alex Certify ಆಪರೇಷನ್ ಗಂಗಾ; ಇದುವರೆಗು ಕರ್ನಾಟಕಕ್ಕೆ ವಾಪಸ್ಸಾದ ವಿದ್ಯಾರ್ಥಿಗಳೆಷ್ಟು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪರೇಷನ್ ಗಂಗಾ; ಇದುವರೆಗು ಕರ್ನಾಟಕಕ್ಕೆ ವಾಪಸ್ಸಾದ ವಿದ್ಯಾರ್ಥಿಗಳೆಷ್ಟು ಗೊತ್ತಾ….?

ಪ್ರಸ್ತುತ ನಡೆಯುತ್ತಿರುವ ಯುದ್ಧದಿಂದ ಉಕ್ರೇನ್‌ನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳ ಪಾಡು ಅತಂತ್ರವಾಗಿದೆ. ಆದರೆ ಜೀವ ಉಳಿದರೆ ಸಾಕು ಎಂದು ಸಾವಿರಾರು ಭಾರತೀಯ ವಿದ್ಯಾರ್ಥಿಗಳು, ತಾಯ್ನಾಡಿಗೆ ಮರಳಿದ್ದಾರೆ. ಆಪರೇಷನ್ ಗಂಗಾದ ಮೂಲಕ ಸಾವಿರಾರು ಜನರನ್ನು ಭಾರತಕ್ಕೆ ವಾಪಸ್ಸು ಕರೆತರಲಾಗಿದೆ.

ಇಲ್ಲಿಯವರೆಗೆ ಯುದ್ಧ ಪೀಡಿತ ಉಕ್ರೇನ್‌ನಿಂದ ರಾಜ್ಯಕ್ಕೆ 458 ವಿದ್ಯಾರ್ಥಿಗಳು ವಾಪಸ್ಸಾಗಿದ್ದಾರೆ. ಆಪರೇಷನ್ ಗಂಗಾದ ವಿವಿಧ ವಿಮಾನಗಳ ಮೂಲಕ ದೆಹಲಿ, ಮುಂಬೈ ಮೂಲಕ ಬೆಂಗಳೂರಿಗೆ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ಹೈದ್ರಾಬಾದ್ ಮೂಲಕ ಸಹ ಮನೆಗೆ ಮರಳಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.

ಯುದ್ಧ ಭೂಮಿಯಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೇನಾ ಜೋಡಿ

ಕಳೆದ ಎಂಟು ದಿನಗಳಿಂದ ಯುದ್ಧ ಪೀಡಿತ ದೇಶದಿಂದ ಭಾರತೀಯರ ಸ್ಥಳಾಂತರ ನಡೆಯುತ್ತಿದೆ. ಅದರಲ್ಲಿ ಮಾರ್ಚ್‌ 3ನೇ ತಾರೀಖಿನಂದು ಅತಿ ಹೆಚ್ಚು ಅಂದರೆ 104 ವಿದ್ಯಾರ್ಥಿಗಳು ಕರ್ನಾಟಕಕ್ಕೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಸಹ 50 ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕಕ್ಕೆ ಮರಳಿದ ವಿದ್ಯಾರ್ಥಿಗಳ ಸಂಖ್ಯೆ

27/02/2022 – 30

28/02/2022 – 07

01/03/2022 – 18

02/03/2022 – 31

03/03/2022 -104

04/03/2022 – 92

05/03/2021 – 90

06/03/2022 – 86

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...