alex Certify ಅಮೆರಿಕಾ ಯೂಟ್ಯೂಬರ್ ಸಹಾಯದಿಂದ ನಕಲಿ ಕಾಲ್ ಸೆಂಟರ್ ಮೇಲೆ ಪಶ್ಚಿಮ ಬಂಗಾಳ ಪೊಲೀಸರಿಂದ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾ ಯೂಟ್ಯೂಬರ್ ಸಹಾಯದಿಂದ ನಕಲಿ ಕಾಲ್ ಸೆಂಟರ್ ಮೇಲೆ ಪಶ್ಚಿಮ ಬಂಗಾಳ ಪೊಲೀಸರಿಂದ ದಾಳಿ

ಪಶ್ಚಿಮ ಬಂಗಾಳ ಪೊಲೀಸರು ಇತ್ತೀಚೆಗೆ ಅಮೆರಿಕಾದ ಯೂಟ್ಯೂಬರ್, ಮಾರ್ಕ್ ರಾಬರ್ ನೀಡಿದ ಮಾಹಿತಿ ಆಧಾರದ ಮೇಲೆ ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ಮಾಡಿದ್ದಾರೆ.

ನ್ಯೂ ಟೌನ್ ಆಧಾರಿತ ಎಂಇಟಿ  ಟೆಕ್ನಾಲಜೀಸ್‌ನ ವಂಚಕರು ಅಮೆರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಜನರನ್ನು ವಂಚಿಸುತ್ತಿದ್ದರು. ಕಂಪನಿಯು 2010 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಇದನ್ನು ಯೂಟ್ಯೂಬರ್ ಮಾರ್ಕ್ ರಾಬರ್ ಅವರ ವಿಡಿಯೋದಲ್ಲಿ ತೋರಿಸಲಾಗಿದೆ.

ವರದಿ ಪ್ರಕಾರ, ತನಿಖೆ ಪ್ರಕ್ರಿಯೆಯಲ್ಲಿದ್ದಾಗ, ಅವರ ಗ್ಯಾಜೆಟ್‌ಗಳು, ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಈ ಕಾರ್ಯಾಚರಣೆಯನ್ನು ಅಂತರರಾಷ್ಟ್ರೀಯ ನಕಲಿ ಕಾಲ್ ಸೆಂಟರ್ ರಾಕೆಟ್ ಎಂದು ಕರೆದಿದ್ದಾರೆ. ಇದರ ಮೈನ್ ಕಿಂಗ್ ಪಿನ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವಿಡಿಯೋದಲ್ಲಿ ಯೂಟ್ಯೂಬರ್, ರಾಬರ್ ಕಂಪನಿಯ ಕಚೇರಿಯಲ್ಲಿನ ಸ್ಟಿಂಕ್ ಬಾಂಬ್‌ಗಳು, ಗ್ಲಿಟರ್ ಬಾಂಬ್‌ಗಳು, ಜಿರಳೆಗಳು, ಇಲಿಗಳು ಮತ್ತು ಹೊಗೆ ಬಾಂಬ್‌ಗಳನ್ನು ಹೊಂದಿಸಲು ಸಹ ಯೂಟ್ಯೂಬರ್‌ಗಳಾದ ಜಿಮ್ ಬ್ರೌನಿಂಗ್ ಮತ್ತು ಟ್ರೈಲಾಜಿ ಮೀಡಿಯಾ ಅವರೊಂದಿಗೆ ಸಹಕರಿಸಿದ್ದಾರೆ. ಈ ತಂಡದ ಕಾರ್ಯದಿಂದಾಗಿ ಭಾರತದಲ್ಲಿದ್ದ ಹಲವಾರು ನಕಲಿ ಕಾಲ್ ಸೆಂಟರ್‌ಗಳನ್ನು ಮುಚ್ಚಲು ಕಾರಣವಾಯಿತು.

ಕೋಲ್ಕತ್ತಾ ಪೊಲೀಸರನ್ನು ಸಂಪರ್ಕಿಸಿದರೂ ಆರಂಭದಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಹೇಳಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡ ನಂತರ 26,381,592 ವೀಕ್ಷಣೆಗಳನ್ನು ಗಳಿಸಿದೆ. ಈ ತಂಡದ ಅದ್ಭುತ ಕೆಲಸಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

— Mark Rober (@MarkRober) May 12, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...