alex Certify ಅನೇಕ ರೋಗಗಳಿಗೆ ಮದ್ದು ಪ್ರೀತಿಯ ಅಪ್ಪುಗೆ, ತಬ್ಬಿಕೊಳ್ಳುವುದರಿಂದ ಆಗುತ್ತೆ ಇಷ್ಟೆಲ್ಲಾ ಲಾಭ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನೇಕ ರೋಗಗಳಿಗೆ ಮದ್ದು ಪ್ರೀತಿಯ ಅಪ್ಪುಗೆ, ತಬ್ಬಿಕೊಳ್ಳುವುದರಿಂದ ಆಗುತ್ತೆ ಇಷ್ಟೆಲ್ಲಾ ಲಾಭ……!

ಅಪ್ಪುಗೆ ನಮ್ಮ ಮನಸ್ಸಿಗೆ ಹಿತ ನೀಡುವಂತಹ ಪ್ರಕ್ರಿಯೆಗಳಲ್ಲೊಂದು. ಆತ್ಮೀಯರನ್ನ ತಬ್ಬಿಕೊಂಡಾಗ ನಮ್ಮಲ್ಲಿ ಆತ್ಮವಿಶ್ವಾಸ ಕೂಡ ಹೆಚ್ಚುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸವನ್ನು ವ್ಯಕ್ತಪಡಿಸುವ ರೀತಿ ಇದು. ಅಚ್ಚರಿಯ ಸಂಗತಿಯೆಂದರೆ ಈ ಆತ್ಮೀಯ ಅಪ್ಪುಗೆ ಅನೇಕ ಆರೋಗ್ಯ ಸಮಸ್ಯೆಗಳನ್ನೂ ನಿವಾರಿಸಬಲ್ಲದು. ಅನಾರೋಗ್ಯವನ್ನು ಸರಿಪಡಿಸಲು ಇದು ಒಂದು ರೀತಿಯ ಮ್ಯಾಜಿಕ್‌ ಟ್ರಿಕ್‌ ಇದ್ದಂತೆ. ತಬ್ಬಿಕೊಳ್ಳುವಿಕೆಯಿಂದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಅನ್ನೋದು ಸಂಶೋಧನೆಯಲ್ಲೂ ಸಾಬೀತಾಗಿದೆ.

ಒತ್ತಡ ನಿವಾರಣೆ: ಅಪ್ಪುಗೆಯಿಂದ ಒತ್ತಡ ನಿವಾರಣೆಯಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಅಪ್ಪುಗೆಯು ಆತಂಕ ಮತ್ತು ಖಿನ್ನತೆಯ ಸಮಸ್ಯೆಯನ್ನು ಸಹ ಕೊನೆಗೊಳಿಸುತ್ತದೆ. ಅಪ್ಪುಗೆಯು ಮೆದುಳಿಗೆ ಸಂಬಂಧಿಸಿದೆ ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದು ಒತ್ತಡವನ್ನು ಸಂತೋಷದ ಭಾವನೆಗಳಾಗಿ ಪರಿವರ್ತಿಸುತ್ತದೆ.

ರೋಗಗಳು ದೂರ ಉಳಿಯುತ್ತವೆ: ಜರ್ನಲ್ ಆಫ್ ಸೈಕಲಾಜಿಕಲ್ ಸೈನ್ಸ್‌ 400 ಜನರನ್ನು ಅಧ್ಯಯನಕ್ಕೆ ಒಳಪಡಿಸಿದೆ. ದೈನಂದಿನ ಅಪ್ಪುಗೆಗಳು ರೋಗಗಳ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತವೆ ಎಂಬುದು ಈ ವೇಳೆ ಸಾಬೀತಾಗಿದೆ. ಅಪ್ಪುಗೆಯಿಂದ  ರೋಗಗಳು ದೂರವಿರುತ್ತವೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ಅಪ್ಪುಗೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಪಬ್ಮೆಡ್ ಸೆಂಟ್ರಲ್ ಜರ್ನಲ್ ಪ್ರಕಾರ, ದಂಪತಿಗಳನ್ನು ಅಧ್ಯಯನಕ್ಕೊಳಪಡಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಕೆಲವು ಜೋಡಿಗಳಿಗೆ ಪರಸ್ಪರರ ಕೈಗಳನ್ನು 10 ನಿಮಿಷಗಳ ಕಾಲ ಹಿಡಿದುಕೊಳ್ಳುವಂತೆ ಕೇಳಲಾಯಿತು ಮತ್ತು ಕೆಲವರಿಗೆ 20 ಸೆಕೆಂಡುಗಳ ಕಾಲ ತಬ್ಬಿಕೊಳ್ಳುವಂತೆ ಸೂಚಿಸಲಾಗಿತು. ಈ ಮೂಲಕ ಅಪ್ಪುಗೆಯಿಂದ ಹೃದಯ ಬಡಿತ ನಿಯಂತ್ರಣ ಸಾಧ್ಯ ಎಂಬ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದಾರೆ.

ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ: ಈ ಅಧ್ಯಯನದಲ್ಲಿ ಕೇವಲ 20 ಸೆಕೆಂಡುಗಳ ಕಾಲ ಅಪ್ಪಿಕೊಳ್ಳುವುದರಿಂದ ರಕ್ತದೊತ್ತಡ ಸರಿಯಾದ ಮಟ್ಟಕ್ಕೆ ಬರುತ್ತದೆ ಎಂಬುದು ಸಾಬೀತಾಗಿದೆ. ಈ ಕಾರಣದಿಂದಾಗಿ ಹೃದಯದ ಆರೋಗ್ಯವು ಸುಧಾರಿಸುತ್ತದೆ.

ಅಪ್ಪುಗೆಯಿಂದ ಸಂತಸ : ಪರಸ್ಪರ ಅಪ್ಪಿಕೊಳ್ಳುವುದು ಆಕ್ಸಿಟೋಸಿನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಸಂತೋಷದ ಮಟ್ಟವೂ ಹೆಚ್ಚುತ್ತದೆ. ಪರಿಣಾಮ ನಮ್ಮ ಬದುಕು ಸುಧಾರಿಸುತ್ತದೆ.

ರೋಗನಿರೋಧಕ ಶಕ್ತಿ ಬಲವಾಗಿರುತ್ತದೆ: ಯಾರಾದರೂ ಒಬ್ಬರನ್ನೊಬ್ಬರು ತಬ್ಬಿಕೊಂಡರೆ, ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಅಪ್ಪಿಕೊಳ್ಳುವುದರಿಂದ ಮೆದುಳಿನ ಕಾರ್ಯ ಹೆಚ್ಚುತ್ತದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಅದರ ಪರಿಣಾಮವು ನಮ್ಮ ಮೇಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...