alex Certify ‘ಅಪ್ಪು’ ಫೋಟೋದೊಂದಿಗೆ ಚಿತ್ರಮಂದಿರಕ್ಕೆ ಬಂದು ಬೈರಾಗಿ ವೀಕ್ಷಿಸಿದ ಅಭಿಮಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಪ್ಪು’ ಫೋಟೋದೊಂದಿಗೆ ಚಿತ್ರಮಂದಿರಕ್ಕೆ ಬಂದು ಬೈರಾಗಿ ವೀಕ್ಷಿಸಿದ ಅಭಿಮಾನಿ

ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ನಮ್ಮನಗಲಿ ಎಂಟು ತಿಂಗಳು ಕಳೆದರೂ ಸಹ ಜನಮಾನಸದಲ್ಲಿ ಅವರು ಶಾಶ್ವತವಾಗಿ ನೆಲೆಸಿದ್ದಾರೆ. ಇಂದಿಗೂ ಸಹ ಪ್ರತಿ ಊರಿನಲ್ಲೂ ‘ಅಪ್ಪು’ ಅವರ ಭಾವಚಿತ್ರ ಕಂಡು ಬರುತ್ತದೆ.

ಅಲ್ಲದೆ ಅವರ ನೆನಪಿನಲ್ಲಿ ಬಹಳಷ್ಟು ರಸ್ತೆಗಳು, ಬಡಾವಣೆಗಳಿಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನಿಡಲಾಗಿದೆ. ಜೊತೆಗೆ ವಿಜಯನಗರದಲ್ಲಿ ಪುನೀತ್ ರಾಜಕುಮಾರ್ ಅವರ ಬೃಹತ್ ಪುತ್ಥಳಿಯನ್ನು ಸ್ಥಾಪಿಸಲಾಗಿತ್ತು.

ಇದೀಗ ಅಭಿಮಾನಿಯೊಬ್ಬರು ಅಪ್ಪು ಅವರ ಫೋಟೋದೊಂದಿಗೆ ಚಿತ್ರಮಂದಿರಕ್ಕೆ ಬಂದು ಬೈರಾಗಿ ಸಿನಿಮಾ ವೀಕ್ಷಿಸುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ. ಇಂತದೊಂದು ಘಟನೆ ಮಂಡ್ಯದಲ್ಲಿ ನಡೆದಿದ್ದು, ತಾಲೂಕಿನ ಸಾತನೂರು ಮೋಹನ್ ಅವರು 2 ಟಿಕೆಟ್ ಗಳನ್ನು ಖರೀದಿಸಿ ಚಿತ್ರಮಂದಿರದ ಒಂದು ಆಸನದ ಮೇಲೆ ಪುನೀತ್ ಅವರ ಫೋಟೋ ಇಟ್ಟು ಪಕ್ಕದ ಸೀಟಿನಲ್ಲಿ ತಾವು ಕುಳಿತು ಸಿನಿಮಾ ವೀಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...