alex Certify ಅಮ್ಮನಿಗೆ ಕೊಟ್ಟ ಮಾತು ಉಳಿಸಿಕೊಂಡ ʼಟಗರು ಪುಟ್ಟಿʼ : ಮಾಸ್ಟರ್​ ಡಿಗ್ರಿ ಪಡೆದ ಮಾನ್ವಿತಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮನಿಗೆ ಕೊಟ್ಟ ಮಾತು ಉಳಿಸಿಕೊಂಡ ʼಟಗರು ಪುಟ್ಟಿʼ : ಮಾಸ್ಟರ್​ ಡಿಗ್ರಿ ಪಡೆದ ಮಾನ್ವಿತಾ

ʼಟಗರುʼ ಸಿನಿಮಾ ಮೂಲಕ ಚಂದನವನದಲ್ಲಿ ಭಾರಿ ಹೆಸರು ಗಳಿಸಿದ ನಟಿ ಮಾನ್ವಿತಾ ಹರೀಶ್​ ಇದಾದ ಬಳಿಕ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆಮೇಲೆ ಮಾನ್ವಿತಾ ಹರೀಶ್​ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರಲೇ ಇಲ್ಲ. ಸ್ಯಾಂಡಲ್​ವುಡ್​ನಲ್ಲಿ ಮಾನ್ವಿತಾ ಹರೀಶ್​ ಕಾಲ ಮುಗೀತಾ ಎಂದುಕೊಳ್ಳುವಾಗಲೇ ಇದಕ್ಕೆ ಸ್ಪಷ್ಟನೆ ನೀಡಿರುವ ಟಗರು ಪುಟ್ಟಿ ಅಮ್ಮನಿಗೆ ಕೊಟ್ಟ ಮಾತಿನಂತೆ ತಾವು ಚಿತ್ರರಂಗದಿಂದ ದೂರ ಇದ್ದಿದ್ದಾಗಿ ಹೇಳಿಕೊಂಡಿದ್ದಾರೆ.

ಮಾನ್ವಿತಾ ಹರೀಶ್​ ಸ್ನಾತಕೋತ್ತರ ಪದವಿ ಪೂರೈಸಬೇಕು ಎನ್ನುವುದು ಅವರ ತಾಯಿಯ ಕನಸಾಗಿತ್ತು. ತಾಯಿಗೆ ಕೊಟ್ಟ ಮಾತಿನಂತೆ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಮಾನ್ವಿತಾ ಇದೀಗ ತಮ್ಮ ಪದವಿಯನ್ನು ಡಿಸ್ಟಿಂಕ್ಷನ್​ ಅಂಕಗಳೊಂದಿಗೆ ಪಾಸ್​ ಆಗುವ ಮೂಲಕ ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಈ ವಿಚಾರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್​ ಮಾಡಿರುವ ನಟಿ ಮಾನ್ವಿತಾ ಕಾಮತ್​, ನಾನು ನನ್ನ ಸ್ನಾತಕೋತ್ತರ ಪದವಿ ಪೂರೈಸಬೇಕು ಎಂಬ ನಿರ್ಧಾರವನ್ನು ಕೈಗೊಂಡ ಬಳಿಕ ನನ್ನ ಜೀವನದಲ್ಲಿ ಹಲವು ಏರಿಳಿತಗಳು ಸಂಭವಿಸಿದೆ, ಸಿನಿಮಾದಿಂದ ದೀರ್ಘ ವಿರಾಮವನ್ನು ಪಡೆದುಕೊಂಡು ನನ್ನ ಉಳಿತಾಯದ ಹಣದಲ್ಲಿ ಬದುಕುವುದು ಸುಲಭವಾಗಿರಲಿಲ್ಲ. ಆದರೆ ನಾನು ಇದನ್ನು ಮಾಡಲೇಬೇಕಿತ್ತು. ಯಾಕೆಂದರೆ ನಾನು ನನ್ನ ತಾಯಿಗೆ ಪ್ರಾಮಿಸ್​ ಮಾಡಿದ್ದೆ. ಇಂದು ಅದಕ್ಕೆಲ್ಲ ಬೆಲೆ ಸಿಕ್ಕಿದೆ. ನಾನು ಡಿಸ್ಟಿಂಕ್ಷನ್​​ನಲ್ಲಿ ಪಾಸ್​ ಆಗಿದ್ದೇನೆ. ಇನ್ಮುಂದೆ ನನ್ನ ಫೋಕಸ್​ ಏನಿದ್ದರೂ ಸಿನಿಮಾ ಎಂದು ಬರೆದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...