alex Certify ʼಸುರಕ್ಷಿತʼ ಲೈಂಗಿಕ ಜೀವನಕ್ಕೆ ಇಲ್ಲಿದೆ ಒಂದಿಷ್ಟು ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸುರಕ್ಷಿತʼ ಲೈಂಗಿಕ ಜೀವನಕ್ಕೆ ಇಲ್ಲಿದೆ ಒಂದಿಷ್ಟು ಟಿಪ್ಸ್

ಲೈಂಗಿಕ ಆನಂದ ಪಡೆಯುವುದು ಪ್ರತಿಯೊಬ್ಬರಿಗೂ ಮುಖ್ಯ. ಆದ್ರೆ ಸುರಕ್ಷಿತ ಹಾಗೂ ಆರೋಗ್ಯಕರ ಸಂಭೋಗಕ್ಕೆ ಮಹತ್ವ ನೀಡಬೇಕಾಗುತ್ತದೆ. ಅನೇಕ ಬಾರಿ ನಾವು ಮಾಡುವ ನಿರ್ಲಕ್ಷ್ಯಗಳು ಲೈಂಗಿಕ ರೋಗಕ್ಕೆ ಕಾರಣವಾಗುತ್ತದೆ. ಸುರಕ್ಷಿತ ಸಂಭೋಗಕ್ಕೆ ಪ್ರತಿಯೊಬ್ಬರೂ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಎಲ್ಲರಿಗೂ ತಿಳಿದಿರುವಂತೆ ಸುರಕ್ಷಿತ ಸಂಭೋಗಕ್ಕೆ ಕಾಂಡೋಮ್ ಬಹಳ ಮುಖ್ಯ. ಆದ್ರೆ ಕಾಂಡೋಮ್ ಬಗ್ಗೆ ಜ್ಞಾನವಿರಬೇಕು. ಒಂದೇ ಕಾಂಡೋಮ್ ಪದೇ ಪದೇ ಬಳಕೆ ಸಾಧ್ಯವಿಲ್ಲ. ದಿನಾಂಕ ಮುಗಿದ ಕಾಂಡೋಮ್ ಬಳಕೆ ಬೇಡ. ಹೊಸ ಕಾಂಡೋಮ್ ಬಳಕೆ ಮಾಡಬೇಕು.

ಮಾದಕ ವಸ್ತುಗಳನ್ನು ಸೇವಿಸಿದಾಗ, ಮದ್ಯ ಸೇವನೆ ಮಾಡಿದಾಗ ಸಂಭೋಗಕ್ಕೆ ಮುಂದಾಗಬೇಡಿ. ಮದ್ಯದ ನಶೆಯಲ್ಲಿ ಸುರಕ್ಷತೆ ಮರೆಯುತ್ತೀರಿ. ಒಮ್ಮೆ ಮಾಡಿದ ತಪ್ಪು ಜೀವನಪೂರ್ತಿ ನರಳುವಂತೆ ಮಾಡುವ ಸಾಧ್ಯತೆಗಳಿರುತ್ತವೆ.

ಸಂಭೋಗದಲ್ಲಿ ಪ್ರಯೋಗಗಳು ಆಗಬೇಕು. ಆದ್ರೆ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಆತುರದಲ್ಲಿ ತಪ್ಪುಗಳನ್ನು ಮಾಡಬೇಡಿ. ಇದು ಅಪಾಯಕ್ಕೆ ಆಹ್ವಾನ ನೀಡಬಹುದು.

ಯಾವುದಾದ್ರೂ ಲೈಂಗಿಕ ಸಮಸ್ಯೆ ನಿಮಗೆ ಶುರುವಾಗಿದ್ದರೆ ನಾಚಿಕೊಳ್ಳುವ ಅಗತ್ಯವಿಲ್ಲ. ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ನಿರ್ಲಕ್ಷ್ಯ ಆಪತ್ತಿಗೆ ಆಹ್ವಾನ ನೀಡಬಹುದು.

ನೀವು 26 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಎಚ್‌ಪಿವಿ ಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ವ್ಯಾಕ್ಸಿನೇಷನ್ ಉತ್ತಮವಾಗಿದೆ.

ಸಂಭೋಗದ ನಂತ್ರ ಶೌಚಾಲಯಕ್ಕೆ ಅವಶ್ಯವಾಗಿ ಹೋಗಿ. ಖಾಸಗಿ ಅಂಗವನ್ನು ಸಂಭೋಗದ ನಂತ್ರ ಸ್ವಚ್ಛಗೊಳಿಸಿಕೊಂಡರೆ ಲೈಂಗಿಕ ಸಮಸ್ಯೆಗಳು ಕಾಡುವುದಿಲ್ಲ. ಸೋಂಕು ಹರಡುವ ಅಪಾಯ ಕಡಿಮೆಯಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...