alex Certify ʼಆರೋಗ್ಯʼ ಹಾಗೂ ಸಂತೋಷಕ್ಕೆ ಪ್ರತಿ ದಿನ ಬೆಳಿಗ್ಗೆ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆರೋಗ್ಯʼ ಹಾಗೂ ಸಂತೋಷಕ್ಕೆ ಪ್ರತಿ ದಿನ ಬೆಳಿಗ್ಗೆ ಮಾಡಿ ಈ ಕೆಲಸ

How to make running a habit for longer than the lockdown

ಉತ್ತಮ ಆರೋಗ್ಯ ಹಾಗೂ ಮಾನಸಿಕ ಸಂತೋಷಕ್ಕೆ ವ್ಯಾಯಾಮ ಬಹಳ ಮುಖ್ಯ. ವ್ಯಾಯಾಮವನ್ನು ದಿನದ ಯಾವ ಸಮಯದಲ್ಲಾದ್ರೂ ಮಾಡಬಹುದು. ಆದ್ರೆ ಬೆಳಿಗ್ಗೆ ಮಾಡುವ ವ್ಯಾಯಾಮಕ್ಕೆ ವಿಶೇಷತೆಗಳಿವೆ. ಕೆಲವೊಂದು ವ್ಯಾಯಾಮಗಳನ್ನು ಬೆಳಿಗ್ಗೆ ಮಾಡಿದಲ್ಲಿ ದಿನಪೂರ್ತಿ ನೀವು ಖುಷಿಯಾಗಿ, ಶಕ್ತಿ ತುಂಬಿದಂತೆ ಚಟುವಟಿಕೆಯಿಂದಿರುತ್ತೀರಾ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಕೆಲವೊಂದು ವ್ಯಾಯಾಮಗಳನ್ನು ತಪ್ಪದೆ ಮಾಡುವುದು ಒಳ್ಳೆಯದು.

ಬಹು ಮುಖ್ಯವಾಗಿ ಬೆಳಗ್ಗೆ ಜಾಗಿಂಗ್ ಮಾಡಬೇಕು. ಜಾಗಿಂಗ್ ಅಥವಾ ವೇಗದ ನಡಿಗೆ ಮಾಡುವುದರಿಂದ ದೇಹದಲ್ಲಿ ತಾಜಾತನ ಮತ್ತು ಉಲ್ಲಾಸವನ್ನು ಹೆಚ್ಚಿಸುತ್ತದೆ.

ಸೂರ್ಯ ನಮಸ್ಕಾರವನ್ನು ಬೆಳಿಗ್ಗೆ ಮಾಡುವುದು ಒಳ್ಳೆಯದು. ಪ್ರಾಣಾಯಾಮವನ್ನು ಕೂಡ ನೀವು ಮಾಡಬಹುದು. ಪ್ರಶಾಂತವಾದ ಹಾಗೂ ಗಾಳಿಯಾಡುವ ಪ್ರದೇಶದಲ್ಲಿ ಪ್ರಾಣಾಯಾಮ ಮಾಡಿದಲ್ಲಿ ಶ್ವಾಸಕೋಶ ತೊಂದರೆ ನಿವಾರಣೆಯಾಗುತ್ತದೆ.

ಹಗ್ಗದಾಟ ಅಥವಾ ಜಂಪ್ ಮಾಡುವ ವ್ಯಾಯಾಮ ಬೆಳಿಗ್ಗೆ ಒಳ್ಳೆಯದು. ಇದು ಶಕ್ತಿಯನ್ನು ಹೆಚ್ಚಿಸುತ್ತದೆ.

ವ್ಯಾಯಾಮ ಮಾಡಲು ಆಗದಿದ್ದವರು ಡಾನ್ಸ್ ಮಾಡಬಹುದು. ಬೆಳಿಗ್ಗೆ ಡಾನ್ಸ್ ಮಾಡಿದಲ್ಲಿ ದೇಹ ದಣಿಯುವ ಜೊತೆಗೆ ಹಿತವೆನಿಸುತ್ತದೆ. ಮನಸ್ಸು ಹಾಗೂ ದೇಹದ ಆರೋಗ್ಯ ವೃದ್ಧಿಸುತ್ತದೆ. ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...