alex Certify ಇಲ್ಲಿದೆ ʼರಾಮಾಯಣʼದಿಂದ ಸ್ಫೂರ್ತಿ ಪಡೆದು ನಿರ್ಮಾಣವಾಗುತ್ತಿರುವ ಚಿತ್ರಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ʼರಾಮಾಯಣʼದಿಂದ ಸ್ಫೂರ್ತಿ ಪಡೆದು ನಿರ್ಮಾಣವಾಗುತ್ತಿರುವ ಚಿತ್ರಗಳ ಪಟ್ಟಿ

ಮಹಾಭಾರತ ಹಾಗೂ ರಾಮಾಯಣದಂಥ ದೂರದರ್ಶನದ ಕಾರ್ಯಕ್ರಮಗಳ ಜನಪ್ರಿಯತೆ ಹಾಗೂ ಕೋವಿಡ್-19 ಲಾಕ್‌ಡೌನ್ ವೇಳೆ ಮರುಪ್ರಸರಣ ಕಂಡಾಗಲೂ ಭರ್ಜರಿ ಹಿಟ್ ಆದ ಈ ಶೋಗಳಿಂದ ಪ್ರೇರಿತರಾದವರಂತೆ ಕಾಣುವ ಚಿತ್ರ ನಿರ್ಮಾಪಕರು ಇದೀಗ ಈ ಪುರಾಣಗಳ ಆಧರಿತ ಚಿತ್ರಕಥೆಗಳನ್ನು ತೆರೆ ಮೇಲೆ ತರಲು ಉತ್ಸುಕತೆ ತೋರುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ತೆರೆಗೆ ಬರಲಿರುವ ರಾಮಾಯಣ ಆಧರಿತ ಚಿತ್ರಗಳ ಪಟ್ಟಿ ಇಂತಿದೆ.

ಆದಿಪುರುಷ್‌:

ಓಮ್ ರಾವುತ್‌ರ ಲೇಟೆಸ್ಟ್‌ ಸಿನಿಮಾ ’ಆದಿಪುರುಷ್‌‌’ ರಾಮಾಯಣ ಆಧರಿತವಾಗಿದೆ. ಚಿತ್ರದಲ್ಲಿ ಪ್ರಭಾಸ್ ಶ್ರೀ ರಾಮನ ಪಾತ್ರ ನಿರ್ವಹಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಹಾಗೂ ಕೃತಿ ಸನೋನ್ ಸಹ ಚಿತ್ರದಲ್ಲಿದ್ದು, ರಾವಣ ಮತ್ತು ಸೀತೆಯ ಪಾತ್ರ ನಿರ್ವಹಿಸಲಿದ್ದಾರೆ. ಚಿತ್ರವು ಆಗಸ್ಟ್‌ 11, 2022ಕ್ಕೆ ಬಿಡುಗಡೆ ಕಾಣುವ ಸಾಧ್ಯತೆ ಇದೆ.

ಎದೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೆ ಕಾದಿತ್ತು ಶಾಕ್​…..!

ರಾಮಾಯಣ:

ಹೆಸರೇ ಹೇಳುವಂತೆ, ಮಧು ಮನೇಟಾ ರಾಮಾಯಣ ಚಿತ್ರವು ಬಹಳ ದಿನಗಳಿಂದ ಸದ್ದು ಮಾಡುತ್ತಿದೆ. ದಂಗಲ್ ಖ್ಯಾತಿಯ ನಿತೇಶ್ ತಿವಾರಿ ಹಾಗೂ ’ಮಾಮ್‌’ ನಿರ್ದೇಶಕ ರವಿ ಉದ್ಯಾವರ್‌‌ ನಿದೇರ್ಶನ ಹಾಗೂ ಶ್ರಿಧರ್‌ ರಾಘವನ್ ಕಥೆ ಬರೆದಿರುವ ಚಿತ್ರವು ಅದಾಗಲೇ ತನ್ನ ತಾರಾಗಣದಿಂದ ಸುದ್ದಿಯಲ್ಲಿದೆ.

ದೀಪಿಕಾ ಪಡುಕೋಣೆ ಸೀತೆಯಾಗಿ, ಹೃತಿಕ್ ರೋಷನ್ ರಾವಣನಾಗಿ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಗುಮಾನಿಗಳಿದ್ದು, ದೀಪಾವಳಿ ವೇಳೆಗೆ ಚಿತ್ರದ ತಾರಾಗಣದ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಮಟೇನಾ ತಿಳಿಸಿದ್ದಾರೆ.

ರಾಮ್‌ ಸೇತು:

ಚಿತ್ರದಲ್ಲಿ ಅಕ್ಷಯ್ ಕುಮಾರ್‌ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀ ರಾಮಚಂದ್ರರ ಸಿದ್ಧಾಂತಗಳ ಮೇಲೆ ಚಿತ್ರ ನಿರ್ಮಾಣವಾಗುತ್ತಿದ್ದು, ಅಭಿಷೇಕ್ ಶರ್ಮಾರ ನಿರ್ದೇಶನ ಹಾಗೂ ಅಕ್ಷಯ್ ಕುಮಾರ್‌ರ ಕೇಪ್ ಆಫ್ ಗುಡ್‌ ಫಿಲಂಸ್‌ನ ನಿರ್ಮಾಣದಲ್ಲಿ ಚಿತ್ರ ಸಜ್ಜಾಗುತ್ತಿದೆ. ಅಯೋಧ್ಯೆಯಲ್ಲಿ ಚಿತ್ರ ನಿರ್ಮಾಣ ಮಾಡಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರ ಅನುಮತಿಯನ್ನು ಅಕ್ಷಯ್‌ ಕುಮಾರ್‌ ಕೋರಿದ್ದಾರೆ ಎನ್ನಲಾಗಿದೆ.

ಸಂಜೆ ಸ್ನ್ಯಾಕ್ಸ್ ಗೆ ಮಾಡಿ ರುಚಿಕರ ಬ್ರೆಡ್ ಸ್ಯಾಂಡ್ ವಿಚ್

ಸೀತಾ:

ಬಾಲಿವುಡ್ ನಟಿ ಕಂಗನಾ ರಣಾವತ್‌‌ರನ್ನು ಸೀತೆಯ ಪಾತ್ರ ನಿರ್ವಹಿಸಲು ಚಿತ್ರದಲ್ಲಿ ಆರಿಸಿಕೊಳ್ಳಲಾಗಿದೆ. ಚಿತ್ರವನ್ನು ಅಲೌಕಿಕ್ ದೇಸಾಯಿ ನಿರ್ದೇಶಿಸಲಿದ್ದು, ಕೆವಿ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಚಿತ್ರವು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...