alex Certify ಅಭಿಮಾನಿಗಳ ತಲೆಗೆ ಹುಳಬಿಟ್ಟ ವಿರಾಟ್ ಕೊಹ್ಲಿ…! ನೀವೂ ಅದನ್ನು ಕಂಡು ಹಿಡಿಯಲು ಪ್ರಯತ್ನಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿಗಳ ತಲೆಗೆ ಹುಳಬಿಟ್ಟ ವಿರಾಟ್ ಕೊಹ್ಲಿ…! ನೀವೂ ಅದನ್ನು ಕಂಡು ಹಿಡಿಯಲು ಪ್ರಯತ್ನಿಸಿ

ಕ್ರಿಕೆಟಿಗ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಮೂಲಕ ಫೋಟೋ, ವಿಡಿಯೋ ವಿಶಿಷ್ಟ ವಿಚಾರಗಳನ್ನು ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಳ್ಳುತ್ತಾರೆ. ಇದೀಗ ಟ್ವಿಟ್ಟರ್ ನಲ್ಲಿ ತಮ್ಮ ಗ್ಯಾಂಗ್ ಫೋಟೋವನ್ನು ಪೋಸ್ಟ್ ಮಾಡಿರುವ ಅವರು, ಇದರಲ್ಲಿ ಬೆಸವನ್ನು ಕಂಡು ಹಿಡಿಯಿರಿ ಎಂದು ಶೀರ್ಷಿಕೆ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಹತ್ತು ಮಂದಿ ಕ್ರಿಕೆಟಿಗರು ಬೂದು ಬಣ್ಣದ ಸೂಟ್ ಮತ್ತು ಬಿಳಿ ಸ್ನೀಕರ್‌ಗಳನ್ನು ಧರಿಸಿದ್ದಾರೆ. ಅವರು ಒಂದೇ ರೀತಿಯ ಕೇಶವಿನ್ಯಾಸ, ಗಡ್ಡವನ್ನು ಸಹ ಹೊಂದಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಯು ತನ್ನ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದು, ಆ ಚಿತ್ರದಲ್ಲಿ ಒಬ್ಬ ವಿರುದ್ಧವಾಗಿರುವ ವ್ಯಕ್ತಿಯನ್ನು ಕಂಡುಹಿಡಿಯುವಂತೆ ಸವಾಲು ಹಾಕಿದ್ದಾರೆ.

ಸಹಜವಾಗಿ, ಟ್ವಿಟ್ಟರ್ ಬಳಕೆದಾರರು ಕಾಮೆಂಟ್‌ ವಿಭಾಗವನ್ನು ಉಲ್ಲಾಸದ ಮೆಮೆಗಳೊಂದಿಗೆ ತುಂಬಿದ್ದಾರೆ. ಕೆಲವರು ವಿರಾಟ್ ಕೊಹ್ಲಿ ಅವರ ಈ ಗ್ಯಾಂಗ್ ಚಿತ್ರದ ಸ್ಟ್ರಿಂಗ್ ಅನ್ನು ಪೋಸ್ಟ್ ಮಾಡಿದ್ದು, ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಬಳಕೆದಾರನೊಬ್ಬ ಶಾಲೆ/ಕಾಲೇಜು ಪ್ರಶ್ನೆಪತ್ರಿಕೆಯಲ್ಲಿ ಬರುವ ಬಹುಆಯ್ಕೆಯ ಪ್ರಶ್ನೆಯಂತೆ ತೋರುತ್ತದೆ ಅಂತಾ ಪ್ರತಿಕ್ರಿಯಿಸಿದ್ದಾನೆ. ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿನ ತನ್ನ ಪಾಸ್‌ವರ್ಡ್‌ಗಳು ಹೀಗಿರುತ್ತವೆ ಅಂತಾ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

— Virat Kohli (@imVkohli) February 20, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...