alex Certify ‘ಅಖಂಡ’ ಬಿಡುಗಡೆಯಾಗಿ ಇಂದಿಗೆ 1 ವರ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಖಂಡ’ ಬಿಡುಗಡೆಯಾಗಿ ಇಂದಿಗೆ 1 ವರ್ಷ

ಬೊಯಪತಿ ಶ್ರೀನು ನಿರ್ದೇಶನದ ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ತೆರೆಮೇಲೆ ಬಂದು ಇಂದಿಗೆ 1 ವರ್ಷವಾಗಿದೆ.

ಈ ಸಂತಸವನ್ನು ನಟಿ ಪ್ರಗ್ಯಾ ಜೈಸ್ವಾಲ್ ತಮ್ಮ instagram ನಲ್ಲಿ ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರಿಗೂ ಧನ್ಯವಾದ ತಿಳಿಸಿದ್ದಾರೆ.

ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಅವರಿಗೆ ಜೋಡಿಯಾಗಿ ಪ್ರಗ್ಯಾ ಜೈಸ್ವಾಲ್ ಅಭಿನಯಿಸಿದ್ದು ಜಗಪತಿ ಬಾಬು, ನಿತಿನ್ ಮೆಹ್ತಾ, ಹಾಗೂ ಶ್ರೀಕಾಂತ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ 2ರಂದು ಬಿಡುಗಡೆಯಾಗಿದ್ದ ಅಖಂಡ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರವನ್ನು ದ್ವಾರಕ ಕ್ರಿಯೇಶನ್ ಬ್ಯಾನರ್ ನಡಿ ಮಿರ್ಯಾಲ ರವೀಂದ್ರ ರೆಡ್ಡಿ ನಿರ್ಮಾಣ ಮಾಡಿದ್ದರು. ತಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದರು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...