alex Certify ಇದೇ ನೋಡಿ ವಿಶ್ವದ ಅತ್ಯಂತ ಮೋಹಕ ಕ್ರೀಡೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದೇ ನೋಡಿ ವಿಶ್ವದ ಅತ್ಯಂತ ಮೋಹಕ ಕ್ರೀಡೆ…..!

ಅಂಬೆಗಾಲಿಡುವ ಮಕ್ಕಳು ಅತ್ತಿತ್ತ ಓಡಾಡುವುದನ್ನು ನೋಡಿದರೆ ಮನಸ್ಸಿಗಾನಂದವಾಗುತ್ತದೆ. ಅಂಥಾದ್ರಲ್ಲಿ ಈ ತೆವಳುತ್ತಿರುವ ಶಿಶುಗಳಿಗೆ ಓಟದ ಸ್ಪರ್ಧೆಯನ್ನಿಟ್ಟಿದ್ದನ್ನು ಎಂದಾದ್ರೂ ನೋಡಿದ್ದೀರಾ..? ಇದೀಗ, ಬಾಸ್ಕೆಟ್‌ಬಾಲ್ ಅಂಕಣದಲ್ಲಿ ಅಂಬೆಗಾಲಿಡುತ್ತಿರುವ ಮಕ್ಕಳ ಸ್ಪರ್ಧೆಯ ವಿಡಿಯೋ ವೈರಲ್ ಆಗುತ್ತಿದೆ.

ಅಂಬೆಗಾಲಿಡುವ ಮಕ್ಕಳಿಗಾಗಿ ಕ್ರಾಲಿಂಗ್ ರೇಸ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳು ಒಂದು ಕಡೆಯಿಂದ ತೆವಳಲು ಪ್ರಾರಂಭಿಸಿದ್ದಾರೆ. ಪುಟ್ಟ ಕಂದಮ್ಮಗಳನ್ನು ಅಂತಿಮ ಗೆರೆಯನ್ನು ತಲುಪಿಸುವುದು ಪೋಷಕರ ಗುರಿಯಾಗಿತ್ತು. ಪಾಪ……. ಆ ಪುಟ್ಟ ಕಂದಮ್ಮಗಳಿಗೇನು ಗೊತ್ತು ಇದು ಸ್ಪರ್ಧೆ ಅಂತಾ…..ಮಕ್ಕಳು ಪರಸ್ಪರ ಮೈಮರೆತು ಖುಷಿಯಿಂದ ಆಟವಾಡಲು ಪ್ರಾರಂಭಿಸಿದ್ದಾರೆ.

ಈ ವಿಡಿಯೋವನ್ನು 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 600ಕ್ಕೂ ಹೆಚ್ಚು ಬಳಕೆದಾರರು ಈ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ್ದಾರೆ. ಅನೇಕ ಬಳಕೆದಾರರು ವಿಡಿಯೋವನ್ನು ಮೆಚ್ಚಿದ್ದಾರೆ. ಆದರೆ, ಕೆಲವರು ಹಾಲುಗಲ್ಲದ ಕಂದಮ್ಮಗಳಿಗೆ ಈ ರೀತಿಯ ಸ್ಪರ್ಧೆ ಇಟ್ಟಿದ್ದನ್ನು ಟೀಕಿಸಿದ್ದಾರೆ.

— Tansu YEĞEN (@TansuYegen) May 26, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...