alex Certify ʼಪ್ರೇಮಿಗಳ ದಿನʼದಂದು ಗೆಳತಿ ಮನೆ ಬಾಗಿಲು ಬಡಿದ 5ರ ಪೋರ..! ಮುದ್ದಾದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪ್ರೇಮಿಗಳ ದಿನʼದಂದು ಗೆಳತಿ ಮನೆ ಬಾಗಿಲು ಬಡಿದ 5ರ ಪೋರ..! ಮುದ್ದಾದ ವಿಡಿಯೋ ವೈರಲ್

ಪ್ರೇಮಿಗಳ ದಿನ ಬಂತೆಂದ್ರೆ ಸಾಕು ಪ್ರಪಂಚದೆಲ್ಲೆಡೆ ಪ್ರೇಮಿಗಳಿಗೆ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ತನ್ನ ಪ್ರೇಮಿಗೆ ಸರ್ಪೈಸ್ ಕೊಡಲು ಪ್ರತಿಯೊಬ್ಬರು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ, ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕನೊಬ್ಬ ತನ್ನ ಗೆಳತಿಗೆ ಪ್ರೇಮಿಗಳ ದಿನದ ಶುಭಾಶಯ ಹೇಳಿದ್ದಾನೆ. ಈ ಮುದ್ದಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಐದು ವರ್ಷದ ಬಾಲಕನೊಬ್ಬ ಪ್ರೇಮಿಗಳ ದಿನದಂದು ಬಾಲಕಿ ಮನೆಗೆ ಸರ್ಪ್ರೈಸ್ ಭೇಟಿ ನೀಡಿದ್ದಾನೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಕೇಕ್ ನಂತೆ ಸೇಲ್ ಆಗುತ್ತಿದ್ದು, ಟಿಕ್‌ಟಾಕ್‌ನಲ್ಲಿ 32 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಆಂಥೋನಿ ಎಂಬ ಬಾಲಕ ಕಪ್ಪು ಸೂಟ್‌ ಧರಿಸಿ, ಕೈಯಲ್ಲಿ ಹೂವಿನ ಬೊಕೆ ಹಾಗೂ ಆಟಿಕೆ ಹಿಡಿದು ಬಾಲಕಿ ಲೈಲಾ ಮನೆಯ ಬಾಗಿಲು ಬಡಿದಿದ್ದಾನೆ. ಲೈಲಾ ತಂದೆ ಬಾಗಿಲು ತೆರೆಯುತ್ತಿದ್ದಂತೆಯೇ, ಬಾಲಕ ಲೈಲಾಳನ್ನು ಕರೆದಿದ್ದಾನೆ. ಈ ವೇಳೆ ಮನೆಯ ಒಳಗಿದ್ದ ಬಾಲಕಿ ತನ್ನ ತಾಯಿಯ ಜೊತೆ ಬಾಗಿಲ ಬಳಿ ಬಂದಿದ್ದಾಳೆ.

ಬಾಲಕಿ ಬಂದದ್ದೇ ತಡ ಹಾಯ್ ಲೈಲಾ ಎಂದು ಮುದ್ದಾಗಿ ಕರೆದಿದ್ದಾನೆ. ನಂತರ ಆಕೆಗೆ ಪ್ರೇಮಿಗಳ ದಿನದ ಶುಭಾಶಯ ತಿಳಿಸಿದ್ದಾನೆ. ಜೊತೆಗೆ ಹೂವಿನ ಬೊಕೆ ಹಾಗೂ ಆಟಿಕೆಯನ್ನು ಬಾಲಕಿಗೆ ನೀಡಿದ್ದಾನೆ. ಲೈಲಾ ನಾಚಿಕೆಯಿಂದಲೇ ಆತನ ಬಳಿ ನಗೆ ಬೀರಿದ್ದಾಳೆ. ಬಳಿಕ ಆಂಥೋನಿಗೆ ಧನ್ಯವಾದ ತಿಳಿಸುವ ಸಲುವಾಗಿ ಆತನನ್ನು ತಬ್ಬಿಕೊಳ್ಳುತ್ತಾಳೆ.

ನ್ಯೂಯಾರ್ಕ್‌ನ ಶೆಲ್ಬಿ ಸ್ಮಾಲ್ ತನ್ನ ಪುತ್ರನ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮುದ್ದಾದ ವಿಡಿಯೋ ನೋಡಿದ ನೆಟ್ಟಿಗರು ಪ್ರೀತಿಯಿಂದ ಶುಭಹಾರೈಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...