alex Certify ಮನೆ ಕೆಲಸವನ್ನು ನಿಮಿಷದಲ್ಲಿ ಮಾಡಿ ಮುಗಿಸುತ್ತೆ ಈ ರೋಬೋಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಕೆಲಸವನ್ನು ನಿಮಿಷದಲ್ಲಿ ಮಾಡಿ ಮುಗಿಸುತ್ತೆ ಈ ರೋಬೋಟ್

ಅಡುಗೆ, ಕಚೇರಿ ಕೆಲಸದ ಜೊತೆ ಮನೆ ಕ್ಲೀನಿಂಗ್ ಮಹಿಳೆಯರಿಗೆ ದೊಡ್ಡ ತಲೆ ನೋವಿನ ಕೆಲಸ. ಪ್ರತಿ ದಿನ ಮನೆ ಸ್ವಚ್ಛಗೊಳಿಸಿ ಅನೇಕರು ಬೇಸರಗೊಂಡಿರುತ್ತಾರೆ. ಇನ್ಮುಂದೆ ಮನೆ ಕೆಲಸಕ್ಕೆ ತಲೆಗೆಡಿಸಿಕೊಳ್ಳಬೇಕಾಗಿಲ್ಲ. ರೋಬೋಟ್ ನಿಮ್ಮ ಮನೆ ಕ್ಲೀನಿಂಗ್ ಕೆಲಸವನ್ನು ಸುಲಭಗೊಳಿಸಲಿದೆ.

ರೋಬೋಟ್ ಬ್ರಾಂಡ್ ಮಿಲಾಗ್ರೊ ದೇಶದಲ್ಲಿ ಮೂರು ಹೊಸ ಮಹಡಿ ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಬಿಡುಗಡೆ ಮಾಡಿದೆ. ಮಿಲಾಗ್ರೊ ಐಮ್ಯಾಪ್ ಮ್ಯಾಕ್ಸ್, ಮಿಲಾಗ್ರೊ ಐಮ್ಯಾಪ್ 10.0 ಮತ್ತು ಮಿಲಾಗ್ರೊ ಸೀಗಲ್ ಸೇರಿವೆ. ಈ ರೊಬೊಟಿಕ್ ವ್ಯಾಕ್ಯೂಮ್ ಕ್ಲೀನರ್ ತುಂಬಾ ಸರಳವಾಗಿದೆ.

ಮಿಲಾಗ್ರೊ ಸೀಗಲ್ ಬೆಲೆ 19,990 ರೂಪಾಯಿ. ಮಿಲಾಗ್ರೊ ಐಮ್ಯಾಪ್ ಮ್ಯಾಕ್ಸ್  ಬೆಲೆ 99,990 ರೂಪಾಯಿ. ಇದು ವಾಟರ್ ಟ್ಯಾಂಕ್ ನೊಂದಿಗೆ ಬರುತ್ತದೆ. ಮಿಲಾಗ್ರೊ ಐಮ್ಯಾಪ್ 10.0 ಬೆಲೆ 89990 ರೂಪಾಯಿ.

ಮಿಲಾಗ್ರೊ ಸೀಗಲ್ ನೆಲವನ್ನು ಸ್ವಚ್ಛಗೊಳಸಿತ್ತದೆ. 800 ರಿಂದ 900 ಚದರ ಅಡಿ ವಿಸ್ತೀರ್ಣದ ಮನೆಗಳನ್ನು ಸ್ವಚ್ಛಗೊಳಿಸಲು ಸೂಕ್ತ. ಇದ್ರ ಬ್ಯಾಟರಿ ಬ್ಯಾಕಪ್ ಕಡಿಮೆ. ಕಾರ್ಪೆಟನ್ನು ಕೂಡ ಇದು ಸ್ವಚ್ಛಗೊಳಿಸುತ್ತದೆ. ಇದನ್ನು ಸ್ಮಾರ್ಟ್ಫೋನ್ ಗಳ ಮೂಲಕ ನಿಯಂತ್ರಿಸಬಹುದು. ತಮ್ಮ ಅನುಕೂಲಕ್ಕೆ ತಕ್ಕಂತೆ ಗ್ರಾಹಕರು ಈ ಮೂರು ವ್ಯಾಕ್ಯೂಮ್ ಕ್ಲೀನರ್ ನಲ್ಲಿ ಒಂದನ್ನು ಖರೀದಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...