alex Certify ಅಕಾಲಿಕ ಮಳೆಗೆ ತತ್ತರಿಸಿದ ಕಲ್ಯಾಣ ಕರ್ನಾಟಕ; ಸಿಡಿಲಿಗೆ ಇಬ್ಬರು ಯುವಕರು ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕಾಲಿಕ ಮಳೆಗೆ ತತ್ತರಿಸಿದ ಕಲ್ಯಾಣ ಕರ್ನಾಟಕ; ಸಿಡಿಲಿಗೆ ಇಬ್ಬರು ಯುವಕರು ಬಲಿ

ಭಾನುವಾರದಂದು ಕಲ್ಯಾಣ ಕರ್ನಾಟಕದಲ್ಲಿ ಸುರಿದ ಅಕಾಲಿಕ ಮಳೆಗೆ ಜನ ತತ್ತರಿಸಿದ್ದು, ಜೊತೆಗೆ ಭಾರಿ ಗಾಳಿಯಿಂದ ಬೆಳೆ ಕೂಡ ಹಾನಿಯಾಗಿದೆ. ಸಿಡಿಲಿನ ಹೊಡೆತಕ್ಕೆ ಯುವಕರಿಬ್ಬರು ಬಲಿಯಾಗಿದ್ದು, ಎರಡು ಜಾನುವಾರುಗಳು ಸಹ ಸಾವನ್ನಪ್ಪಿವೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಾಟಾಪುರ ಗ್ರಾಮದ 28 ವರ್ಷದ ಲಕ್ಷ್ಮಣ ಮಲ್ಲಪ್ಪ ಅಂಬಿಗೇರ ಹಾಗೂ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬಂಕನೇರಿ ಗ್ರಾಮದ 21 ವರ್ಷದ ನಾಗರಾಜ ನಾಗೂರ ಸಿಡಿಲು ಬಡಿದು ಸಾವನಪ್ಪಿದ ನತದೃಷ್ಟರು.

ಬಿರುಗಾಳಿ, ಗುಡುಗು ಸಮೇತ ಸುರಿದ ಆಲಿಕಲ್ಲು ಮಳೆಗೆ ಹಲವು ಮರಗಳು ಉರುಳಿ ಬಿದ್ದಿದ್ದು, ಕೆಲವಡೆ ಬೆಳೆ ಸಹ ನಾಶವಾಗಿದೆ. ಅಲ್ಲದೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೇವಲಾಪುರ ಸರ್ಕಾರಿ ಪ್ರೌಢ ಶಾಲೆಯ ತಗಡಿನ ಛಾವಣಿ ನೆಲಕ್ಕುರುಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...