alex Certify ಇದು ಅಂತಿಂಥಾ ಕಸದ ಬ್ಯಾಗ್ ಅಲ್ಲ….! ಇದರ ಬೆಲೆ ಬರೋಬ್ಬರಿ 1.4 ಲಕ್ಷ ರೂಪಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಅಂತಿಂಥಾ ಕಸದ ಬ್ಯಾಗ್ ಅಲ್ಲ….! ಇದರ ಬೆಲೆ ಬರೋಬ್ಬರಿ 1.4 ಲಕ್ಷ ರೂಪಾಯಿ

ಹಸಿ ಕಸ-ಒಣ ಕಸ ಹೀಗೆ ಎರಡು ಭಾಗಗಳನ್ನ ನೋಡಿರ್ತಿರಾ ! ಈ ಕಸಗಳನ್ನ ಹಾಕುವುದಕ್ಕೆ ಎರಡು ಕವರ್‌ಗಳನ್ನ ಇಟ್ಟುಕೊಂಡಿರ್ತಿರಾ ? ಆ ಕವರ್‌ಗೆ ಅಬ್ಬಬ್ಬಾ ಅಂದ್ರೆ 10-20 ರೂಪಾಯಿ ಕೊಡ್ತಿರಾ ಅಷ್ಟೆ ತಾನೇ. ಆದ್ರೆ ಇಲ್ಲೊಂದು ಕಸದ ಬ್ಯಾಗ್ ಇದೆ ನೋಡಿ ಇದರ ಬೆಲೆ ಎಷ್ಟು ಅಂತ ಗೊತ್ತಾದ್ರೆ ಶಾಕ್ ಆಗ್ಬಿಡ್ತಿರಾ? ಬಿಕಾಸ್ ಆ ಕವರ್ ಬೆಲೆ 1.4 ಲಕ್ಷ ರೂಪಾಯಿ.

ಪ್ರಸಿದ್ಧ ಬ್ರಾಂಡ್‌ಗಳು ತಮ್ಮ ಪ್ರಾಡೆಕ್ಟ್ ವಿಶೇಷತೆ ಏನೇನು ಅನ್ನೋದು ಜನರಿಗೆ ಗೊತ್ತಾಗ್ಬೇಕು ಅಂತಾನೇ ಹೊಸ ಹೊಸ ರೀತಿಯ ಜಾಹೀರಾತು ಪ್ಲಾನ್ ಮಾಡ್ತಾರೆ. ಅದನ್ನ USP (Unique selling proposition) ಅಂತ ಹೇಳುತ್ತಾರೆ. ಪ್ರಸಿದ್ಧ ಐಷಾರಾಮಿ ಬ್ರಾಂಡ್ ಬಾಲೆನ್ಸಿಯಾಗ, ಇದೇ ರೀತಿ ಪ್ಲಾನ್ ಮಾಡಿದೆ. ಇದು ಇತ್ತೀಚೆಗೆ ಕಸವನ್ನು ಎಸೆಯಲು ವಿಶೇಷ ಚೀಲಗಳನ್ನು ಬಿಡುಗಡೆ ಮಾಡಿದೆ. ಬ್ರಾಂಡೆಡ್ ಕಂಪನಿ ಕಸದ ಚೀಲವನ್ನು ಮಾಡೋದು ಅಂದ್ರೆ ಸಾಮಾನ್ಯನಾ? ಕಸದ ಚೀಲ ಅದರೂ ಅದು ಸಾಮಾನ್ಯ ಚೀಲವಾಗಿರಲಿಲ್ಲ, ಆ ಚೀಲವನ್ನೇ ಹಿಡಿದುಕೊಂಡು ಫ್ಯಾಶನ್ ಶೋಗಳಲ್ಲಿ ರ್ಯಾಂಪ್ ವಾಕ್ ಮಾಡಿದ್ದಾರೆ.

ಇವು ವಿಶ್ವದ ಅತ್ಯಂತ ದುಬಾರಿ ಕಸದ ಚೀಲಗಳು ಎಂದು ಹೇಳಲಾಗುತ್ತಿದೆ. ಈ ಒಂದು ಕಸದ ಚೀಲದ ಬೆಲೆ 1 ಲಕ್ಷ 42 ಸಾವಿರ ರೂಪಾಯಿಗೂ ಹೆಚ್ಚು. ಈ ಕಂಪನಿಯು ಕಸದ ಚೀಲಕ್ಕೆ ‘ ಟ್ರಾಶ್ ಪೌಚ್‘ ಎಂದು ಹೆಸರಿಸಿದೆ. ಬಾಲೆನ್ಸಿಯಾ ತನ್ನ ವಿಶಿಷ್ಟ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಆದರೆ ಕಂಪನಿಯು ತನ್ನ ಈ ವಿಭಿನ್ನ ಯೋಜನೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆಗಿದೆ.

ಆನ್‌ಲೈನ್‌ನಲ್ಲಿ ಸದ್ಯ ಬ್ಯಾಗಗಳ ಫೋಟೋ ವೈರಲ್, ಇವು ‘Balenciaga’s Fall 2022 ready-to-wear collection’ ಕಾಣಿಸಿಕೊಂಡಿದ್ದವು. ಅಲ್ಲಿ ಮಾಡೆಲ್ಗ್‌ಗಳು ತಮ್ಮ ಕೈಯಲ್ಲಿ ಅವುಗಳನ್ನು ಸಾಗಿಸುತ್ತಿದ್ದರು. ಈಗ ಜನರು ಅಂಗಡಿಗೆ ಹೋಗಿ ಕಸದ ಚೀಲಗಳನ್ನೂ ಖರೀದಿಸಬಹುದು. ಅವರ ವಿನ್ಯಾಸದ ಬಗ್ಗೆ ಮಾತನಾಡುತ್ತ, ಅವರು ಮೊದಲ ನೋಟಕ್ಕೆ ಹೆಚ್ಚು ‘ವಿಶೇಷ‘ವಾಗಿ ಕಾಣುವುದಿಲ್ಲ. ಬ್ಯಾಗ್ ನೀಲಿ, ಹಳದಿ, ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ. ಈ ಚೀಲದ ಮುಂಭಾಗವು ಬಾಲೆನ್ಸಿಯಾಗ ಲೋಗೋವನ್ನುಹೊಂದಿದೆ. ಈ ಬ್ಯಾಗ್ ನೋಡಿ ಜನರು ಈಗ ತಮಾಷೆ ಮಾಡುತ್ತಿದ್ದಾರೆ. ಕಸ ಹಾಕೋದಕ್ಕೆ ಇಷ್ಟು ಕಾಸ್ಟ್ಲೀ ಬ್ಯಾಗ್ ಬೇಕಾ ಅಂತ ಹೇಳುತ್ತಿದ್ಧಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...