alex Certify ʼಮನ್‌ ಕಿ ಬಾತ್‌ʼ ನಲ್ಲಿ ಅನಿಸಿಕೆ ಹಂಚಿಕೊಳ್ಳಲು ಸಾರ್ವಜನಿಕರಿಗೆ ಪ್ರಧಾನಿ ಆಹ್ವಾನ; ಇಲ್ಲಿದೆ ಈ ಕುರಿತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮನ್‌ ಕಿ ಬಾತ್‌ʼ ನಲ್ಲಿ ಅನಿಸಿಕೆ ಹಂಚಿಕೊಳ್ಳಲು ಸಾರ್ವಜನಿಕರಿಗೆ ಪ್ರಧಾನಿ ಆಹ್ವಾನ; ಇಲ್ಲಿದೆ ಈ ಕುರಿತ ಮಾಹಿತಿ

ಮನ್ ಕಿ ಬಾತ್ ಸಂಚಿಕೆಯಲ್ಲಿ ಪ್ರೇರಣೆಯಾಗಬಲ್ಲ ವಿಷಯಗಳು ಮತ್ತು ಚಿಂತನೆಗಳನ್ನು ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕರೆ ನೀಡಿದ್ದಾರೆ. ಈ ಬಗ್ಗೆ ಪ್ರಧಾನಿ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

MyGov ಮತ್ತು Namo App ಮೂಲಕ ಸಾರ್ವಜನಿಕರು ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಬಹುದು. ಅಥವಾ 1800-11-7800 ಸಂಖ್ಯೆಗೆ ಕರೆ ಮಾಡಿ ತಮ್ಮ ಸಂದೇಶವನ್ನು ರೆಕಾರ್ಡ್‌ ಮಾಡಬಹುದಾಗಿದೆ. ಮನ್ ಕಿ ಬಾತ್‌ನ 88ನೇ ಸಂಚಿಕೆ ಎಪ್ರಿಲ್‌ 24ಕ್ಕೆ ಪ್ರಸಾರವಾಗಲಿದೆ.

ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳಲು ಪ್ರಧಾನಿ ಜನರನ್ನು ಆಹ್ವಾನಿಸಿದ್ದಾರೆ. ತಳಮಟ್ಟದಲ್ಲಿದ್ದುಕೊಂಡೇ ಬದಲಾವಣೆಗೆ ನಾಂದಿ ಹಾಡುವವರ ಅಸಾಧಾರಣ ಸಾಹಸಗಳನ್ನು ನಾವು ಮನ್ ಕಿ ಬಾತ್ ಮೂಲಕ ಶ್ಲಾಘಿಸುತ್ತೇವೆ. ಅಂತಹ ಸ್ಪೂರ್ತಿದಾಯಕ ಜೀವನ ಪ್ರಯಾಣಗಳು ನಿಮಗೆ ತಿಳಿದಿದೆಯೇ? ಇದ್ದರೆ ಈ ತಿಂಗಳ ಕಾರ್ಯಕ್ರಮಕ್ಕಾಗಿ ಅದನ್ನು ಹಂಚಿಕೊಳ್ಳಿ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಬಹು ಮುಖ್ಯವಾದ ವಿಷಯಗಳು, ಸಮಸ್ಯೆಗಳ ಕುರಿತು ಜನರ ಆಲೋಚನೆಗಳನ್ನು ಹಂಚಿಕೊಳ್ಳಲು ಪ್ರಧಾನಿ ಎದುರು ನೋಡುತ್ತಿದ್ದಾರೆ. ಮನ್ ಕಿ ಬಾತ್‌ನ 88 ನೇ ಸಂಚಿಕೆಯಲ್ಲಿ ಪ್ರಧಾನಿ ಮಾತನಾಡಬೇಕಾದ ವಿಷಯಗಳ ಕುರಿತು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ ಅಂತಾ MyGov ಆಪ್‌ ನಲ್ಲೂ ಉಲ್ಲೇಖಿಸಲಾಗಿದೆ. ಹಿಂದಿ ಅಥವಾ ಇಂಗ್ಲಿಷ್‌ ಯಾವ ಭಾಷೆಯಲ್ಲಿ ಬೇಕಾದರೂ ನಿಮ್ಮ ಅನಿಸಿಕೆಗಳನ್ನು ರೆಕಾರ್ಡ್‌ ಮಾಡಬಹುದು. ಇದರಲ್ಲಿ ಆಯ್ದ ಭಾಗ ಮನ್‌‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ.

ಇಲ್ಲವಾದಲ್ಲಿ 1922ಗೆ ಮಿಸ್ಡ್‌ ಕಾಲ್‌ ಕೊಡಿ. ಎಸ್‌ ಎಂ ಎಸ್‌ ಮೂಲಕ ನಿಮ್ಮನ್ನು ತಲುಪುವ ಲಿಂಕ್‌ ಸಹಾಯದಿಂದ ನೇರವಾಗಿ ನಿಮ್ಮ ಸಂದೇಶವನ್ನು ಪ್ರಧಾನಿಗೆ ತಲುಪಿಸಬಹುದು. ಮನ್‌ ಕಿ ಬಾತ್‌, ರೇಡಿಯೋ ಕಾರ್ಯಕ್ರಮ. ಪ್ರತಿ ತಿಂಗಳ ಕೊನೆಯ ಭಾನುವಾರ ಆಲ್‌ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗುತ್ತದೆ. ಮನ್‌ ಕಿ ಬಾತ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳ ಜೊತೆ ಸಂಭಾಷಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...