alex Certify ʼವಾಟ್ಸಾಪ್‌ʼ ನ ಹೊಸ ಫೀಚರ್‌ನಲ್ಲಿ ಮತ್ತೊಂದು ವೈಶಿಷ್ಟ್ಯತೆ; ಇಲ್ಲಿದೆ ಅದರ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಾಟ್ಸಾಪ್‌ʼ ನ ಹೊಸ ಫೀಚರ್‌ನಲ್ಲಿ ಮತ್ತೊಂದು ವೈಶಿಷ್ಟ್ಯತೆ; ಇಲ್ಲಿದೆ ಅದರ ಸಂಪೂರ್ಣ ವಿವರ

ವಾಟ್ಸಾಪ್‌ನಲ್ಲಿ ಆಗಾಗ ಒಂದಿಲ್ಲೊಂದು ಹೊಸ ಫೀಚರ್‌ಗಳು ಬರುತ್ತಲೇ ಇರುತ್ತವೆ. ಈಗ ಮತ್ತೊಂದು ಹೊಸ ಫೀಚರ್‌ ಅನ್ನು ಮೆಟಾ ಒಡೆತನದ ವಾಟ್ಸಾಪ್‌ ಅಳವಡಿಸ್ತಾ ಇದೆ. ಇದರ ಪ್ರಕಾರ ಬಳಕೆದಾರರು ಡೆಡ್‌ ಆಗಿರೋ ಅಂದ್ರೆ ಸಂಪೂರ್ಣ ಕಣ್ಮರೆಯಾಗಿರೋ ಮೆಸೇಜ್‌ಗಳನ್ನು ಕೂಡ ತಮ್ಮ ಅವಧಿ ಮುಗಿದ ನಂತರವೂ ವೀಕ್ಷಿಸಬಹುದು.

ಕಣ್ಮರೆಯಾಗುವ ಸಂದೇಶಗಳನ್ನು ಚಾಟ್ ಮಾಹಿತಿಯೊಳಗೆ ‘ಕೆಪ್ಟ್ ಮೆಸೇಜ್‌ಗಳು’ ಎಂಬ ಹೊಸ ವಿಭಾಗದಲ್ಲಿ ವೀಕ್ಷಿಸಬಹುದು. ಚಾಟಿಂಗ್‌ನಲ್ಲಿರುವ ಎಲ್ಲಾ ಬಳಕೆದಾರರು ಈ ವಿಭಾಗವನ್ನು ತೆರೆಯಬಹುದು. ಕಣ್ಮರೆಯಾಗುವ ಮೆಸೇಜ್‌ಗಳನ್ನು ನಿರ್ದಿಷ್ಟ ಚಾಟ್‌ನಲ್ಲಿ ಆನ್ ಮಾಡಿದಾಗ, ಅವುಗಳನ್ನು ಸ್ಟಾರ್‌ ವಿಭಾಗಕ್ಕೆ ಹಾಕಲಾಗುವುದಿಲ್ಲ, ಆದರೆ ಹಾಗೇ ಇರಿಸಬಹುದು.

ವಾಟ್ಸಾಪ್‌ನ ಈ ಹೊಸ ಫೀಚರ್‌ ಸದ್ಯ ಅಭಿವೃದ್ಧಿ ಹಂತದಲ್ಲಿದೆ. WhatsApp, ಡೆಸ್ಕ್‌ಟಾಪ್ ಬೀಟಾದ ಭವಿಷ್ಯದ ಅಪ್‌ಡೇಟ್‌ನಲ್ಲಿ ಕಣ್ಮರೆಯಾಗುತ್ತಿರುವ ಸಂದೇಶಗಳ ಅಪ್‌ಗ್ರೇಡ್ ಕುರಿತು ಕೆಲವು ಮಾಹಿತಿಯನ್ನು ನೀಡುವ ಮೂಲಕ ಹೊಸ ಫೀಚರ್‌ ಅನ್ನು ಪರಿಚಯಿಸಲು ಕಾರ್ಯನಿರ್ವಹಿಸುತ್ತಿದೆ. ಹೆಚ್ಚುವರಿಯಾಗಿ WhatsApp ಗ್ರೂಪ್‌ನ ಅಡ್ಮಿನ್‌ಗಳಿಗೆ ಈ ಫೀಚರ್‌ ಅನ್ನು ಮಿತಿಗೊಳಿಸಲು ಅವಕಾಶ ನೀಡುತ್ತದೆ. ಆದ್ದರಿಂದ ಗ್ರೂಪ್‌ ಅಡ್ಮಿನ್‌ಗಳು ಕಣ್ಮರೆಯಾಗುತ್ತಿರುವ ಸಂದೇಶವನ್ನು ಉಳಿಸಿಕೊಳ್ಳಲು ಅನುಮತಿಸುವ ಹೊಸ ಸೆಟ್ಟಿಂಗ್ ಇರುತ್ತದೆ.

ಈ ಫೀಚರ್‌ ಕೂಡ ಅಭಿವೃದ್ಧಿ ಹಂತದಲ್ಲಿದೆ, ಆದ್ದರಿಂದ ಬಳಕೆದಾರರಿಗೆ ಯಾವಾಗ ಇದು ಲಭ್ಯವಾಗಬಹುದು ಎಂಬುದು ಸ್ಪಷ್ಟವಾಗಿಲ್ಲ. ಅಡ್ಮಿನ್‌ಗಳನ್ನು ಹೊರತುಪಡಿಸಿ ಗ್ರೂಪ್‌ನ ಇತರರಿಗೆ ಸೂಚನೆ ನೀಡದೆ ಬಳಕೆದಾರರು ಮೌನವಾಗಿ ಗ್ರೂಪ್‌ ತೊರೆಯಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸಹ ವಾಟ್ಸಾಪ್ ಕಾರ್ಯನಿರ್ವಹಿಸುತ್ತಿದೆ. ಆದರೆ ಗುಂಪಿನ ಎಲ್ಲಾ ಸದಸ್ಯರು ಈ ಹಿಂದೆ ಯಾರ್ಯಾರು ಇದ್ದರು ಎಂಬುದನ್ನು ನೋಡಬಹುದು ಮತ್ತು ಯಾರು ಗುಂಪನ್ನು ತೊರೆಯುತ್ತಾರೆ ಎಂಬುದನ್ನು ಸಹ ನೋಡಲು ಈ ಫೀಚರ್‌ನಲ್ಲಿ ಸಾಧ್ಯವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...