alex Certify ಆನ್​ಲೈನ್​​ನಲ್ಲಿ ಐ ಫೋನ್​ 13 ಪ್ರೋ ಮ್ಯಾಕ್ಸ್​​ ಖರೀದಿಸಿದ್ದವನಿಗೆ ಕಾದಿತ್ತು ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್​ಲೈನ್​​ನಲ್ಲಿ ಐ ಫೋನ್​ 13 ಪ್ರೋ ಮ್ಯಾಕ್ಸ್​​ ಖರೀದಿಸಿದ್ದವನಿಗೆ ಕಾದಿತ್ತು ಶಾಕ್​..!

ಆನ್​ಲೈನ್​​ನಲ್ಲಿ ಏನಾದರೂ ಆರ್ಡರ್​ ಮಾಡಿ ಅದು ಯಾವಾಗ ನಮ್ಮ ಕೈ ಸೇರುತ್ತೆ ಅಂತಾ ಕಾಯೋದ್ರಲ್ಲಿ ಇರುವ ಸಂತೋಷವೇ ಬೇರೆ. ಅದೇ ರೀತಿ ಆನ್​ಲೈನ್​ ವೆಬ್​ಸೈಟ್​ನಲ್ಲಿ ಐಫೋನ್​ 13 ಪ್ರೋ ಮ್ಯಾಕ್ಸ್​ ಬುಕ್​ ಮಾಡಿ ಕಾತುರದಿಂದ ಕಾಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಭ್ರಮ ನಿರಸನವಾಗಿದೆ.

ಸರಿಯಾದ ಸಮಯಕ್ಕೆ ಡೆಲಿವರಿ ನೀಡದೇ 2 ವಾರಗಳ ಕಾಲ ಕಾಯಿಸಿದರೂ ಸಹ ಕಾದ ಡೇನಿಯಲ್​​ ಕೊನೆಗೂ ತಮ್ಮ ಕೈಗೆ ಪಾರ್ಸಲ್​ ಬಂದು ತಲುಪುತ್ತಿದ್ದಂತೆಯೇ ಸಖತ್​ ಖುಶ್​ ಆಗಿದ್ದರು. ಆದರೆ ಡೆಲಿವರಿ ಪ್ಯಾಕ್ ಒಡೆದು ನೋಡುತ್ತಿದ್ದಂತೆಯೇ ಐ ಫೋನ್​ ಬದಲು ಎರಡು ಕ್ಯಾಡ್ಬರಿ ಚಾಕಲೇಟ್​ ಹಾಗೂ ಟಾಯ್ಲೆಟ್​ ಟಿಶ್ಯೂ ಪೇಪರ್​ ಇರೋದನ್ನು ಕಂಡು ಶಾಕ್​ ಆಗಿದ್ದಾರೆ.

ಲಾಜಿಸ್ಟಿಕ್​ ಕೆಲಸ ಮಾಡುವ ಕ್ಯಾರೋಲ್​​ ಟ್ವಿಟರ್​ನಲ್ಲಿ ಈ ವಿಚಾರವನ್ನು ಶೇರ್​ ಮಾಡಿದ್ದಾರೆ. ವಾರಗಳ ಕಾಲ ಕಾದ ಬಳಿಕ ನನ್ನ ಹೊಚ್ಚ ಹೊಸ ಐಫೋನ್​ 13 ಪ್ರೋ ಮ್ಯಾಕ್ಸ್​​ ಡೆಲಿವರಿ ಪಡೆದಿದ್ದೆ. ಕ್ರಿಸ್​ಮಸ್​ನಂದು ನಾನು ಸ್ವೀಕರಿಸಿದ ಪಾರ್ಸೆಲ್​ ಬಾಕ್ಸಿನಲ್ಲಿ ಮೊಬೈಲ್​ನ ಬದಲು ಚಾಕಲೇಟ್​ ಹಾಗೂ ಟಿಶ್ಯೂ ಪೇಪರ್​ ಇಡಲಾಗಿದೆ ಎಂದು ಬರೆದಿದ್ದಾರೆ.

ಈ ಪೋಸ್ಟ್​ ವೈರಲ್​ ಆಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಬ್ರಿಟನ್​​ನ ಡಿಹೆಚ್ಎಲ್ ನೆಟ್​ವರ್ಕ್​ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಕ್ಯಾರೋಲ್​ಗೆ ಶೀಘ್ರದಲ್ಲಿಯೇ ಮೊಬೈಲ್​ ಫೋನ್​ ಕಳುಹಿಸಲಾಗುತ್ತದೆ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...