alex Certify ಆನ್ ಲೈನ್ ಮದುವೆಗೆ ಕೋರ್ಟ್ ಒಪ್ಪಿಗೆ: ಇಂಗ್ಲೆಂಡ್ ನಲ್ಲಿದ್ದುಕೊಂಡೇ ಕೇರಳದಲ್ಲಿನ ವಧು ಜೊತೆ ಸಪ್ತಪದಿ ತುಳಿಯಲಿರುವ ವರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ ಲೈನ್ ಮದುವೆಗೆ ಕೋರ್ಟ್ ಒಪ್ಪಿಗೆ: ಇಂಗ್ಲೆಂಡ್ ನಲ್ಲಿದ್ದುಕೊಂಡೇ ಕೇರಳದಲ್ಲಿನ ವಧು ಜೊತೆ ಸಪ್ತಪದಿ ತುಳಿಯಲಿರುವ ವರ…!

ದೇಶದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸ್ಥಳೀಯ ಸರ್ಕಾರಗಳು ಹಲವಾರು ಮಾರ್ಗಸೂಚಿಗಳನ್ನು ಪ್ರಕಟಿಸುತ್ತಿದ್ದು, ಮದುವೆ ಮಾಡಿಕೊಳ್ಳುವ ಜೋಡಿಗಳು ಪರದಾಡುವ ಸ್ಥಿತಿ ಬಂದೊದಗಿದೆ.

ಈ ನಿಟ್ಟಿನಲ್ಲಿ ಕೇರಳ ಕೋರ್ಟ್, ಜೋಡಿಗೆ ಆನ್ ಲೈನ್ ನಲ್ಲಿಯೇ ಮದುವೆ ಮಾಡಿಕೊಳ್ಳಲು ಅವಕಾಶ ನೀಡಿದೆ.

ಸ್ವಂತ ಸೂರು ಹೊಂದುವ ಕನಸು ಕಂಡ ರಾಜ್ಯದ ಜನತೆಗೆ ಭರ್ಜರಿ ಗುಡ್‌ ನ್ಯೂಸ್

ಕೇರಳದ ಅನಂತ ಕೃಷ್ಣ ಹರಿಕುಮಾರನ್ ನಾಯರ್ ಎಂಬುವವರು ಬ್ರಿಟನ್ ಗೆ ಉನ್ನತ ವ್ಯಾಸಂಗಕ್ಕೆಂದು ತೆರಳಿದ್ದರು. ಡಿ.23ರಂದು ಅವರ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ ಅವರು ಡಿ.22ಕ್ಕೆ ದೇಶಕ್ಕೆ ಬರಲು ಟಿಕೆಟ್ ಬುಕ್ ಮಾಡಿದ್ದರು. ಆದರೆ, ಅಲ್ಲಿ ಓಮಿಕ್ರಾನ್ ಹಾವಳಿ ವಿಪರೀತವಾಗಿರುವುದರಿಂದಾಗಿ ದೇಶಕ್ಕೆ ಬರಲು ಅನಂತ ಕೃಷ್ಣ ಅವರಿಗೆ ತೊಂದರೆಯಾಗಿತ್ತು.

ಈ ನಿಟ್ಟಿನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಈ ಜೋಡಿ, ಕೇರಳ ಕೋರ್ಟ್ ನ ಮೊರೆ ಹೋಗಿದ್ದು, ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಆನ್ ಲೈನ್ ಮದುವೆಯಾಗಲು ಒಪ್ಪಿಗೆ ಸೂಚಿಸಿದೆ. ಅಲ್ಲದೇ, ಮದುವೆ ನೋಂದಣಿ ಅಧಿಕಾರಿಗಳಿಗೆ ನಿರ್ದೇಶನವನ್ನು ಕೂಡ ಕೋರ್ಟ್ ನೀಡಿದೆ.

ಅನಂತ ಕೃಷ್ಣ ಅವರು ರಿಂತು ಥಾಮಸ್ ಎಂಬುವವರನ್ನು ವಿವಾಹವಾಗಲು ನಿರ್ಧರಿಸಿದ್ದರು. ಸದ್ಯ ಕೋರ್ಟ್ ನ ಅನುಮತಿಯಂತೆ ಆನ್ ಲೈನ್ ಮದುವೆ ತಯಾರಿ ನಡೆಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...