alex Certify ಅತಿಯಾಗಿ ʼಶುಂಠಿʼ ಸೇವಿಸುವ ಅಭ್ಯಾಸವಿದೆಯೇ ? ನಿಮ್ಮ ಆರೋಗ್ಯಕ್ಕಾಗಬಹುದು ಇಷ್ಟೆಲ್ಲಾ ಅಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾಗಿ ʼಶುಂಠಿʼ ಸೇವಿಸುವ ಅಭ್ಯಾಸವಿದೆಯೇ ? ನಿಮ್ಮ ಆರೋಗ್ಯಕ್ಕಾಗಬಹುದು ಇಷ್ಟೆಲ್ಲಾ ಅಪಾಯ

ಅನೇಕರಿಗೆ ಶುಂಠಿ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಶುಂಠಿ ಬೆರೆಸದ ಚಹಾವನ್ನೇ ಅವರು ಇಷ್ಟಪಡುವುದಿಲ್ಲ. ಇನ್ನು ಕೆಲವರು ಪ್ರತಿದಿನ ಮಲಗುವ ಮುನ್ನ ಶುಂಠಿ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡಿರ್ತಾರೆ.

ಚಹಾದ ರುಚಿಯನ್ನು ಹೆಚ್ಚಿಸುವ ಶುಂಠಿ ಅನಾನುಕೂಲಗಳನ್ನು ಸಹ ಹೊಂದಿದೆ. ಇದುವರೆಗೆ ಶುಂಠಿ ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾತ್ರ ನೀವು ಕೇಳಿರಬೇಕು. ಶುಂಠಿ ತಿನ್ನುವುದರಿಂದಾಗುವ ಅನಾನುಕೂಲಗಳ ಬಗ್ಗೆ ನಾವ್‌ ನಿಮಗೆ ಹೇಳ್ತೀವಿ.

ಎದೆಯುರಿ: ಶುಂಠಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಅದರಿಂದ ಅನೇಕ ಪ್ರಯೋಜನಗಳಿವೆ. ಆದರೆ ಅಗತ್ಯಕ್ಕಿಂತ ಹೆಚ್ಚು ಶುಂಠಿಯನ್ನು ತಿನ್ನುವುದರಿಂದ ಎದೆಯುರಿ, ಹೊಟ್ಟೆನೋವು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ರಕ್ತಸ್ರಾವ: ಶುಂಠಿಯನ್ನು ಚಳಿಗಾಲದಲ್ಲಿ ಹೆಚ್ಚು ತಿನ್ನುತ್ತೇವೆ. ಅದು ನಮ್ಮ ದೇಹವನ್ನು ಬೆಚ್ಚಗಿಡುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಇದು ಎಂಟಿ ಪ್ಲೇಟ್‌ಲೆಟ್‌ಗಳನ್ನು ಹೊಂದಿರುತ್ತದೆ. ಶುಂಠಿಯ ಈ ಗುಣಲಕ್ಷಣಗಳು ರಕ್ತಸ್ರಾವಕ್ಕೆ ಕಾರಣವಾಗಬಹುದು. ಇದಲ್ಲದೆ, ಅನೇಕ ಜನರು ಕರಿಮೆಣಸು, ಲವಂಗದಂತಹ ಮಸಾಲೆಗಳೊಂದಿಗೆ ಶುಂಠಿಯನ್ನು ತಿನ್ನುತ್ತಾರೆ. ಹಾಗೆ ಮಾಡಿದಾಗ ಅಪಾಯವು ಇನ್ನಷ್ಟು ಹೆಚ್ಚಾಗುತ್ತದೆ.

ಅತಿಸಾರ: ಶುಂಠಿಯನ್ನು ಅತಿಯಾಗಿ ಸೇವಿಸುವುದರಿಂದ ನಿಮ್ಮ ಕರುಳಿನ ಮೇಲೂ ಪರಿಣಾಮ ಬೀರಬಹುದು. ಇದರಿಂದ ಭೇದಿಯಾಗುವ ಸಾಧ್ಯತೆಯೂ ಹೆಚ್ಚುತ್ತದೆ. ಶುಂಠಿಯ ಸೇವನೆಯು ಜಠರಗರುಳಿನ ಕಾಯಿಲೆಗಳನ್ನು ಸಹ ಉಂಟು ಮಾಡಬಹುದು.

ಹೊಟ್ಟೆ ಉರಿ: ಶುಂಠಿಯನ್ನು ಮಿತವಾಗಿ ಮತ್ತು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಅದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಅತಿಯಾಗಿ ಸೇವಿಸಿದರೆ ಜೀರ್ಣಕ್ರಿಯೆಯನ್ನು ಕೆಡಿಸಬಹುದು. ಇದರ ಸೇವನೆಯಿಂದ ಹಲವು ರೀತಿಯ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳೂ ಬರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...