alex Certify ಆರೋಗ್ಯಕ್ಕೆ ಹಿತಕರ ‘ನುಗ್ಗೆಕಾಯಿʼ ಸೂಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ಹಿತಕರ ‘ನುಗ್ಗೆಕಾಯಿʼ ಸೂಪ್

ಈಗಂತೂ ಮಳೆಗಾಲ, ಏನಾದರೂ ಬಿಸಿಬಿಸಿಯಾಗಿರುವುದು ಮಾಡಿಕೊಂಡು ಕುಡಿಯೋಣ ಅನಿಸುತ್ತದೆ. ರುಚಿಯ ಜತೆಗೆ ಆರೋಗ್ಯಕರವಾದ ನುಗ್ಗೆಕಾಯಿ ಸೂಪ್ ಮಾಡುವ ವಿಧಾನ ಇಲ್ಲಿದೆ. ಆರೋಗ್ಯಕ್ಕೂ ತುಂಬಾ ಒಳ್ಳೆಯದು ಇದು.

ಬೇಕಾಗುವ ಸಾಮಾಗ್ರಿಗಳು:

2 ಕಪ್ – ನುಗ್ಗೆಕಾಯಿ ಪೀಸ್, 1 ಟೀ ಸ್ಪೂನ್ – ಬೆಣ್ಣೆ, ½ ಕಪ್ – ಕತ್ತರಿಸಿದ ಈರುಳ್ಳಿ, ½ ಕಪ್ – ಕತ್ತರಿಸಿದ ಆಲೂಗಡ್ಡೆ, ½ ಕಪ್ – ಹಾಲು, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:

ಒಂದು ಕುಕ್ಕರ್ ಗೆ ಬೆಣ್ಣೆ ಹಾಕಿಕೊಂಡು ಅದಕ್ಕೆ ಈರುಳ್ಳಿ, ಆಲೂಗಡ್ಡೆ, ನುಗ್ಗೆಕಾಯಿ ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 2 ಕಪ್ ನೀರು ಹಾಕಿ 3 ವಿಷಲ್ ಕೂಗಿಸಿಕೊಳ್ಳಿ.

ಕುಕ್ಕರ್ ತಣ್ಣಗಾದ ಮೇಲೆ ಈ ಮಿಶ್ರಣವನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಅದಕ್ಕೆ ಹಾಲು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.

ನಂತರ ಇದನ್ನು ಸೋಸಿಕೊಂಡು ಒಂದು ನಾನ್ ಸ್ಟಿಕ್ ಪ್ಯಾನ್ ಗೆ ಹಾಕಿಕೊಂಡು ಉಪ್ಪು, ಕಾಳು ಮೆಣಸಿನಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 3 ನಿಮಿಷಗಳ ಕಾಲ ಕುದಿಸಿಕೊಂಡರೆ ರುಚಿಕರವಾದ ನುಗ್ಗೆಕಾಯಿ ಸೂಪ್ ರೆಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...