alex Certify ʼಯಕ್ಷಗಾನʼಕ್ಕೂ ಕಾಲಿಟ್ಟ ಪುಷ್ಪ; ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಕಲಾವಿದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಯಕ್ಷಗಾನʼಕ್ಕೂ ಕಾಲಿಟ್ಟ ಪುಷ್ಪ; ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಕಲಾವಿದ

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಸಿನಿಮಾ ತನ್ನ ರೋಮಾಂಚನಕಾರಿ ಸಂಭಾಷಣೆಗಳು ಮತ್ತು ಆಕರ್ಷಕ ಹಾಡುಗಳಿಂದ ಎಲ್ಲರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಸಾಮಾಜಿಕ ಮಾಧ್ಯಮದ ತುಂಬಾ ಪುಷ್ಪಾ ಜ್ವರ ಆವರಿಸಿಕೊಂಡಿದೆ. ಹಾಡುಗಳಿಗೆ ಡಾನ್ಸ್ ಮಾಡುವ ವಿಡಿಯೋ, ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಗಂಡುಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನದಲ್ಲೂ ಕೂಡ ಈ ಹಾಡಿನ ಝಲಕ್ ಗೆ ಕಲಾವಿದ ಹೆಜ್ಜೆ ಹಾಕಿರೋ ವಿಡಿಯೋ ವೈರಲ್ ಆಗಿದೆ.

ಯಕ್ಷಗಾನ ಕಲಾವಿದರು ತಮ್ಮ ವೇಷಭೂಷಣಗಳನ್ನು ಧರಿಸಿ, ವೇದಿಕೆಯ ಮೇಲೆ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ, ಭಾಗವತರು ಶ್ರೀವಲ್ಲಿ ಹಾಡನ್ನು ಹಾಡಲು ಪ್ರಾರಂಭಿಸಿದ್ದಾರೆ. ಒಮ್ಮೆ ಭಾಗವತರ ಕಡೆಗೆ ತಿರುಗಿದ ಕಲಾವಿದ ನಂತರ ಹೆಜ್ಜೆ ಹಾಕುತ್ತಿದ್ದಂತೆ ಸಹ-ಕಲಾವಿದರು ಮತ್ತು ಪ್ರೇಕ್ಷಕರು ನಗೆಗಡಲಲ್ಲಿ ತೇಲಿದ್ದಾರೆ.

ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಸಾವಿರಾರು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ವಿಡಿಯೋ ಜನರನ್ನು ರಂಜಿಸಿದ್ದು, ಕಾಮೆಂಟ್ ವಿಭಾಗದಲ್ಲಿ ನಗುವಿನ ಎಮೋಜಿಯನ್ನು ತುಂಬಿದ್ದಾರೆ. ಇನ್ನೂ ಕೆಲವರು ಯಕ್ಷಗಾನದಲ್ಲಿ ಸಿನಿಮಾ ಹಾಡನ್ನು ಹಾಕಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...