alex Certify ಪ್ರೀತಿ ಪಾತ್ರರಿಗೆ ಪ್ರೇಮ ನಿವೇದನೆ ಮಾಡಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿ ಪಾತ್ರರಿಗೆ ಪ್ರೇಮ ನಿವೇದನೆ ಮಾಡಲು ಇಲ್ಲಿದೆ ಟಿಪ್ಸ್

ಈಗ ಹೇಗೂ ನಾವು ವ್ಯಾಲೆಂಟೈನ್​ ವಾರದಲ್ಲಿ ಇದ್ದೇವೆ. ಈಗಾಗಲೇ ಪ್ರೇಮದ ಬಲೆಗೆ ಬಿದ್ದವರು ಈ ವಾರವನ್ನ ಸಂಭ್ರಮಿಸ್ತಾ ಇದ್ರೆ ಇನ್ನು ಕೆಲವರು ತಮ್ಮ ಪ್ರೀತಿ ಪಾತ್ರರ ಬಳಿ ಎಲ್ಲಿ ಯಾವಾಗ ಮತ್ತು ಹೇಗೆ ಪ್ರೇಮ ನಿವೇದನೆ ಮಾಡಬೇಕು ಅನ್ನೋ ಗೊಂದಲದಲ್ಲೇ ಇದ್ದಾರೆ. ಪ್ರೇಮ ನಿವೇದನೆ ಮಾಡಲು ಪ್ರಾಶಸ್ತ್ಯ ಸ್ಥಳವನ್ನ ನೀವು ಹುಡುಕುತ್ತಾ ಇದ್ದಿದ್ರೆ ಇಲ್ಲಿರುವ ಕೆಲ ಸ್ಥಳಗಳು ನಿಮಗೆ ಸಹಾಯವಾಗಬಲ್ಲವು.

ನಿಮ್ಮ ಪ್ರೀತಿ ಪಾತ್ರರು ಟ್ರೆಕ್ಕಿಂಗ್​ ಪ್ರಿಯರಾಗಿದ್ರೆ ನಿಮ್ಮಷ್ಟು ಭಾಗ್ಯವಂತರು ಮತ್ತೊಬ್ಬರಿಲ್ಲ. ಯಾಕಂದ್ರೆ ಕಾಡಿನ ಹಾದಿಯಲ್ಲಿ ನೀವು ಯಾವುದೇ ಏಕಾಂತಕ್ಕೆ ಭಂಗ ತರುವ ಘಟನೆಗಳು ನಡೆಯೋದಿಲ್ಲವಾದ್ದರಿಂದ ಧೈರ್ಯವಾಗಿ ಪ್ರೇಮ ನಿವೇದನೆ ಮಾಡಬಹುದಾಗಿದೆ.‌

ದೋಣಿ ವಿಹಾರ ಕೂಡ ಪ್ರೇಮ ನಿವೇದನೆಗೆ ಉತ್ತಮ ಆಯ್ಕೆಯಾಗಿದೆ. ಸುಂದರ ಮನೋಹರ ದೃಶ್ಯದ ನಡುವೆ ನೀವು ನಿಮ್ಮ ಪ್ರೀತಿ ಪಾತ್ರರ ಜೊತೆ ಗುಣಮಟ್ಟದ ಸಮಯವನ್ನ ಕಳೆಯಬಹುದಾಗಿದೆ. ಆದರೆ ಆದಷ್ಟು ದೋಣಿ ವಿಹಾರದ ವೇಳೆ ನಿಮ್ಮ ಎಚ್ಚರಿಕೆಯಲ್ಲಿ ಇರೋದನ್ನ ಮರೆಯಬೇಡಿ.

ಲಾಂಗ್​ ಡ್ರೈವ್​​ಕ್ಕಿಂತ ಬೆಸ್ಟ್​ ಆಯ್ಕೆ ಇನ್ನೊಂದು ಯಾವುದಿದೆ ಹೇಳಿ..? ಈಗಾಗಲೇ ಅನೇಕರು ಲಾಂಗ್​ ಡ್ರೈವ್​ ಹೋಗಿಯೇ ಪ್ರೀತಿಪಾತ್ರರ ಮನ ಗೆಲ್ಲೋವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೆ ಇನ್ಯಾಕೆ ತಡ ನೀವು ಕೂಡ ಟ್ರಾಫಿಕ್​ ಕಡಿಮೆ ಇರುವ ಸ್ಥಳವನ್ನ ಆಯ್ಕೆ ಮಾಡ್ಕೊಂಡು ಪ್ರೀತಿ ಪಾತ್ರರ ಜೊತೆ ಉತ್ತಮ ಸಮಯ ಕಳೆಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...