alex Certify ʼಲಿವ್‌ ಇನ್‌ʼ ಸಂಬಂಧವನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಈ ವಿಷಯಗಳನ್ನು ನೆನಪಿನಲ್ಲಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಿವ್‌ ಇನ್‌ʼ ಸಂಬಂಧವನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಈ ವಿಷಯಗಳನ್ನು ನೆನಪಿನಲ್ಲಿಡಿ

ಶ್ರದ್ಧಾ ಕೊಲೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ಲಿವ್ ಇನ್ ರಿಲೇಶನ್ಷಿಪ್‌ಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಶ್ರದ್ಧಾಳನ್ನು 35 ತುಂಡು ಮಾಡಿ ಕೊಲೆ ಮಾಡಿದ ಭೀಕರತೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಶ್ರದ್ಧಾಳ ಲಿವ್‌ ಇನ್‌ ಪಾರ್ಟನರ್‌ ಅಫ್ತಾಬ್‌ ಈ ಕ್ರೌರ್ಯ ಎಸಗಿದ್ದಾನೆ. ಈ ಘಟನೆ ಬಗ್ಗೆ ತಿಳಿದ ಮೇಲೆ ಪ್ರತಿಯೊಬ್ಬರೂ ಲಿವ್‌ ಇನ್‌ ಸಂಬಂಧದ ಬಗ್ಗೆ ಆತಂಕ ಹೊರಹಾಕ್ತಿದ್ದಾರೆ.

ಈಗಾಗ್ಲೇ ಲಿವ್ ಇನ್ ಸಂಬಂಧದಲ್ಲಿ ಇರುವವರು, ಅಥವಾ ಭವಿಷ್ಯದಲ್ಲಿ ಅದೇ ರೀತಿ ಬದುಕಬೇಕೆಂದು ಎಂದುಕೊಂಡಿರುವವರು ಈ ಘಟನೆ ಬಳಿಕವಾದರೂ ಎಚ್ಚೆತ್ತುಕೊಳ್ಳಬೇಕು. ಲಿವ್‌ ಇನ್‌ ಅನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

1. ನೀವು ನಿಮ್ಮ ಸಂಗಾತಿಯೊಂದಿಗೆ ಲಿವ್ ಇನ್ ಸಂಬಂಧದಲ್ಲಿದ್ದರೆ ಅಥವಾ ಹಾಗಿರಲು ಬಯಸಿದರೆ ಮೊದಲು ಈ ಬಗ್ಗೆ ನಿಮ್ಮ ಕುಟುಂಬಕ್ಕೆ ತಿಳಿಸಿ. ಕುಟುಂಬದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.

2. ನಿಮ್ಮ ಸಂಗಾತಿಯೊಂದಿಗೆ ವಾಸಿಸುತ್ತಿರುವಾಗಲೂ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡುತ್ತಿರಿ. ಕುಟುಂಬದಲ್ಲಿ ಯಾವುದೇ ರೀತಿಯ ವೈಮನಸ್ಸು ಇದ್ದರೆ, ನಿಮ್ಮ ಸಂಬಂಧದ ಬಗ್ಗೆ ಕೆಲವು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿರಿ. ನಿಮ್ಮ ಸಂಗಾತಿಯ ತಪ್ಪುಗಳನ್ನು ನಿರ್ಲಕ್ಷಿಸುವ ಬದಲು, ಅವರೊಂದಿಗೆ ಮಾತನಾಡಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ.

3. ನಿಮ್ಮ ಸಂಗಾತಿಯ ಬಗ್ಗೆ ಯಾವುದೇ ಸಂದೇಹವಿದ್ದಲ್ಲಿ, ಖಂಡಿತವಾಗಿಯೂ ನಿಮ್ಮ ಆತ್ಮೀಯರಿಗೆ ತಿಳಿಸಿ. ಅಥವಾ ಕುಟುಂಬ ಸದಸ್ಯರೊಂದುಗೆ ಹಂಚಿಕೊಳ್ಳಿ. ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳಾಗಿದ್ದರೆ ಅದನ್ನು ಮುಚ್ಚಿಡದೇ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಸಂಗಾತಿಯು ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದನ್ನು ಗಮನಿಸಿ, ಮಾತನಾಡಿ ಬಗೆಹರಿಸಲು ಪ್ರಯತ್ನಿಸಿ. ಲಿವ್‌ ಇನ್‌ ಸಂಬಂಧವನ್ನು ಉಳಿಸಿಕೊಳ್ಳುವ ಹೆಣಗಾಟದಲ್ಲಿ ನಿಮ್ಮ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿಕೊಳ್ಳಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...