alex Certify ಇನ್ಮುಂದೆ ಜಿಯೋ 5ಜಿ ವೈ ಫೈ ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಮುಂದೆ ಜಿಯೋ 5ಜಿ ವೈ ಫೈ ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯ…..!

ನವದೆಹಲಿ- ಜಿಯೋ‌ ಸಂಸ್ಥೆ ಪ್ರಾಯೋಗಿಕವಾಗಿ 5ಜಿ ಸೇವೆ ಆರಂಭ ಮಾಡಿದೆ. ಇದರ ಮುಂದುವರೆದ ಭಾಗವಾಗಿ ಸಾರ್ವಜನಿಕ ವೈಫೈ ಸೇವೆಯನ್ನು ರಿಲಯನ್ಸ್ ಜಿಯೋ ಆರಂಭ ಮಾಡಿದೆ. ಮೊದಲು ರಾಜಸ್ಥಾನದ ದೇಗುಲನಗರಿ ನಾಥ್​ದ್ವಾರಾದಲ್ಲಿ ಸಾರ್ವಜನಿಕ ವೈಫೈ ಸೇವೆ ಆರಂಭಿಸಲಾಗಿದೆ.

ಹೌದು, 5ಜಿ ಸೇವೆ ಎಲ್ಲರಿಗೂ ತಲುಪಬೇಕು ಎಂಬ ನಿಟ್ಟಿನಲ್ಲಿ ಈ ರೀತಿಯಾಗಿ ಸೇವೆ ಆರಂಭ ಮಾಡಲಿದೆ. ಪ್ರಾಯೋಗಿಕವಾಗಿ ರಾಜಸ್ಥಾನದಲ್ಲಿ ಸಾರ್ವಜನಿಕ ವೈಫೈ ಆರಂಭ ಮಾಡಿದ್ದು, ಮುಂಬರುವ ದಿನಗಳಲ್ಲಿ ರೈಲು ನಿಲ್ದಾಣಗಳು, ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಕಡೆಗಳಲ್ಲಿ ಈ ಸೇವೆ ಲಭ್ಯವಾಗಲಿದೆ ಎಂದು ಕಂಪನಿ ಶನಿವಾರ ತಿಳಿಸಿದೆ.

ಇನ್ನು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಎಂ ಅಂಬಾನಿ ಪ್ರಕಟಣೆ ಹೊರಡಿಸಿದ್ದಾರೆ‌. ಅದರ ಪ್ರಕಾರ, ಶ್ರೀನಾಥ್ ದೇಗುಲ ನಗರವಾದ ನಾಥ್​ದ್ವಾರದಲ್ಲಿ ನಾವು ಇಂದು 5ಜಿ ಆಧಾರಿತ ವೈಫೈ ಸೇವೆ ಆರಂಭಿಸಿದ್ದೇವೆ. ಇದರ ಜೊತೆಗೆ ಬೇರೆ ಬೇರೆ ಪ್ರದೇಶಗಳಿಗೆ ನಮ್ಮ ಸೇವೆ ವಿಸ್ತರವಾಗಲಿದೆ. ಚೆನ್ನೈ ನಗರದಲ್ಲಿ ಕೂಡ ಜಿಯೋ ಟ್ರೂ5ಜಿ ವೆಲ್​ಕಮ್ ಆಫರ್ ನೀಡಲಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...