alex Certify ಅಭಿಮಾನಿಗೆ ತನ್ನ ಜೆರ್ಸಿಯನ್ನೇ ಉಡುಗೊರೆಯಾಗಿ ನೀಡಿದ ವಿರಾಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿಗೆ ತನ್ನ ಜೆರ್ಸಿಯನ್ನೇ ಉಡುಗೊರೆಯಾಗಿ ನೀಡಿದ ವಿರಾಟ್

ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಸಾಧಿಸಿದ ಬಳಿಕ ಬ್ಯಾಟಿಂಗ್​ ಸೂಪರ್​ ಸ್ಟಾರ್​ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್​ ಕೊಹ್ಲಿ ಅಭಿಮಾನಿಯೊಬ್ಬರನ್ನು ಸಂತಸಪಡಿಸಿದ್ದಾರೆ. ಹೋಟೆಲ್​ಗೆ ತೆರಳಲು ತಂಡದ ಬಸ್​ ಹತ್ತುವ ಮುನ್ನ ಕೊಹ್ಲಿ ಅಭಿಮಾನಿಯೊಬ್ಬರಿಗೆ ತಮ್ಮ ಜೆರ್ಸಿಯನ್ನು ನೀಡಿದ್ದಾರೆ.

ಈ ಟೆಸ್ಟ್​ ಪಂದ್ಯವು ಅನೇಕ ಕಾರಣಗಳಿಂದಾಗಿ ಹೆಚ್ಚು ಸ್ಮರಣೀಯವಾಗಿದೆ. ಸಚಿನ್​ ತೆಂಡೂಲ್ಕರ್​, ರಾಹುಲ್​ ದ್ರಾವಿಡ್​, ಸೌರವ್​ ಗಂಗೂಲಿ ಮುಂತಾದವರಂತೆ ಈ ಸಾಧನೆ ಮಾಡಿದ 12ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕೊಹ್ಲಿ ಅಂತಾರಾಷ್ಟ್ರೀಯ ವೃತ್ತಿ ಜೀವನದ 100ನೇ ಟೆಸ್ಟ್​ ಪಂದ್ಯವನ್ನು ಪೂರೈಸಿದ್ದಾರೆ.

ತಂಡದ ಆಟಗಾರ ರವೀಂದ್ರ ಜಡೇಜಾ ಒಂದು ಟೆಸ್ಟ್​ ಪಂದ್ಯದಲ್ಲಿ 150ಕ್ಕೂ ಅಧಿಕ ರನ್​ ಹಾಗೂ 9 ವಿಕೆಟ್​ಗಳನ್ನು ಕಿತ್ತ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಜಡೇಜಾ ಅಜೇಯ 175 ರನ್​ಗಳನ್ನು ಸಿಡಿಸಿದ್ದರು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...