alex Certify ಆದಾಯ ತೆರಿಗೆ ಉಳಿಸಲು ಪ್ಲಾನ್‌ ಮಾಡ್ತಿದ್ದೀರಾ…? ಇಲ್ಲಿದೆ ನೋಡಿ ಬೆಸ್ಟ್‌ ಯೋಜನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆದಾಯ ತೆರಿಗೆ ಉಳಿಸಲು ಪ್ಲಾನ್‌ ಮಾಡ್ತಿದ್ದೀರಾ…? ಇಲ್ಲಿದೆ ನೋಡಿ ಬೆಸ್ಟ್‌ ಯೋಜನೆ

ಪ್ರತಿವರ್ಷ  ಆದಾಯ ತೆರಿಗೆ ಪಾವತಿಸುವ ಸಮಯ ಬರ್ತಿದ್ದಂತೆ ಅನೇಕರು ತೆರಿಗೆಯಲ್ಲಿ ಹಣ ಉಳಿಸಲು ವಿಧಾನಗಳನ್ನು ಹುಡುಕುತ್ತಾರೆ. ಟ್ಯಾಕ್ಸ್‌ ಉಳಿತಾಯಕ್ಕಾಗಿ ಮಾರುಕಟ್ಟೆಯಲ್ಲಿ ಹತ್ತಾರು ಬಗೆಯ ಹೂಡಿಕೆ ಯೋಜನೆಗಳಿವೆ. ಆದ್ರೆ ಸೂಕ್ತವಾದುದನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು.

2006ರ ಎಸ್‌ ಬಿ ಐ ತೆರಿಗೆ ಉಳಿತಾಯ ಯೋಜನೆ ಇವುಗಳಲ್ಲೊಂದು. ಈ ಯೋಜನೆ ಕನಿಷ್ಠ 5 ವರ್ಷ ಮತ್ತು ಗರಿಷ್ಠ 10 ವರ್ಷಗಳ ಅವಧಿಯನ್ನು ಹೊಂದಿದೆ. ಹೂಡಿಕೆದಾರ ಕನಿಷ್ಠ 1000 ರೂಪಾಯಿ ಹೂಡಿಕೆ ಮಾಡಬೇಕು. ಹೂಡಿಕೆಯ ಮಿತಿ ವರ್ಷಕ್ಕೆ 1.5 ಲಕ್ಷ ರೂಪಾಯಿ ಮೀರುವಂತಿಲ್ಲ.

ಬಡ್ಡಿದರ: ಈ ತೆರಿಗೆ ಉಳಿತಾಯ ಯೋಜನೆಯ ಬಡ್ಡಿ ದರವು, ಫಿಕ್ಸೆಡ್‌ ಡೆಪಾಸಿಟ್‌ ನ ಬಡ್ಡಿ ದರಕ್ಕೆ ಸರಿಸಮನಾಗಿರುತ್ತದೆ. 5 ರಿಂದ 15 ವರ್ಷಗಳೊಳಗೆ ಮೆಚ್ಯೂರಿಟಿ ಹೊಂದುವ ಎಸ್‌ ಬಿ ಐ ಎಫ್‌.ಡಿ. ಮೇಲೆ ಗ್ರಾಹಕರಿಗೆ ಶೇ. 5.5 ರಷ್ಟು ಬಡ್ಡಿ ನೀಡಲಾಗುತ್ತಿದೆ.

ನಿಯಮಗಳು: ಈ ಯೋಜನೆಯ ಅಡಿಯಲ್ಲಿ 5 ವರ್ಷಗಳೊಳಗೆ ಖಾತೆಯನ್ನು ಹಿಂಪಡೆಯುವಂತಿಲ್ಲ. ಠೇವಣಿದಾರರು ತಮ್ಮ ಖಾತೆಗೆ ತಮ್ಮನ್ನೇ ನಾಮಿನೇಟ್‌ ಮಾಡಬಹುದು.

ತೆರಿಗೆ ವಿನಾಯಿತಿ : ಈ ಯೋಜನೆಯಲ್ಲಿ 1961ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ತೆರಿಗೆ ವಿನಾಯಿತಿಗಳನ್ನು ಒದಗಿಸುತ್ತದೆ. ಟಿಡಿಎಸ್ ಅನ್ನು ಪ್ರಮಾಣಿತ ದರದಲ್ಲಿ ವಿಧಿಸಲಾಗುತ್ತದೆ. ಆದಾಯ ತೆರಿಗೆ ಕಡಿತದಿಂದ ವಿನಾಯಿತಿ ಪಡೆಯಲು ಠೇವಣಿದಾರರು ಫಾರ್ಮ್ 15G/15H ಅನ್ನು ಸಲ್ಲಿಸಬಹುದು.

ಅರ್ಹತೆ : ಯಾವುದೇ ಸ್ಥಳೀಯ ಭಾರತೀಯರು ಒಬ್ಬ ವ್ಯಕ್ತಿಯಾಗಿ ಅಥವಾ ಹಿಂದೂ ಅವಿಭಜಿತ ಕುಟುಂಬದ ಸದಸ್ಯನಾಗಿ ಖಾತೆಯನ್ನು ತೆರೆಯಬಹುದು. ಇದಕ್ಕಾಗಿ ಶಾಶ್ವತ ಖಾತೆ ಸಂಖ್ಯೆ (PAN) ಹೊಂದಿರಬೇಕು. ಜಂಟಿ ಖಾತೆಯನ್ನು ಇಬ್ಬರಿಗೆ ಕೊಡಲಾಗುತ್ತದೆ. ಓರ್ವ ವಯಸ್ಕ ಮತ್ತೋರ್ವ ಅಪ್ರಾಪ್ತನಿರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...