alex Certify ನಿಮ್ಮ ಪ್ರೀತಿ ಪಾತ್ರರಿಗೆ ಲವ್​ ಸಿಗ್ನಲ್​ ಕೊಡೋಕೆ ಇಲ್ಲಿವೆ ನೋಡಿ ಕೆಲ ಪ್ಲಾನ್​ಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಪ್ರೀತಿ ಪಾತ್ರರಿಗೆ ಲವ್​ ಸಿಗ್ನಲ್​ ಕೊಡೋಕೆ ಇಲ್ಲಿವೆ ನೋಡಿ ಕೆಲ ಪ್ಲಾನ್​ಗಳು

ಇವರೇ ನಮ್ಮ ಬಾಳಸಂಗಾತಿ ಅಂತಾ ನಿರ್ಧರಿಸಿದ ಮೇಲೆ ಅವರ ಎದುರು ಹೋಗಿ ಪ್ರೇಮ ನಿವೇದನೆ ಮಾಡೋದು ಬಲು ಕಷ್ಟದ ಕೆಲಸ. ಅದರಲ್ಲೂ ಐ ಲವ್​ ಯೂ ಅಂತಾ ಹೇಳೋಕೆ ಧೈರ್ಯ ಎಷ್ಟಿದ್ದರೂ ಸಾಲದು. ಕೆಲವೊಬ್ಬರಿಗೆ ಬಾಯಿ ಮಾತಲ್ಲಿ ಪ್ರೇಮ ನಿವೇದನೆ ಮಾಡೋಕೆ ಇಷ್ಟವಿರಲ್ಲ. ಅಂತವರು ಐ ಲವ್ ಯೂ ಅಂತಾ ಹೇಳದೇಯೇ ನಿಮ್ಮ ಪ್ರೀತಿ ಪಾತ್ರರಿಗೆ ಲವ್​ ಸಿಗ್ನಲ್​ ಕೊಡೋಕೆ ಕೆಲ ಪ್ಲಾನ್​ಗಳು ಇಲ್ಲಿವೆ ನೋಡಿ.

ಸ್ವಲ್ಪ ಮಟ್ಟಿಗಾದರೂ ಫ್ಲರ್ಟ್​ ಮಾಡೋದನ್ನ ರೂಢಿ ಮಾಡಿಕೊಳ್ಳಿ: ಹಾಗಂತ ಒಂದೇ ಸಲ ಫ್ಲರ್ಟ್ ಮಾಡೋಕೆ ಆರಂಭಿಸಿ ವ್ಯಕ್ತಿತ್ವ ಹಾಳು ಮಾಡಿಕೊಳ್ಳಬೇಡಿ. ಈ ವಿಚಾರದಲ್ಲಿ ನೀವು ಅಂಬೆಗಾಲನ್ನ ಇಡಬೇಕು. ಆದಷ್ಟು ನಿಮ್ಮ ಪ್ರೀತಿಪಾತ್ರರನ್ನ ಹೊಗಳುತ್ತಿರಿ. ಅವರಿಗೆ ಜಗತ್ತಲ್ಲೇ ನಿಮಗಿಂತ ಸುಂದರ ಹಾಗೂ ವಿಶೇಷ ವ್ಯಕ್ತಿ ಯಾರೂ ಇಲ್ಲ ಎಂಬ ಭಾವನೆಯನ್ನ ಮೂಡಿಸಿ.

ಯಾವಾಗಲು ಎನರ್ಜಿಯಿಂದಿರಿ : ನಿಮ್ಮ ಪ್ರೀತಿ ಪಾತ್ರರಿಗೆ ಎಂದಿಗೂ ತಡವಾಗಿ ರಿಪ್ಲೈ ಮಾಡಬೇಡಿ. ಬೇಗ ಬೇಗ ರಿಪ್ಲೈ ಮಾಡೋದ್ರಿಂದ ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಮೂಡುತ್ತೆ. ನಿಮಗೆ ಅವರೇ ನಿಮ್ಮ ಮೊದಲ ಆದ್ಯತೆ ಅನ್ನೋದನ್ನ ಸಾಬೀತು ಮಾಡಿ ತೋರಿಸಿ.

ನಿಕ್​ ನೇಮ್​ ಇಡಿ : ನಿಕ್​ ನೇಮ್​ ಇಟ್ಟು ನಿಮ್ಮ ಪ್ರೀತಿ ಪಾತ್ರರನ್ನ ಕರೆಯೋದ್ರಿಂದ ಅವರಿಗೆ ಸ್ಪೆಶಲ್​ ಭಾವನೆ ಮೂಡುತ್ತೆ. ಅಲ್ಲದೇ ನಿಮ್ಮ ಇತಿಹಾಸ, ವೈಯಕ್ತಿಕ ಜೀವನ, ಸಿಕ್ರೇಟ್​ಗಳನ್ನ ಶೇರ್​ ಮಾಡಿದ್ರೂ ಕೂಡ ನಿಮಗೆ ಅವರ ಮೇಲೆ ಆಸಕ್ತಿ ಇದೆ ಎಂದು ಸೂಚಿಸುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...