alex Certify ʼದ್ರಾಕ್ಷಿʼ ಸೇವಿಸಿ ಅನೇಕ ರೋಗಗಳಿಂದ ಮುಕ್ತಿ ಪಡೆಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼದ್ರಾಕ್ಷಿʼ ಸೇವಿಸಿ ಅನೇಕ ರೋಗಗಳಿಂದ ಮುಕ್ತಿ ಪಡೆಯಿರಿ

What Are Grapes? Benefits, Risks, Types, How to Grow, More | Everyday Health

ದ್ರಾಕ್ಷಿ ಹಣ್ಣು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತೆ. ಸಿಹಿಯಾಗಿರುವ ಈ ದ್ರಾಕ್ಷಿಯಲ್ಲಿ ಸಕ್ಕರೆ ಅಂಶವಿರುವುದಿಲ್ಲ. ಸೋಡಿಯಂ, ಪೊಟ್ಯಾಷಿಯಮ್, ಸಿಟ್ರಿಕ್ ಆಸಿಡ್, ಮೆಗ್ನೀಷಿಯಮ್, ಕಬ್ಬಿಣ ಸೇರಿದಂತೆ ಸಾಕಷ್ಟು ಪೋಷಕಾಂಶಗಳು ಇದ್ರಲ್ಲಿರುತ್ತವೆ.

ದ್ರಾಕ್ಷಿ ಹಣ್ಣನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಸಾಕಷ್ಟು ಪ್ರಯೋಜನಗಳಿವೆ. ಕೆಲವೊಂದು ಖಾಯಿಲೆಗಳಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿ ತಿನ್ನುವುದು ಬೆಸ್ಟ್.

ಮೈಗ್ರೇನ್ ಅಂದ್ರೆ ಅರ್ಧ ತಲೆ ನೋವನ್ನು ಸಹಿಸಿಕೊಳ್ಳೋದು ಕಷ್ಟ. ದ್ರಾಕ್ಷಿ ಹಣ್ಣಿನ ಜ್ಯೂಸ್ ಮೈಗ್ರೇನ್ ನೋವನ್ನು ಕಡಿಮೆ ಮಾಡುತ್ತದೆ.

ರಕ್ತ ಹೀನತೆಯಿಂದ ಬಳಲುವವರು ದ್ರಾಕ್ಷಿ ಹಣ್ಣನ್ನು ತಿನ್ನಬೇಕು. ರಕ್ತ ಹೀನತೆಯನ್ನು ಆದಷ್ಟು ಬೇಗ ಕಡಿಮೆ ಮಾಡುವ ಕೆಲಸವನ್ನು ದ್ರಾಕ್ಷಿ ಮಾಡುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿಯನ್ನು ತಿನ್ನಿ.

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವವರು ಪ್ರತಿದಿನ ದ್ರಾಕ್ಷಿ ತಿನ್ನಬೇಕು. ಇದು ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ.

ಕ್ಯಾನ್ಸರ್ ಹಾಗೂ ರಕ್ತಸ್ರಾವ ತಡೆಯಲು ದ್ರಾಕ್ಷಿ ಬೆಸ್ಟ್. ದ್ರಾಕ್ಷಿ ರಸಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿ ಕುಡಿಯುವುದ್ರಿಂದ ರಕ್ತಸ್ರಾವದಲ್ಲಾದ ಸುಸ್ತು ಕಡಿಮೆಯಾಗಿ ಶರೀರದಲ್ಲಿ ರಕ್ತ ಉತ್ಪತ್ತಿ ಹೆಚ್ಚಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...