alex Certify ಅತಿದೊಡ್ಡ ʼಅಮಲುʼ ಯಾವುದು ಎಂದು ಕೇಳಿದ್ದಕ್ಕೆ ವರ ಹೇಳಿದ್ದೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿದೊಡ್ಡ ʼಅಮಲುʼ ಯಾವುದು ಎಂದು ಕೇಳಿದ್ದಕ್ಕೆ ವರ ಹೇಳಿದ್ದೇನು ಗೊತ್ತಾ..?

ಇತ್ತೀಚೆಗೆ ದೇಸಿ ವಿವಾಹದ ವಿಡಿಯೋಗಳು ಅಂತರ್ಜಾಲದಲ್ಲಿ ಬಿರುಗಾಳಿಯೆಬ್ಬಿಸಿವೆ. ದಿನಂಪ್ರತಿ ಮದುವೆಯ ವೈರಲ್ ವಿಡಿಯೋಗಳು ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿವೆ. ಎಲ್ಲರಿಗೂ ತಿಳಿದಿರುವಂತೆ ಭಾರತೀಯ ವಿವಾಹ ಕಾರ್ಯಕ್ರಮ ಸಾಮಾನ್ಯವಾಗಿ ಹಲವಾರು ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಒಳಗೊಂಡಿದೆ. ಇದರಲ್ಲಿ ಮೋಜು-ಮಸ್ತಿ, ನಗು, ತಮಾಷೆಯೂ ಇರುತ್ತದೆ. ಇದೀಗ ಇಂಥದ್ದೇ ವಿಡಿಯೋವೊಂದು ವೈರಲ್ ಆಗಿದೆ.

ಹೌದು, ವಧು-ವರ ಮಂಟಪದಲ್ಲಿ ಕುಳಿತು ಧಾರ್ಮಿಕ ಆಚರಣೆಗಳನ್ನು ಮಾಡುತ್ತಿರಬೇಕಾದ್ರೆ, ಪಂಡಿತರು ವರನಿಗೆ ಮಾದಕತೆ (ಅಮಲಿನ) ಬಗ್ಗೆ ತಮಾಷೆಯಾಗಿ ಪ್ರಶ್ನೆ ಕೇಳುತ್ತಾರೆ. ವರನ ಬಳಿ ಪಂಡಿತರು ಅತಿದೊಡ್ಡ ಅಮಲು ಯಾವುದು ಅಂತಾ ಕೇಳುತ್ತಾರೆ. ಈ ಪ್ರಶ್ನೆಗೆ ಸ್ವಲ್ಪವೂ ಯೋಚನೆ ಮಾಡದ ವರ ಊಟ ಅಂತಾ ಉತ್ತರಿಸುತ್ತಾನೆ. ವರನ ಉತ್ತರಕ್ಕೆ ವಧು ಸೇರಿದಂತೆ ಅಲ್ಲಿದ್ದವರೆಲ್ಲಾ ಗೊಳ್ಳನೆ ನಕ್ಕಿದ್ದಾರೆ.

ಮಕ್ಕಳ ಶೀತ-ಕೆಮ್ಮಿಗೆ ಇಲ್ಲಿದೆ ಸಿಂಪಲ್ ಮನೆ ಮದ್ದು

ಕಲ್ಯಾಣಿ ಲೈಫ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಹಾಸ್ಯ ಚಟಾಕಿ ಹಾರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...