ ವಾಟರ್​ ಕಿಂಗ್​ ಎಂದೇ ಫೇಮಸ್​ ಆಗಿರುವ ಝಾಂಗ್​ ಶಾನ್ಶನ್​​ 75.7 ಬಿಲಿಯನ್​ ಡಾಲರ್​​ ಮೌಲ್ಯದೊಂದಿಗೆ ಏಷ್ಯಾದ ಮೂರನೇ ಅತೀದೊಡ್ಡ ಶ್ರೀಮಂತ ಎನಿಸಿದ್ದಾರೆ. ವಾಟರ್​ ಬಾಟಲಿ ಕಂಪನಿಯಾದ ನೋಂಗ್​ ಫು ಸ್ಟ್ರಿಂಗ್​​ನ ಅಧ್ಯಕ್ಷರಾದ ಶಾನ್ಶನ್​ ಸೆಪ್ಟೆಂಬರ್ 2020 ರಲ್ಲಿ ಹಾಂಗ್ ಕಾಂಗ್‌ನಲ್ಲಿ ತನ್ನ ಷೇರುಗಳನ್ನು ಪಟ್ಟಿಮಾಡಿದ್ದಾರೆ.

ಜಾಂಗ್ ಯಿಮಿಂಗ್ : ಟಿಕ್ ಟಾಕ್‌ನ ಸಂಸ್ಥಾಪಕರಾದ 39 ವರ್ಷದ ಚೀನಾದ ಬಿಲಿಯನೇರ್ ಜಾಂಗ್ ಯಿಮಿಂಗ್ ಅವರು ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದಾರೆ ಮತ್ತು 44.5 ಬಿಲಿಯನ್ ಡಾಲರ್​​ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಝೆಂಗ್ ಯುಕುನ್ : CATL ನ ಸಂಸ್ಥಾಪಕ ಝೆಂಗ್ ಯುಕುನ್ (ಚೀನಾ) ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ, 48.7 ಬಿಲಿಯನ್ ಡಾಲರ್​ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಮಾ ಹುವಾಟೆಂಗ್ : ಚೀನಾದ ಕೋಟ್ಯಾಧಿಪತಿ ಮಾ ಹುವಾಟೆಂಗ್​ 46.6 ಬಿಲಿಯನ್​ ಡಾಲರ್​ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಏಷ್ಯಾದ ಆರನೇ ಅತೀ ದೊಡ್ಡ ಶ್ರೀಮಂತರಾಗಿದ್ದಾರೆ.

ಜಾಕ್​​ ಮಾ : ಚೀನಾದ ಜಾಕ್​ ಮಾ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಇವರು 35.9 ಬಿಲಿಯನ್​ ಡಾಲರ್​​ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಲಿ ಕಾ-ಶಿಂಗ್ : ಹಾಂಕಾಂಗ್​ನ ಉದ್ಯಮಿ ಲಿ ಕಾ ಶಿಂಗ್​​ 35.8 ಬಿಲಿಯನ್​ ಡಾಲರ್​​ ನಿವ್ವಳ ಮೌಲ್ಯವನ್ನು ಹೊಂದುವ ಮೂಲಕ ಏಷ್ಯಾದ ಎಂಟನೇ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.

ಲೀ ಶಾವ್ ಕೀ : ಸನ್ ಹಂಗ್ ಕೈಯ ಸಹ-ಸಂಸ್ಥಾಪಕ, ಹಾಂಕಾಂಗ್‌ನ ಲೀ ಶಾವ್ ಕೀ $ 34.1 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಮತ್ತು ಏಷ್ಯಾದ ಒಂಬತ್ತನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಹೀ ಕ್ಸಿಯಾಂಗ್‌ಜಿಯಾನ್ : ಅಪ್ಲೈಯನ್ಸ್ ದೈತ್ಯ ಮಿಡಿಯಾದ ಸಂಸ್ಥಾಪಕ, ಚೀನಾದ ಹೀ ಕ್ಸಿಯಾಂಗ್‌ಜಿಯಾನ್ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇವರು 33.1 ಬಿಲಿಯನ್​ ಡಾಲರ್​ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...